ಡಿಕೆ ಶಿವಕುಮಾರ್‌ಗೆ ಕುಮಾರಸ್ವಾಮಿ 'ಕಳ್ಳ' ಎಂದಾಗ ಯಾಕೆ ಚರ್ಚಿಸಲಿಲ್ಲ? ಸಚಿವ ಜಮೀರ್ ಬೆನ್ನಿಗೆ ನಿಂತ ಡಿಕೆ ಸುರೇಶ್

ಸಿಪಿ ಯೋಗೇಶ್ವರ್ ಸಾಕಷ್ಟು ಚುನಾವಣೆ ಮಾಡಿದ್ದಾರೆ. ಫಲಿತಾಂಶ ನಮ್ಮ ಪರವಾಗಿದೆ ಅಂತಾ ಹೇಳಿಕೆ ನೀಡಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಸೋಲೊಪ್ಪಿದ್ದಾರೆ ಅಂತ ಹೇಳಿದ್ದಾರೆ. ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಧ್ಯಮಗಳ ವಿರುದ್ಡ ಡಿಕೆ ಸುರೇಶ್ ಕಿಡಿಕಾರಿದ್ದಾರೆ.

Karnataka former mp DK Suresh reacts about minister zameer ahmed controversy statment against hd kumaraswamy rav

ಬೆಂಗಳೂರು (ನ.15): ಸಿಪಿ ಯೋಗೇಶ್ವರ್ ಸಾಕಷ್ಟು ಚುನಾವಣೆ ಮಾಡಿದ್ದಾರೆ. ಫಲಿತಾಂಶ ನಮ್ಮ ಪರವಾಗಿದೆ ಅಂತಾ ಹೇಳಿಕೆ ನೀಡಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಸೋಲೊಪ್ಪಿದ್ದಾರೆ ಅಂತ ಹೇಳಿದ್ದಾರೆ. ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಧ್ಯಮಗಳ ವಿರುದ್ಡ ಡಿಕೆ ಸುರೇಶ್ ಕಿಡಿಕಾರಿದ್ದಾರೆ.

ಹೆಚ್‌ಡಿ ಕುಮಾರಸ್ವಾಮಿ ಕುರಿತು ಜಮೀರ್ ಹೇಳಿಕೆಯಿಂದ ಆಘಾತವಾಗಿದೆ ಎಂಬ ಸಿಪಿ ಯೋಗೇಶ್ವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯೋಗೇಶ್ವರ ಯಾವ ಆಯಾಮದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಫಲಿತಾಂಶ ನಮ್ಮ ಪರವಾಗಿ ಬರಲಿದೆ. ನಮ್ಮ ಕಾರ್ಯಕರ್ತರು ಬಹಳ ವಿಶ್ವಾಸದಲ್ಲಿದ್ದಾರೆ ಎಂದರು.

ಕುಮಾರಸ್ವಾಮಿ ಕುರಿತು ಜಮೀರ್ ಹೇಳಿಕೆ ಹೊಸದೇನಲ್ಲ. ಜಮೀರ್ ಅಹ್ಮದ್ ಕುಮಾರಸ್ವಾಮಿ ಆತ್ಮೀಯ ಸ್ನೇಹಿತರು. ಜಮೀರ್ ಹೊಸದಾಗಿ ಹೇಳಿಕೆ ನೀಡಿದ್ರೆ ಒಪ್ಪಬಹುದಿತ್ತು ಆದರೆ ಅವರು ಆಡಿದ ಮಾತು ಹೊಸದೇನಿಲ್ಲ ಸಾಕಷ್ಟು ಬಾರಿ ಆಡಿದ್ದಾರೆ. ಆದರೆ ಮಾಧ್ಯಮಗಳ ಪರಿಣಾಮ ಬೀರಿ ತಿರುಚಲಾಗಿದೆ. ಮಾಧ್ಯಮಗಳು ನಿಷ್ಪಕ್ಷಪಾತ ಕೆಲಸ ಮಾಡಬೇಕಿತ್ತು. ಮಾಧ್ಯಮಗಳಿಗೆ ನಮ್ಮ ಪಕ್ಷದ ಮೇಲೆ ಯಾಕೆ ಕೋಪ ಇದೆ ಅಂತ ಗೊತ್ತಿಲ್ಲ. ಪಕ್ಷದ ಸಂಬಂಧಪಟ್ಟ ಮಾತಲ್ಲ. ವೈಯುಕ್ತಿಕ ಮಾತುಗಳು ಅವು. ಚುನಾವಣಾ ದೃಷ್ಟಿಯಿಂದ ಮಾಧ್ಯಮದಲ್ಲಿ ಚರ್ಚೆ ಮಾಡಿದ್ದೀರಿ. ಇದು ನೀವು(ಮಾಧ್ಯಮಗಳು) ಮಾಡಿದ ಸೃಷ್ಟಿ ಇದು ಎಂದು ಗರಂ ಆದರು ಮುಂದುವರಿದು, ಇದೇ ಕುಮಾರಸ್ವಾಮಿ ಡಿಕೆ ಶಿವಕುಮಾರ ಅವರಿಗೆ ಕಳ್ಳ ಎಂದಿದ್ದರು. ಆದರೆ ಮಾಧ್ಯಮಗಳು ಈ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದ ಡಿ ಕೆ ಸುರೇಶ್, ಈ ಚುನಾವಣೆಯಲ್ಲಿ ವೈಯಕ್ತಿಕ ಟೀಕೆ ಟಿಪ್ಪಣಿ ಚರ್ಚೆ ಮಾಡಲಾಯಿತೇ ಹೊರತು ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಬಗ್ಗೆ ಚರ್ಚೆಯಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಸಚಿವ ಜಮೀರ್ ಹೇಳಿಕೆಯಿಂದ ಪಕ್ಷಕ್ಕೆ ಒಂದಷ್ಟು ನಷ್ಟ ಆಗಿದೆ' ಎಂದ ಸಿಪಿವೈ; ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರಾ ಸೈನಿಕ?

ಇನ್ನು ವಕ್ಫ್ ವಿಚಾರವಾಗಿ ಮಾತನಾಡಿದ ಅವರು, ವಕ್ಫ್ ಕಾತೆ ಬದಲಾವಣೆ ಮಾಡಿರೋದು ನಮ್ಮ ಸರ್ಕಾರವಲ್ಲ, ಬಿಜೆಪಿ ಕಾಲದಲ್ಲಿ ಆಗಿದೆ. ಬಿಜೆಪಿ ಕಾಲದಲ್ಲಿ ಆದ ಬಗ್ಗೆ ಯಾಕೆ ಚರ್ಚೆ ಮಾಡಲಿಲ್ಲ. ಚುನಾವಣೆ ಅಂದಾಗ ಧರ್ಮ ಎಳೆದು ತರ್ತಿರಿ. ಮಾಧ್ಯಮಗಳು ಚುನಾವಣೆ ವೇಳೆ ಟೂಲ್ ಆಗುತ್ತಿವೆ. ನೀವು ನಮ್ಮನ್ನು ತಿದ್ದುವ ಕೆಲಸ ಮಾಡಬೇಕು. ಮಾಧ್ಯಮಗಳು ತಿದ್ದಿದ್ರೆ ರಾಜಕಾರಣಿಗಳು ಬದಲಾವಣೆ ಆಗ್ತಾರೆ. ಆದರೆ ಹೇಳಿಕೆಗಳನ್ನು ತಿರುಚಿ ಗೊಂದಲ ಉಂಟುಮಾಡುತ್ತಿದ್ದೀರಿ.

News Hour: ಯೋಗೇಶ್ವರ್‌ಗೆ ಸೋಲಿನ ಭೀತಿ ತಂದ 'ಕರಿಯ..', ಜಮೀರ್‌ರನ್ನ ಸುಮ್ನೆ ಬಿಡ್ತಾರಾ?

ಪಾಪ ಮಾಧ್ಯಮಗಳ ಮೇಲೆ ಯೋಗೇಶ್ವರ್ ಗೆ ಹೇಳಲು ಬಂದಿಲ್ಲ. ಅದಕ್ಕೆ ಜಮೀರ್ ಮೇಲೆ ಹೇಳಿದ್ದಾರೆ. ಕುಮಾರಸ್ವಾಮಿ ಅವತ್ತು ಪ್ರಶ್ನೆ ಮಾಡಬೇಕಿತ್ತು. ನಿನ್ನೆಯೇ ಯಾಕೆ ಮಾಧ್ಯಮಗಳಲ್ಲಿ ಚರ್ಚೆ ಮಾಡಲಾಯ್ತು? ಮಾತನಾಡುವಾಗ ಕೆಲವೊಂದು ತಪ್ಪುಗಳು ಬರುತ್ತವೆ. ಜಮೀರ್ ಹೇಳಿಕೆಯನ್ನು ಸ್ವಲ್ಪ ಮಟ್ಟಿಗೆ ತಿರುಚಲಾಗಿದೆ. ಇಲ್ಲಿ ಕೆಲಸಕ್ಕೆ ಬೆಲೆ ಇಲ್ಲ. ಜನಕ್ಕೆ ಹಣ ಮತ್ತು ಧರ್ಮ ಎರಡೇ ಬೇಕಾಗಿರುವುದು.ಇದು ಸತ್ಯವಾದ ಮಾತು. ಕೆಲಸ ಮಾಡಿದ್ದೀವಿ ಓಟು ಹಾಕಿ ಅಂತ ಕೇಳೋ ಪರಿಸ್ಥಿತಿಯಲ್ಲಿ ರಾಜಕಾರಣಿಗಳಿಲ್ಲ. ಒಂದೋ‌ ಸುಳ್ಳು ಹೇಳೋದನ್ನು ಕಲಿತುಕೊಳ್ಳಬೇಕು
ಬೆಳಗ್ಗೆ ಒಂದು ಸುಳ್ಳು ಮಧ್ಯಾಹ್ನ ಒಂದು ಸುಳ್ಳು ಹೇಳಬೇಕು, ಜಾತಿ ಹೇಳಬೇಕು, ಸುಳ್ಳು ಹೇಳಬೇಕು ಇಷ್ಟೇ ಇದು ನನ್ನ ಹೇಳಿಕೆಯಲ್ಲ, ಜನರ ಅಭಿಪ್ರಾಯದ ಬಗ್ಗೆ ನನ್ನ ನೋವಿನ ನುಡಿ

Latest Videos
Follow Us:
Download App:
  • android
  • ios