ಬೆಂಗಳೂರು,(ಮೇ.09):  ರಾಜ್ಯ ಅಬಕಾರಿ ಇಲಾಖೆಯಲ್ಲಿ ನಡೆದಿದ್ದ ಎಲ್ಲಾ‌ ವರ್ಗಾವಣೆಗಳನ್ನಯ ರದ್ದುಗೊಳಿಸಲಾಗಿದೆ.

ನಿನ್ನೆ (ಶುಕ್ರವಾರ) ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದದ ಎಲ್ಲಾ ವರ್ಗಾವಣೆಗಳಿಗೆ ತಡೆ ನೀಡಿ ಅಬಕಾರಿ ಇಲಾಖೆ ಇಂದು (ಶನಿವರ) ಆದೇಶ ಹೊರಡಿಸಿದೆ.

ಸರ್ಕಾರದ ನಿರ್ದೇಶನದಂತೆ ಅಬಕಾರಿ ಇಲಾಖೆಯ ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದದ ಹುದ್ದೆಯಲ್ಲಿರುವರನ್ನು ಸ್ಥಳ ನಿಯುಕ್ತಿಗೊಳಿಸಿ ವರ್ಗಾವಣೆಗೆ ಆದೇಶಿಸಲಾಗಿತ್ತು. 

ಈ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಅಬಕಾರಿ ಇಲಾಖೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿತ್ತು. ಆದ್ರೆ, ಇದೀಗ ಅದೇನಾಯ್ತೋ ಏನೋ ಅಬಕಾರಿ ಇಲಾಖೆ ವರ್ಗಾವಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ. 

ಯಡಿಯೂರಪ್ಪರನ್ನು ಹೊಗಳಿದ ಪ್ರತಿಪಕ್ಷ, KGF ಚಿತ್ರ ತಂಡಕ್ಕೆ ಹೊಸ ಸಂಕಷ್ಟ; ಮೇ.09ರ ಟಾಪ್ 10 ಸುದ್ದಿ!

ಇನ್ನು ಲಾಕ್‌ಡೌನ್‌ ಮಧ್ಯೆ ರಾಜ್ಯದ ಆರ್ಥಿಕತೆಯನ್ನು ಬಲಗೊಳಿಸಲು ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಭಾರೀ ಪರ- ವಿರೋಧಗಳು ಚರ್ಚೆಯಾಗುತ್ತಿವೆ. 

ಕೊರೋನಾ ವೈರಸ್ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಆದ್ರೆ, ಮದ್ಯದಂಗಡಿ ಮುಂದೆ ಯಾವುದೇ ಲಾಕ್‌ಡೌನ್‌ ನಿಯಮಗಳು ಪಾಲನೆಯಾಗುತ್ತಿಲ್ಲ.

 ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿರುವುದ್ಯಾಕೆ..? ರಾಜ್ಯದ ಬೊಕ್ಕಸವನ್ನು ತುಂಬಿಸಲು ಮದ್ಯ ಮಾರಬೇಕೆ..? ಅಂತೆಲ್ಲಾ ಪ್ರಶ್ನೆಗಳು  ಕೇಳಿಬರುತ್ತಿವೆ.