ಹೊನ್ನಾವರ: ಶಿಲಾಯುಗದ ನಿಲುಸುಗಲ್ಲು ಪತ್ತೆ ಮಾಡಿದ ಹಂಪಿ ವಿವಿ ಸಂಶೋಧನಾ ವಿದ್ಯಾರ್ಥಿ
ಸುಮಾರು ಕ್ರಿ.ಪೂ.2500 ವರ್ಷಗಳ ಹಿಂದಿನ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ನಿಲುಸುಗಲ್ಲನ್ನು ಹೊನ್ನಾವರ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಶೋಧನ ವಿದ್ಯಾರ್ಥಿ ಸುಬ್ರಹ್ಮಣ್ಯ ಮಂಜುನಾಥ ಆಚಾರಿ ಪತ್ತೆ ಮಾಡಿದ್ದಾರೆ.
ಕಾರವಾರ (ಜು.3) ಸುಮಾರು ಕ್ರಿ.ಪೂ.2500 ವರ್ಷಗಳ ಹಿಂದಿನ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ನಿಲುಸುಗಲ್ಲನ್ನು ಹೊನ್ನಾವರ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಶೋಧನ ವಿದ್ಯಾರ್ಥಿ ಸುಬ್ರಹ್ಮಣ್ಯ ಮಂಜುನಾಥ ಆಚಾರಿ ಪತ್ತೆ ಮಾಡಿದ್ದಾರೆ.
ಈಚೆಗೆ ಹಿರೇಬೈಲು ಗ್ರಾಮದಲ್ಲಿ ಕೈಗೊಂಡ ಕ್ಷೇತ್ರಕಾರ್ಯ ಅಧ್ಯಯನ ಸಂದರ್ಭದಲ್ಲಿ ಈ ಅಪರೂಪದ ನಿಲುಸುಗಲ್ಲು ಕಂಡುಬಂದಿದೆ. ಹಿರೇಬೈಲಿನ ಶಂಭುಲಿಂಗೇಶ್ವರ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ರಾಜು ನಾಯ್ಕ ಎಂಬುವರ ಜಮೀನು ಬಳಿ ಸೇತುವೆ ಎಡಭಾಗದಲ್ಲಿ ಈ ನಿಲುಸುಗಲ್ಲುಗಳು ಪತ್ತೆಯಾಗಿವೆ.
ಉತ್ತಮೇಶ್ವರ: 14ನೇ ಶತಮಾನದಷ್ಟು ಹಳೆಯ ವೀರಗಲ್ಲು ಪತ್ತೆ!
ಮಾಧ್ಯಮದವರೊಂದೊಗೆ ಮಾತನಾಡಿದ ಸುಬ್ರಹ್ಮಣ್ಯ ಆಚಾರಿ ಅವರು, ಈ ನಿಲುಸುಗಲ್ಲು ಎಂಟು ಅಡಿ ಎತ್ತರ ಹಾಗೂ ಒಂದು ಅಡಿ ಅಗಲವಿದ್ದು, ತುದಿಯಲ್ಲಿ ಚೂಪಾಗಿದ್ದು ತುಸು ಪೂರ್ವಕ್ಕೆ ಬಾಗಿದೆ. ಅದರ ಪಕ್ಕದಲ್ಲೇ ಮೂರು ಅಡಿ ಎತ್ತರದ ಮತ್ತೊಂದು ನಿಲುಸುಗಲ್ಲು ಕೂಡ ಇದೆ. ಬೃಹತ್ ಶಿಲಾಯುಗದ ಜನ ಶವ ಸಂಸ್ಕಾರ ಮಾಡಿ ಆ ಸ್ಥಳದಲ್ಲಿ ನೈಸರ್ಗಿಕವಾಗಿ ದೊರೆಯುವ ಉದ್ದನೆಯ ಕಲ್ಲನ್ನು ಲಂಬವಾಗಿ ನಿಲ್ಲಿಸುತ್ತಿದ್ದರು. ಇವುಗಳನ್ನು ಜನ ನಿಲುಸುಗಲ್ಲು ಎಂದು ಕರೆಯುತ್ತಾರೆ.
ಸದ್ಯ ಹಿರೇಬೈಲು ಗ್ರಾಮದ ಜನ ಈ ನಿಲುಸುಗಲ್ಲನ್ನು ಜಟಕೇಶ್ವರ ಎಂದು ಕರೆದು ವರ್ಷಕ್ಕೆರಡು ಬಾರಿ ಪೂಜೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಈ ಹಿಂದೆ ಹಿರಿಯ ಸಂಶೋಧಕ ಡಾ.ಅ.ಸುಂದರ ಹೊನ್ನಾವರ ತಾಲೂಕಿನಲ್ಲಿ ರಾಮತೀರ್ಥದ ಶಿವಾಲಯದ ಪರಿಸರದಲ್ಲಿ ನವಶಿಲಾಯುಗದ ಅವಶೇಷಗಳನ್ನು ಪತ್ತೆ ಮಾಡಿದ್ದನ್ನು ಸ್ಮರಿಸಿಕೊಂಡರು.
Inscriptions: ಅಗಳಗಂಡಿ ಮಕ್ಕಳಿಂದ ಶಾಸನೋಕ್ತ ವೀರಗಲ್ಲು ಪತ್ತೆ!