ಟಗರು ಕಾಳಗದ ಕಲಿ ಕಮಲಾಪುರದ ಜಂಗ್ಲಿ ಇನ್ನಿಲ್ಲ: ಪದಕಗಳ ರಣಬೇಟೆಗಾರ
ಉತ್ತರ ಕರ್ನಾಟಕ ಭಾಗದ ಟಗರಿನ ಕಾಳಗದಲ್ಲಿ ಭಾಗವಹಿಸಿ ಪ್ರತಿ ಬಾರಿಯೂ ಪ್ರಶಸ್ತಿ ಪಡೆಯುತ್ತಿದ್ದ ಧಾರವಾಡ ಕಮಲಾಪುರದ ಜಂಗ್ಲಿ ಸೋಮವಾರ ಕೊನೆ ಉಸಿರು ಎಳೆದಿದೆ.
ಧಾರವಾಡ (ಜು.03) ಉತ್ತರ ಕರ್ನಾಟಕ ಭಾಗದ ರೈತರ ಕ್ರೀಡೆ ಟಗರಿನ ಕಾಳಗ ಈ ಕ್ರೀಡೆಯಲ್ಲಿ ಭಾಗವಹಿಸಿ ಪ್ರತಿ ಬಾರಿಯೂ ಪ್ರಶಸ್ತಿ ಪಡೆಯುತ್ತಿದ್ದ ಧಾರವಾಡ ಕಮಲಾಪುರದ ಜಂಗ್ಲಿ ಎಂದೇ ಖ್ಯಾತಿ ಪಡೆದಿರುವ ಟಗರು ಸೋಮವಾರ ಕೊನೆ ಉಸಿರು ಎಳೆದಿದೆ.
ಮನೆ ಮಗನಂತೆ ಸಾಕಿದ್ದ ಟಗರು ಇಂದು ನಮ್ಮೊಂದಿಗೆ ಇಲ್ಲ ಎಂದು ಕುಟುಂಬದ ಸದಸ್ಯರು ಗೋಳಾಡುತ್ತಾ ಅಂತ್ಯ ಸಂಸ್ಕಾರಕ್ಕೆ ತಮ್ಮ ಮನೆಯ ಹೊಲದಲ್ಲಿ ವ್ಯವಸ್ಥೆ ಮಾಡಿದ್ದಾರೆ. ಸತತ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಕಷ್ಟು ಪ್ರಶಂಸೆ ಪಡೆದಿದ್ದ ಕಮಲಾಪುರ ಜಂಗ್ಲಿ ಟಗರು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಟಗರು. ಅದರ ಅಗಲಿಕೆಯಿಂದ ಜನರು ಸಹ ಕಣ್ಣೀರು ಹಾಕಿದ ದೃಶ್ಯ ಕಂಡು ಬಂತು.
Bengaluru: ಭ್ರಷ್ಟ ಅಧಿಕಾರಿ ಅಜಿತ್ ರೈ ಮನೆಯಲ್ಲಿ ಸಿಕ್ಕಿದ್ದೇನು?
ಉತ್ತರ ಕರ್ನಾಟಕದ ಪ್ರಸಿದ್ಧ ಕ್ರೀಡೆಗಳಲ್ಲಿ ಕುಸ್ತಿ, ಕೋಳಿ ಕಾಳಗ ಹಾಗೂ ಟಗರು ಕಾಳಗವೂ ಸೇರಿದೆ. ಜೊತೆಗೆ, ಹೋರಿಗಳನ್ನು ಬಿಟ್ಟು ಕರಿ ಹರಿಯುವುದು ಕೂಡ ಒಂದು ಹಬ್ಬವಾಗಿದೆ. ಇನ್ನು ಈ ಭಾಗದಲ್ಲಿ ನಡೆಯುತ್ತಿದ್ದ ಯಾವುದೇ ಹಬ್ಬಗಳು, ಜಾತ್ರೆಗಳು ಹಾಗೂ ಉರುಸುಗಳನ್ನು ಆಯೋಜಿಸುತ್ತಿದ್ದ ಕಾಳಗದಲ್ಲಿ ಕಮಲಾಪುರದ ಜಂಗ್ಲೀ ಟಗರು ಬಂತೆಂದರೆ ಅದರ ಮುಂದೆ ಯಾವ ಹೊಸ ಟಗರುಗಳು ಕೂಡ ಎದುರು ನಿಲ್ಲುತ್ತಿರಲಿಲ್ಲ. ಹಾಗಾಗಿ, ಕಮಲಾಪುರದ ಜಂಗ್ಲಿ ಕಾಳಗಕ್ಕೆ ಇಳಿದನೆಂದರೆ ಒಂದು ಪದಕ ಹಾಗೂ ಪ್ರಶಸ್ತಿಯ ಮೊತ್ತ ಮಾಲೀಕನಿಗೆ ಲಭ್ಯವೆಂದೇ ಹೇಳಲಾಗುತ್ತಿತ್ತು.
ಟಗರಿನ ಮೇಲೆ ವಿಶೇಷ ಕಾಳಜಿ: ಇನ್ನು ಸಾಮಾನ್ಯವಾರಿ ರೈತಾಪಿ ಜನರ ಮನೆಯಲ್ಲಿ ಯಾವುದೇ ಸಾಕು ಪ್ರಾಣಿಗಳನ್ನು ತಮ್ಮ ಮನೆ ಮಗನಂತೆಯೇ ನೋಡಿಕೊಳ್ಳುತ್ತಾರೆ. ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಕೋಳಿ, ಕುರಿ, ಮೇಕೆ, ಹಸುಗಳು ಇತ್ಯಾದಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಸಾಕುತ್ತಿರುತ್ತಾರೆ. ಇನ್ನು ಕಾಳಗದ ಟಗರು ಕಮಲಾಪುರದ ಜಂಗ್ಲಿಯನ್ನೂ ಮನೆಯ ಸದಸ್ಯರು ತಮ್ಮ ಮನೆ ಮಗನಂತೆ ಸಾಕಿದ್ದರು. ಹೀಗಾಗಿ, ದಿನಂಪ್ರತೀ ಒಬ್ಬರಿಂದ ಇಬ್ಬರು ಜಂಗ್ಲಿಯನ್ನು ಕಾಳಜಿ ಮಾಡುತ್ತಿದ್ದರು. ಆದರೆ, ಪ್ರೀತಿಯ ಟಗರು ಸಾವಿನ ಹಿನ್ನೆಲೆಯಲ್ಲಿ ಕುಟುಂಬ ಸೇರಿ, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದತ್ತು.
ಗಮನ ಸೆಳೆದ ಮಹಿಳಾ ಜಗಜಟ್ಟಿಗಳ ಸೆಣೆಸಾಟ: ತುಮಕೂರು (ಜು.03): ಮತ್ತೊಂದೆಡೆ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮಹಿಳಾ ಜಗಜೆಟ್ಟಿಗಳ ಕಾಳಗ ಕಣ್ಮನ ಸೆಳೆಯಿತು. ಆಂಜನೇಯ ಜಾತ್ರೆ ಪ್ರಯುಕ್ತವಾಗಿ ಆಯೋಜಿಸಲಾಗಿದ್ದ ಕುಸ್ತಿ ಸ್ಪರ್ಧೆಯಲ್ಲಿ ಮಹಿಳೆಯರಿಗೆ ಹಾಗೂ ಪುರುಷ ವಿಭಾಗದಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಲಾಗಿತ್ತು. ಜಾತ್ರೆಯಲ್ಲಿ ಮಹಿಳಾ ಸ್ಪರ್ಧಿಗಳು ಕೂಡ ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರು. ಇದರಿಂದ ಚಿಕ್ಕನಾಯಕನಹಳ್ಳಿ ಜನರಿಗೆ ಕುಸ್ತಿ ಸ್ಪರ್ಧೆ ಮನೋರಂಜನೆ ನೀಡಿದೆ.
ಹೊನ್ನಾವರ: ಶಿಲಾಯುಗದ ನಿಲುಸುಗಲ್ಲು ಪತ್ತೆ ಮಾಡಿದ ಹಂಪಿ ವಿವಿ ಸಂಶೋಧನಾ ವಿದ್ಯಾರ್ಥಿ
ವಿವಿಧ ಜಿಲ್ಲೆಗಳಿಂದ ಆಗಮನ: ಚಿತ್ರದುರ್ಗ, ಶಿವಮೊಗ್ಗ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಬಂದಿದ್ದ ಕುಸ್ತಿ ಪಟುಗಳು. ಐನೂರರಿಂದ 5 ಸಾವಿರದ ವರೆಗೂ ಬಹುನ ಇಡಲಾಗಿತ್ತು. ಕುಸ್ತಿ ಪಂದ್ಯಾವಳಿ ನೋಡಲು ಜಿಲ್ಲೆಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಆಗಮಿಸಿದ್ದರು. ಉತ್ತರ ಭಾರತದಲ್ಲಿ ಮಾತ್ರ ಮಹಿಳಾ ಕುಸ್ತಿಪಟುಗಳು ಪ್ರಸಿದ್ಧಿ ಆಗಿದ್ದರು. ಈಗ ಕರ್ನಾಟಕದಲ್ಲಿಯೂ ಮಹಿಳಾ ಕುಸ್ತಿಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲು ಲಭ್ಯವಾಗಿದೆ. ಜೊತೆಗೆ, ಜಾತ್ರೆಗಳು ಹಾಗೂ ಹಬ್ಬದ ಸಮಾರಂಭಗಳಿಗೂ ಮಹಿಳಾ ಕುಸ್ತಿಪಟುಗಳು ಭಾಗವಹಿಸುತ್ತಿರುವುದು ಸಂಸತದ ವಿಚಾರವಾಗಿದೆ.