Bengaluru: ಭ್ರಷ್ಟ ಅಧಿಕಾರಿ ಅಜಿತ್ ರೈ ಮನೆಯಲ್ಲಿ ಸಿಕ್ಕಿದ್ದೇನು? ನಗ, ನಾಣ್ಯ, ಲಕ್ಸುರಿ ವಸ್ತುಗಳು ನೋಡಿ..
ಬೆಂಗಳೂರಿನ ತಹಸೀಲ್ದಾರ್ ಅಜಿತ್ ಕುಮಾರ್ ರೈ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ ನಡೆದು ಮೂರು ದಿನಗಳ ಬಳಿಕ ಅವರ ಮನೆಯಲ್ಲಿ ಏನೇನು ಸಿಕ್ಕಿದೆ ಎಂಬುದರ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು (ಜು.02): ಬೆಂಗಳೂರಿನ ತಹಸೀಲ್ದಾರ್ ಅಜಿತ್ ಕುಮಾರ್ ರೈ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ ನಡೆದು ಮೂರು ದಿನಗಳ ಬಳಿಕ ಅವರ ಮನೆಯಲ್ಲಿ ಏನೇನು ಸಿಕ್ಕಿದೆ ಎಂಬುದರ ಸಂಪೂರ್ಣ ಮಾಹಿತಿ ಲಭ್ಯವಾಗಿದೆ. ಕಡುಭ್ರಷ್ಟ ಅಧಿಕಾರಿ ಅಜಿತ್ ರೈ ಮನೆಯಲ್ಲಿ ನಗ, ನಾಣ್ಯ, ನಗದು, ಬಂಗಾರ, ಬೆಳ್ಳಿ, ಬ್ರಾಂಡೆಡ್ ಐಟಮ್ಸ್ ಹಾಗೂ ಲಕ್ಸುರಿ ಜೀವನದ ವಸ್ತುಗಳ ಪಟ್ಟಿ ಇಲ್ಲಿದೆ ನೋಡಿ..
ಕೇವಲ ಕೆಎಎಸ್ ಅಧಿಕಾರಿ ಆಗಿರುವ ಅಜಿತ್ ರೈ ಅವರು ಜೀವಮಾನವಿಡೀ ಪ್ರತಿ ತಿಂಗಳಿಗೆ 1 ಲಕ್ಷ ರೂ.ನಂತೆ ಕೆಲಸ ಮಾಡಿದರೂ 40 ವರ್ಷದಲ್ಲಿ 5 ಕೋಟಿ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಆದರೆ, ಅಜಿತ್ ರೈ ಕೆಲಸಕ್ಕೆ ಸೇರಿ ಕೆಲವೇ ವರ್ಷಗಳಲ್ಲಿ ಆಸ್ತಿ ಮೌಲ್ಯ ಹಾಗೂ ಐಷಾರಾಮಿ ಜೀವನವನ್ನು ನೋಡಿದರೆ ಎಂಥವರಿಗೂ ಭ್ರಷ್ಟಾಚಾರ ಮಾಡಿರುವುದರ ಬಗ್ಗೆ ವಾಸನೆ ಬಾರದಿರದು. ಲೋಕಾಯುಕ್ತರ ದಾಳಿಯಿಂದ ಅವರ ಮನೆಯಲ್ಲಿರುವ ವಸ್ತುಗಳ ಮೌಲ್ಯವೇ ಕೋಟಿ ಕೋಟಿ ಹಣವನ್ನು ಮೀರಿಸಿದೆ. ಇವರ ಐಷಾರಾಮಿ ಜೀವನ ಯಾವ ಬ್ಯುಸಿನೆಸ್ ಮ್ಯಾನ್‌ಗಿಂತಲೂ ಕಮ್ಮಿಯೇನಿಲ್ಲ.
250 ಎಕರೆ ಭೂಮಿ ಖರೀದಿಸಿರುವ ಅಜಿತ್ ರೈ : ಅಂಡರ್‌ವಲ್ಡ್ ಕ್ರಿಮಿ ಮಾನ್ವಿತ್ ರೈ ಜೊತೆ ನಂಟು ?
ಒಬ್ಬ ಸಾಮಾನ್ಯ ಸರ್ಕಾರಿ ನೌಕರ ಇಷ್ಟೆಲ್ಲ ಹೇಗೆ ಗಳಿಸಿದ್ದಾರೆ ಎಂಬ ತನಿಖೆಯನ್ನು ಲೋಕಾಯುಕ್ತರು ಆರಂಭಿಸಿದ್ದು, ಇನ್ನಷ್ಟೇ ಮಾಹಿತಿ ಹೊರಬೀಳಲಿದೆ. ಇನ್ನು ಮನೆಯಲ್ಲಿ ಸಿಕ್ಕಿದ ಲಕ್ಸುರಿ ವಸ್ತುಗಳನ್ನ ಕಂಡು ಅಧಿಕಾರಿಗಳೆ ಥಂಡಾ ಹೊಡೆದಿದ್ದಾರೆ. ಬ್ರಾಂಡೆಡ್ ವಾಚ್ ಗಳು, ಸಾವಿರಾರು ರೂಪಾಯಿ ಬೆಲೆಬಾಳುವ ಚಪ್ಪಲಿಗಳು, ಪತ್ತೆಯಾಗಿವೆ. ಇನ್ನು ಮನೆಯ ಗೃಹೋಪಯೋಗಿ ವಸ್ತುಗಳು, ಮೇಜು, ಪೀಠೋಪಕರಣ, ಟಿವಿ, ಲ್ಯಾಪ್‌ಟಾಪ್, ಜಿಮ್ ಇಕ್ವಿಪ್‌ಮೆಂಟ್ ಎಸಿ ಎಲ್ಲವೂ ಅತ್ಯಂತ ದುಬಾರಿ ಮತ್ತು ಬ್ರ್ಯಾಂಡೆಡ್ ಆಗಿವೆ.
- ಗೃಹೋಪಯೋಗಿ ವಸ್ತುಗಳು ಪಟ್ಟಿ ಹೀಗಿದೆ ನೋಡಿ:
- ಅಜಿತ್ ರೈ ಅವರ ಮನೆಯ ಹಾಲ್ ನಲ್ಲಿ ಬರೋಬ್ಬರಿ 4.53 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
- ಸ್ಮಾರ್ಟ್ ಟಿವಿ, ಹೋಂ ಥಿಯೇಟರ್, ಸೋಪ ಸೆಟ್ ಸೇರಿ 4.53 ಲಕ್ಷ ಮೌಲ್ಯದ ವಸ್ತುಗಳು.
- ಮಕ್ಕಳ ಸ್ಟಡಿ ರೂಂ ನಲ್ಲಿ 3.81 ಲಕ್ಷ ಮೌಲ್ಯದ ವಸ್ತುಗಳು.
- ಜಿಮ್ ಎಕ್ವಿಪ್ಮೆಂಟ್ಸ್, ಲ್ಯಾಪ್ ಟಾಪ್, ಯೋಗ ಮ್ಯಾಟ್ ಸೇರಿ ಸುಮಾರು 35 ತರದ ವಸ್ತುಗಳು.
- ಇಬ್ಬರು ಮಕ್ಕಳ ಬೆಡ್ ರೂಂ ನಲ್ಲಿ 1.26 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ ಬರೆ, ಬ್ಯಾಗ್ ಗಳು.
- ತಹಸೀಲ್ದಾರ್ ಬೆಡ್ ರೂಂನಲ್ಲಿ 4.28 ಲಕ್ಷ ಮೌಲ್ಯದ ವಸ್ತುಗಳು.
- ಎಸಿ, ಟಿವಿ, ಬಟ್ಟೆ ಬರೆ ಬ್ಯಾಗ್ ಗಳು ಸೇರಿ 4.28 ಲಕ್ಷ ಮೌಲ್ಯದ ವಸ್ತುಗಳು.
- ಡೈನಿಂಗ್ ಹಾಲ್ ಮತ್ತು ಅಡುಗೆ ಕೋಣೆಯಲ್ಲಿ 5.83 ಲಕ್ಷ ಮೌಲ್ಯದ ವಸ್ತುಗಳು.
- ಹಾಗೂ 50 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುಗಳು.
ಕೆಜಿಗಟ್ಟಲೆ ಚಿನ್ನ-ಬೆಳ್ಳಿ: ಅಜಿತ್ ರೈ ಮನೆಯಲ್ಲಿ ಸಿಕ್ಕಿದ್ದು 795 ಗ್ರಾಂ ಚಿನ್ನಾಭರಣ ಲಭ್ಯವಾಗಿದೆ. ಒಂದು ಕಡಗ 100 ಗ್ರಾಂ, 183 ಗ್ರಾಂ ತೂಕದ ಚೈನ್, 108 ಗ್ರಾಂ ಲಾಂಗ್ ಚೈನ್, ಮುತ್ತಿನ ಹಾರ, ಉಂಗುರ, ಬ್ರಾಸ್ ಲೇಟ್ ಸೇರಿ 795 ಗ್ರಾಂ ಚಿನ್ನಾಭರಣ ಪತ್ತೆಯಾಗಿವೆ. ಅದೇ ರೀತಿ 7 ಕೆ.ಜಿ. 520 ಗ್ರಾಂ ಬೆಳ್ಳಿ ವಸ್ತುಗಳು ಲಭ್ಯವಾಗಿವೆ. ಬೆಳ್ಳಿ ಲೋಟ, ದೀಪ, ತಟ್ಟೆ, ದೊಡ್ಡ ದೀಪಗಳು, ಬೆಳ್ಳಿ ಚಮಚ ಸೇರಿ ಮೂರು ಲಕ್ಷ ಮೌಲ್ಯದ ಹಲವು ವಸ್ತುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
27 ಬ್ರ್ಯಾಂಡೆಡ್ ವಾಚ್‌ಗಳು, 16 ಐಷಾರಾಮಿ ಫೋನ್‌ಗಳು ಲಭ್ಯ: 7.63 ಲಕ್ಷ ಮೌಲ್ಯದ ವಾಚ್ ಗಳು ಅಜಿತ್ ಮನೆಯಲ್ಲಿ ಪತ್ತೆಯಾಗಿವೆ. ಮೂರು ರ್ಯಾಡೋ, ಮೆಸಾರಿಟಿ, ಟೈಟಾನ್, ಟೆಸ್ಲಾಟ್, ಸಿಕೋ ಕಂಪನಿಯ ದುಬಾರಿ ಬೆಲೆಯ 27 ವಾಚ್ ಗಳು ಲಭ್ಯವಾಗಿವೆ. ಜೊತೆಗೆ, ಅಜಿತ್ ರೈ ಹಾಗೂ ಪತ್ನಿ ಹೆಸರಲ್ಲಿ ಮೂರು ಬ್ಯಾಂಕ್ ಖಾತೆಗಳು ಲಭ್ಯವಾಗಿವೆ. ಇನ್ನು ಅಜಿತ್ ರೈ ಮನೆಯಲ್ಲಿ ಒಟ್ಟು 16 ಮೊಬೈಲ್ ಫೋನ್ ಪತ್ತೆಯಾಗಿವೆ. 16 ರಲ್ಲಿ 9 ಬಳಕೆಯಲ್ಲಿರದ ಪೋನ್ ಗಳು ಹಾಗೂ ಬಾಕಿ 7 ಫೋನ್ ಬಳಕೆಯಲ್ಲಿದ್ದು ಒಟ್ಟು ಮೌಲ್ಯ 7 ಲಕ್ಷ ರೂ. ಮೌಲ್ಯವಾಗಿದೆ. ಚಾಲನೆಯಲ್ಲಿ ಇರದ ಪೋನ್ ಹೊರತುಪಡಿಸಿ ಐದು ಪೋನ್ ಸೀಜ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು.
ವಿರೋಧ ಪಕ್ಷದ ನಾಯಕನಿಲ್ಲದೇ ಅಧಿವೇಶನ: ನಾಳೆ ದೆಹಲಿಯಿಂದ ಬಿಜೆಪಿ ವೀಕ್ಷಕರ ಆಗಮನ
ದೇಶದ ಬಹುತೇಕ ಬ್ರ್ಯಾಂಡೆಡ್ ಶೂಗಳು, ಚಪ್ಪಲಿಗಳು ಪತ್ತೆ: ಮನೆಯ ಎಂಟ್ರಿಯಲ್ಲೆ ಇತ್ತು ದುಬಾರಿ ಬೆಲೆಯ ಶೂಗಳು. ವಿವಿಧ ಕಂಪನಿಗಳ ಬ್ರಾಂಡೆಡ್ ಶೂಗಳು ಪತ್ತೆಯಾಗಿವೆ. ಸುಮಾರು 70 ಸಾವಿರ ಮೌಲ್ಯದ ಶೂಗಳು, ಪೂಮಾ, ಡಾವಿಂಚಿ, ರೋಸೊ ಬ್ರೊನೆಲೋ, ಲೂಯಿಸ್ ವಿಟ್ಟನ್ ಹಾಗೂ ವುಡ್ಸ್ ಕಂಪನಿಯ ಶೂಗಳು ಲಭ್ಯವಾಗಿವೆ. 11 ಜೊತೆ ಶೂ, ಆರು ಜೊತೆ ಚಪ್ಪಲಿಗಳು ಪತ್ತೆಯಾಗಿವೆ.
ಸದ್ಯ ಎಲ್ಲಾ ವಸ್ತುಗಳ ಪಂಚನಾಮೆ ಮಾಡಿದ ಲೋಕಾಯುಕ್ತ ಅಧಿಕಾರಿಗಳು. ಇಬ್ಬರು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಪಂಚನಾಮೆ ಮಾಡಿ ಮಹಜರು ಮಾಡಿದ್ದಾರೆ. ಕೆಲವು ಅಗತ್ಯ ವಸ್ತುಗಳನ್ನ ವಶಕ್ಕೆ ಪಡೆದು ಉಳಿದವುಗಳನ್ನು ವಾಪಸ್ ನೀಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಿಂದ ಈ ಬಗ್ಗೆ ಕೂಲಂಕಷ ತನಿಖೆ ಮಾಡಲಾಗುತ್ತದೆ.