'ಆಯುಷ್ಮಾನ್ ಭಾರತ' ಹೆಸರು ಕೈಬಿಡಲು ಕಾಂಗ್ರೆಸ್ ಚಿಂತನೆ: 'ಆರೋಗ್ಯ ಕರ್ನಾಟಕ' ಸಾಕು!
ರಾಜ್ಯದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಆಯುಷ್ಮಾನ್ ಭಾರತ್ ಹೆಸರು ಕೈಬಿಡಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರು (ಜೂ.13): ರಾಜ್ಯದ ಜನತೆಗೆ ಸಾಮಾನ್ಯ ರೋಗಳಿಂದ ಹಿಡಿದು ಗಂಭೀರ ಪ್ರಮಾಣದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಅನುಕೂಲ ಆಗುವಂತೆ ಸರ್ಕಾರದಿಂದ ಆಯಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಅನುಕೂಲ ಕಲ್ಪಿಸಲಾಗಿತ್ತು. ಈ ಯೋಜನೆಯಡಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿದಲ್ಲಿ ಬಿಲ್ ಪಾವತಿಯಲ್ಲಿ ಶೇ. 64 ಹಣವನ್ನು ರಾಜ್ಯ ಸರ್ಕಾರವೇ ಪಾವತಿಸುತ್ತಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಆಯುಷ್ಮಾನ್ ಭಾರತ್ ಎಂದು ಕರೆಯದೇ ಆರೋಗ್ಯ ಕರ್ನಾಟಕ ಎಂದು ಕರೆಯುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿರುವ ಆರೋಗ್ಯ ಕಾರ್ಡ್‌ಗಳನ್ನು ಹಿಡಿದುಕೊಂಡು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋದರೆ ಸರ್ಕಾರದಿಂದ ಹಣ ಪಾವತಿ ಮಾಡುವುದಕ್ಕೆ ಪರಿಗಣಿಸುವುದಿಲ್ಲ. ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಮಾಡಿದರೆ ಮಾತ್ರ ಪರಿಗಣಿಸಲಾಗುತ್ತದೆ. ಇನ್ನು ಮುಂದೆ ಇದನ್ನ "ಆಯುಷ್ಮಾನ್ ಭಾರತ್" ಅಂತ ಕರೆಯಬೇಡಿ. ಇದನ್ನ "ಆರೋಗ್ಯ ಕರ್ನಾಟಕ" ಎಂದು ಕರೆಯರಿ. ಇದರಲ್ಲಿ ಶೇ.64 ಹಣವನ್ನು ರಾಜ್ಯ ಸರ್ಕಾರ ಹಣ ನೀಡಲಿದೆ. ಉಳಿದ ಶೇ.36 ಹಣವನ್ನು ಮಾತ್ರ ಕೇಂದ್ರ ಸರ್ಕಾರ ನೀಡಲಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಹೆಚ್ಚಿದೆ ಎಂದು ಮಾಹಿತಿ ನೀಡಿದರು.
ಉಚಿತ ಪ್ರಯಾಣಕ್ಕಾಗಿ ಪಶ್ಚಿಮ ಬಂಗಾಳ ಮಹಿಳೆ ಹಿಂಗಾ ಮಾಡೋದು! ದಂಗಾದ ಕಂಡಕ್ಟರ್
ಕರ್ನಾಟಕ ಕಾರ್ಡ್ ಚಿಕಿತ್ಸಾ ದರ ಹೆಚ್ಚಳಕ್ಕೆ ಪ್ರಸ್ತಾವನೆ: ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳು ಈ ಕಾರ್ಡ್ ವ್ಯಾಪ್ತಿಗೆ ಬರೋದಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳು ಪ್ರಸ್ತುತ ಇರುವ ದರವನ್ನ ಒಪ್ಪುತ್ತಿಲ್ಲ. ಆರೋಗ್ಯ ಕರ್ನಾಟಕ ಕಾರ್ಡ್ ಚಿಕಿತ್ಸಾ ದರವನ್ನ ಏರಿಕೆ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ನೀಡುವ ಚಿಕಿತ್ಸಾ ವೆಚ್ಚದ ದರವನ್ನ ಎರಡು ವಾರದೊಳಗೆ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಗಳಿಗೂ ಅನುಕೂಲ ಆಗಲಿದೆ. ಜೊತೆಗೆ, ಹೆಚ್ಚಿನ ಆಸ್ಪತ್ರೆಗಳು ಸರ್ಕಾರದ ಯೋಜನೆಗೆ ಕೈಜೋಡಿಸಿ ಬಡಜನರಿಗೆ ಚಿಕಿತ್ಸೆ ನೀಡಲು ಮುಂದಾಗಲಿವೆ ಎಂದರು.
ಚಾಮರಾಜನಗರ ದುರಂತ ಕೇಸ್ ಮರು ತನಿಖೆ: ಚಾಮರಾಜನಗರ ದುರಂತ ಕೇಸ್ ಇದನ್ನ ಮರು ತನಿಖೆ ಮಾಡುವಂತೆ ತಿಳಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ನಡೆದ ವೈದ್ಯಕೀಯ ಖರೀದಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಅದನ್ನ ಯಾವ ರೀತಿ ವಿಚಾರಣೆ ಮಾಡಬೇಕು ಅಂತ ಚರ್ಚೆ ಮಾಡುತ್ತಿದ್ದೇವೆ. ಆದರೆ, ಇಂದಿನ ಸಭೆಯಲ್ಲಿ ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ಸಂಬಂಧ ಯಾವುದೇ ಚರ್ಚೆಯಾಗಿಲ್ಲ. ಇವತ್ತು ಮುಖ್ಯಮಂತ್ರಿ ನೇತೃತ್ವದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಚರ್ಚೆ ಮಾಡಿದ ವಿಚಾರಗಳು ಇಷ್ಟೇ: ಆರೋಗ್ಯ ಇಲಾಖೆಗೆ ಮೀಸಲಿಟ್ಟ ಅನುದಾನ ಯಾಕೆ ಖರ್ಚಾಗಿಲ್ಲ. ಎಲ್ಲಾ ಆಸ್ಪತ್ರೆಗಳಲ್ಲಿ ಉನ್ನತ ದರ್ಜೆಯ ವ್ಯವಸ್ಥೆ ಮಾಡಬೇಕು. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್, ಎಂ ಆರ್ ಐ ಸ್ಕ್ಯಾನ್ ಹಾಗೂ ಆಂಬುಲೆನ್ಸ್ ವ್ಯವಸ್ಥೆಗಳನ್ನ ಸರಿಪಡಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಆರೋಗ್ಯ ವಿಮೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಆರೋಗ್ಯ ಕರ್ನಾಟಕ ವಿಮಾ ಯೋಜನೆ ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ಸಿಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದಾರಮಯ್ಯ ಅವರು ಸೂಚಿಸಿದ್ದಾರೆ ಎಂದರು.
ಹೊಂದಾಣಿಕೆ ರಾಜಕೀಯ ಬಿಜೆಪಿಯಲ್ಲಿಯೂ ಇದೆ : ಸಂಸದರ ಟೀಕೆ ಒಪ್ಪಿಕೊಂಡ ಸಿ.ಟಿ. ರವಿ
ಒಳ ಒಪ್ಪಂದ ಬಗ್ಗೆ ಮಾಹಿತಿ ನೀಡಲಿ: ಸಂಸದ ಪ್ರತಾಪ್ ಸಿಂಹರಿಗೆ ಒಳ ಒಪ್ಪಂದದ ಬಗ್ಗೆ ಮಾಹಿತಿ ಇದ್ದರೆ ಸ್ಪಷ್ಟವಾಗಿ ಬಹಿರಂಗ ಪಡಿಸಲಿ. ಸುಮ್ಮನೆ ಯಾರು ಯಾರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಅನ್ನೋದು ಸ್ಪಷ್ಟವಾಗಿ ಹೇಳಲಿ. ಆ ರೀತಿಯ ಘಟನೆಗಳು ನಡೆದಿಲ್ಲ. ಆದ್ದರಿಂದ ಅಂತಹ ಪ್ರಶ್ನೆಯ ಉದ್ಬವಿಸಲ್ಲ. ಈ ಹಿಂದೆ ತಪ್ಪಾಗಿದ್ರೆ ಸರಿಪಡಿಸುವ ಕೆಲಸ ಮಾಡ್ತೀವಿ. ಲೋಪದೋಷಗಳಿದ್ದರೆ ಸರಿ ಮಾಡಿ ತನಿಖೆ ಮಾಡಿಸುತ್ತೇವೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುವ ಘಟನೆ ನಡೆದಿದ್ದರೆ ಸಂಬಂಧಪಟ್ಟ ಇಲಾಖೆ ಗಮನ ಹರಿಸುತ್ತದೆ. ಸೇಡಿನ ರಾಜಕಾರಣ ಮಾಡಲ್ಲ. ಯಾವ ರೀತಿ ತನಿಖೆ ಆಗಬೇಕು ಹೇಗೆ ಆಗಬೇಕು ಅನ್ನೋದನ್ನ ಮುಂದೆ ಹೇಳ್ತೀವಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.