ಮಂಡ್ಯದಲ್ಲಿಯೂ'ಹಳ್ಳಿಕಾರ್ ಒಡೆಯ'ನಾದ ವರ್ತೂರು ಸಂತೋಷ್ : ದೇಸಿ ತಳಿ ಉಳಿಸೋಕೆ ಬಿಡಿ ಎಂದ್ರು ರೈತರು!
ವರ್ತೂರು ಸಂತೋಷ್‌ಗೆ ಹಳ್ಳಿಕಾರ್ ಒಡೆಯ ಎನ್ನುವುದರ ಚರ್ಚೆಯ ಕುರಿತು ರೈತರ ಅಭಿಪ್ರಾಯ ಸಂಗ್ರಹಕ್ಕೆ ಆಯೋಜಿಸಲಾಗಿದ್ದ ಸಭೆಯಲ್ಲಿ ರೈತರು ಸಂತೋಷ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಂಡ್ಯ (ಡಿ.10): ರೈತರನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಬಿಗ್‌ಬಾಸ್ ಮನೆಗೆ ಹೋಗಿರುವ ವರ್ತೂರು ಸಂತೋಷ್ ಅವರು ಹೊಂದಿರುವ 'ಹಳ್ಳಿಕಾರ್ ಒಡೆಯ' ಎಂಬ ಬಿರುದಿನ ಬಗ್ಗೆ ಮಂಡ್ಯದಲ್ಲಿ ನಾಲ್ಕೈದು ಜಿಲ್ಲೆಗಳ ರೈತರು ಚರ್ಚೆ ಮಾಡಲಾಗಿದೆ. ಈ ವೇಳೆ ಬಹುತೇಕ ರೈತರು ವರ್ತೂರು ಸಂತೋಷ್ ಅವರನ್ನು ಬೆಂಬಲಿಸಿದ್ದಾರೆ. ಹಳ್ಳಿಕಾರ್ ತಳಿ ಸಂರಕ್ಷಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಪ್ರೇರಣೆ ನೀಡುತ್ತಿರುವ ಸಂತೋಷ್‌ಗೆ ಜನರೇ ಹಳ್ಳಿಕಾರ್ ಒಡೆಯ ಬಿರುದು ಕೊಟ್ಟಿದ್ದಾರೆ. ಅವರ ಪ್ರೀತಿ ಕಿತ್ತುಕೊಳ್ಳುವುದು ಬೇಡ ಎಂದು ರೈತರು ಆಗ್ರಹಿಸಿದ್ದಾರೆ.
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ಗೆ 'ಹಳ್ಳಿಕಾರ್ ಒಡೆಯ' ಬಿರುದು ಬೇಕೋ ಬೇಡವೋ ಎಂಬ ದಕ್ಷಿಣ ಕರ್ನಾಟಕದ ನಾಲ್ಕೈದು ಜಿಲ್ಲೆಗಳ ರೈತರ ಚರ್ಚಾ ಕಾರ್ಯಕ್ರಮದಲ್ಲಿ ಮಂಡ್ಯದ ರೈತ ರವಿ ಪಾಟೀಲ್ ಮಾತನಾಡಿದರು. ವಿಜಯನಗರ ಸಾಮ್ರಾಜ್ಯ, ಮೈಸೂರು ಸಾಮ್ರಾಜ್ಯ, ಟಿಪ್ಪು ಸುಲ್ತಾನ್ ಸೇರಿ ಎಲ್ಲ ಕಾಲದಲ್ಲಿಯೂ ಸಂರಕ್ಷಣೆ ಹಳ್ಳಿಕಾರ್ ಜನಾಂಗದಿಂದ ಸ್ಥಳೀಯ ತಳಿಯ ರಾಸುಗಳನ್ನು ಸಂರಕ್ಷಣೆ ಮಾಡಿಕೊಂಡು ಬರಲಾಗುತ್ತಿದೆ. ಈಗ ಅದಕ್ಕೆ ಹಳ್ಳಿಕಾರ್ ತಳಿ ಎಂದೇ ಹೇಳಲಾಗುತ್ತಿದೆ. ಆದರೆ, ವರ್ತೂರ್ ಸಂತೋಷ್ ಗೆ 'ಹಳ್ಳಿಕಾರ್ ಒಡೆಯ' ಎಂದು ಬಿರುದು ಬಂದು. ಅವರಿಗೆ ಆ ಬಿರಿದು ಕೊಟ್ಟವರು ಯಾರು.? ಎಂದು ಪ್ರಶ್ನೆ ಮಾಡಿದ್ದಾರೆ.
ಅರ್ಜುನ ಆನೆಗೆ ಗುಂಡು ಬಿತ್ತಾ.? ಸಾವಿನ ವಿವಾದಕ್ಕೆ ಸ್ಪಷ್ಟನೆ ಕೊಟ್ಟ ವೈದ್ಯ ರಮೇಶ್!
ಜೊತೆಗೆ, ವರ್ತೂರು ಸಂತೋಷ್‌ಗೆ ಹಳ್ಳಿಕಾರ್ ಒಡೆಯ ಎಂದು ಹೇಳುವುದರಿಂದ ಮುಂದಿನ ಪೀಳಿಗೆಗೆ ಬೇರೆ ಸಂದೇಶ ರವಾನೆ ಆಗುತ್ತದೆ. ಇಂದು ಗೂಗಲ್‌ನಲ್ಲಿ ಹುಡುಕಿದಾಗಲೂ 'ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್' ಅಂತಾ ಬರುತ್ತದೆ. ಇದರಿಂದ ಪಾರಂಪರಿಕವಾಗಿ ಹಳ್ಳಿಕಾರ್ ಎತ್ತು ಸಾಕುತ್ತಿರುವುವರ ಹೆಸರಿಗೆ ಧಕ್ಕೆ ಆಗುತ್ತಿದೆ. 2017ರಿಂದ ವರ್ತೂರ್ ಸಂತೋಷ ಪ್ರಚಲಿತದಲ್ಲಿ ಬಂದಿದ್ದಾರೆ. ಆ ಬಿರುದು ಕೊಡೋಕೆ ಯಾವ ಅಥಾರಿಟಿ ಇದೆ ಎಂದು ಪ್ರಶ್ನೆ ಮಾಡಿದ್ದಾರೆ. ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕವು ನಾವೂ ಅವರನ್ನು ಪ್ರಶ್ನೆ ಮಾಡ್ತೇವೆ ಎಂದು ಹಳ್ಳಿಕಾರ್ ರಾಸುಗಳನ್ನು ಸಾಕಣೆ ಮಾಡುವ ರೈತ ರವಿಪಟೇಲ್ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಹಳ್ಳಿಕಾರ್ ರೈತ ಬನ್ನೂರು ಕೃಷ್ಣಪ್ಪ ಅವರು ಸೇರಿದಂತೆ ಹಲವು ರೈತರು ವರ್ತೂರ್ ಸಂತೋಷ ಪರವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಬನ್ನೂರು ಕೃಷ್ಣಪ್ಪ ಮಾತನಾಡಿ, ಯಾವುದೇ ಯೂನಿವರ್ಸಿಟಿಯಲ್ಲೋ ಅಥವಾ ಸರ್ಕಾರದಿಂದಲೋ ವರ್ತೂರು ಸಂತೋಷ್‌ಗೆ ಹಳ್ಳಿಕಾರ್ ಒಡೆಯ ಬಿರುದು ಕೊಟ್ಟಿಲ್ಲ. ಅಂಬರೀಷ್ ಅವರಿಗೆ 'ಮಂಡ್ಯದ ಗಂಡು' ಎಂದು ಬಿರುದು ಕೊಟ್ಟಿದಾರಲ್ಲ, ಅದು ಯಾರು ಕೊಟ್ಟರು? ಅದೇ ರೀತಿ ವರ್ತೂರು ಸಂತೋಷ್‌ಗೆ ಜನರು ಕರೆಯುತ್ತಿದ್ದಾರೆ ಎಂದು ಹೇಳಿದರು.
ಗುರುದೇವರಹಳ್ಳಿ ರೈತ ಸ್ವಾಮಿ ಮಾತನಾಡಿ, ಹಳ್ಳಿಕಾರ್ ತಳಿ ಉಳಿವಿಗೆ ಹಲವು ಹಿರಿಯರು ಅವರದೇ ದಾಟಿಯಲ್ಲಿ ಶ್ರಮಿಸಿದ್ದಾರೆ. ಈಗ ಸೋಷಿಯಲ್ ಮೀಡಿಯಾ ಬಳಸಿ ತಳಿ ಉಳಿವಿಗೆ ಅಭಿಯಾನ ಮಾಡಲಾಗುತ್ತಿದೆ. ಸರಿ ತಪ್ಪುಗಳನ್ನ ಸಮಾಜವೇ ನಿರ್ಧಾರ ಮಾಡುತ್ತದೆ. ಬಿರುದು ಕೊಟ್ಟು ಕರೆಯುವುದು ಜನರ ಭಾವನೆ, ಪ್ರೀತಿ, ಅಭಿಮಾನದ ವಿಚಾರವಾಗಿದೆ. ಜನರ ಪ್ರೀತಿಯನ್ನು ಪ್ರಶ್ನೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ನಿಮ್ಮ ಮನೆಗೆ ಮಾತ್ರ ಹಳ್ಳಿಕಾರ್ ಸೀಮಿತಾನ? ವರ್ತೂರ್ ಸಂತೋಷ್ ಪ್ರೇರಣೆಯಿಂದ ನಾನು ಹಳ್ಳಿಕಾರ್ ದನಗಳನ್ನು ನಾನು ಸಾಕಿದ್ದೇನೆ. ಯುವಕರನ್ನ ಪ್ರೇರೇಪಿಸುವ ವ್ಯಕ್ತಿ ವರ್ತೂರ್ ಸಂತೋಷ್ ಗ್ರೇಟ್ ಆಗಿದ್ದಾರೆ. ಸೋಷಿಯಲ್ ಮೀಡಿಯಾ ಬಳಸಿ ಹಳ್ಳಿಕಾರ್ ಬಗ್ಗೆ ಪ್ರಪಂಚಕ್ಕೆ ತಿಳಿಸುತ್ತಿದ್ದಾನೆ. ಅವನ ಬೆಳವಣಿಗೆಯನ್ನು ಯಾಕೆ ವಿರೋಧ ಮಾಡ್ತೀರಾ? ನವಿಲು ಕಂಡು ಕೆಂಬೂತ ಪುಕ್ಕ ಕಿತ್ತುಕೊಂಡ ಹಾಗೇ ನಿಮ್ಮ ಕಥೆ. ಒಬ್ಬನನ್ನ ವಿರೋಧಿಸು ಚರ್ಚಾಗೋಷ್ಠಿ ಆಯೋಜಿಸಿದ್ದಾರೆ. ಸಾಮಾಜಿಕ ಜಾಲತಾಣ ದೊಡ್ಡದಿದೆ ಅದರಲ್ಲಿ ನಿಮ್ಮ ವಿಚಾರಗಳನ್ನು ಮಂಡಿಸಿ. ತಪ್ಪು ಸರಿ ಜನರೇ ನಿರ್ಧಾರ ಮಾಡ್ತಾರೆ ಎಂದು ವರ್ತೂರು ಸಂತೋಷ್ ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಅರ್ಜುನ ಆನೆಗೆ ಗುಂಡು ಬಿತ್ತಾ.? ಸಾವಿನ ವಿವಾದಕ್ಕೆ ಸ್ಪಷ್ಟನೆ ಕೊಟ್ಟ ವೈದ್ಯ ರಮೇಶ್!
ಮೈಸೂರು ಪ್ರತಾಪ್ ಮಾತನಾಡಿ, ಈಗ ವರ್ತೂರು ಸಂತೋಷ್ ಅವರ ಬಿರುದಿನ ಬಗ್ಗೆ ಚರ್ಚೆ ಕಾರ್ಯಕ್ರಮ ಆಯೋಜನೆ ಮಾಡಿರುವ ರವಿ ಪಟೇಲ್ ಅವರೇ ವರ್ತೂರು ಸಂತೋಷ್ ಅವರನ್ನು ಹಳ್ಳಿಕಾರ್ ದನಗಳನ್ನು ಸಾಕುವ ಸಂಘಟನೆಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆಗ ಅಧ್ಯಕ್ಷ ಮಾಡಿ ಈಗ ವಿರೋಧ ಮಾಡ್ತಿದ್ದಾರೆ. ಮಂಡ್ಯಕ್ಕೆ ಸಂತೋಷ್ ಬಂದಾಗ ಮೊದಲು ರವಿ ಮನೆಗೆ ಹೋಗಿದ್ದರು. ಸಂತೋಷ್‌ರಿಂದಲೇ ಹಳ್ಳಿಕಾರ್ ತಳಿ ಹೆಚ್ಚೆಚ್ಚು ಪ್ರಚಾರ ಪಡೆಯಿತು. ಅಭಿಮಾನಿಗಳು, ಸ್ನೇಹಿತರು ಸೇರಿ 'ಹಳ್ಳಿಕಾರ್ ಒಡೆಯ' ಬಿರುದು ಕೊಟ್ಟರು. ಸಂತೋಷ್‌ರಿಂದ ಖಾಸಾಯಿಖಾನೆಗೆ ಹೋಗುವ ದನಗಳು ಉಳಿದವು. ಹೀಗಾಗಿ ವರ್ತೂರು ಸಂತೋಷ್ ಬಗ್ಗೆ ನಮಗೆ ಯಾವ ವಿರೋಧವೂ ಇಲ್ಲವೆಂದು ಹೇಳಿಕೊಂಡಿದ್ದಾರೆ.