ಹೊಂದಾಣಿಕೆ ರಾಜಕೀಯ ಬಿಜೆಪಿಯಲ್ಲಿಯೂ ಇದೆ : ಸಂಸದರ ಟೀಕೆ ಒಪ್ಪಿಕೊಂಡ ಸಿ.ಟಿ. ರವಿ
ಕರ್ನಾಟಕದಲ್ಲಿ ಎಲ್ಲ ಪಕ್ಷಗಳಲ್ಲಿಯೂ ಹೊಂದಾಣಿಕೆ ರಾಜಕಾರಣ ಮಾಡಲಾಗುತ್ತಿದೆ. ಬಿಜೆಪಿಯಲ್ಲಿಯೂ ಹೊಂದಾಣಿಕೆ ರಾಜಕಾರಣವಿದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಬೆಂಗಳೂರು (ಜೂ.13): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ತಮ್ಮ ಪಕ್ಷದ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಎಲ್ಲ ಪಾರ್ಟಿಯಲ್ಲಿಯೂ ಹೊಂದಾಣಿಕೆ ರಾಜಕೀಯ ಮಾಡೋರು ಇದ್ದಾರೆ. ಬಿಜೆಪಿಯಲ್ಲಿಯೂ ಹೊಂದಾಣಿಕೆ ರಾಜಕೀಯವಿದೆ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ಬಿಜೆಪಿ ನಾಯಕರು ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದರು. ಈ ಕುರಿತು ಮಾಧ್ಯಮಗಳೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಒಇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಕೆಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಮಾತಾಡ್ತೀವಿ. ಕಾಂಗ್ರೆಸ್‌ನವರು ನವರು ಒಂದಷ್ಟು ಆರೋಪಗಳನ್ನು ನಮ್ಮ ಮೇಲೆ ಮಾಡಿದ್ದರು. ಅದನ್ನೆಲ್ಲ ಕಾಂಗ್ರೆಸ್‌ನವರು ಈಗ ಸಾಬೀತು ಮಾಡಿ ತೋರಿಸಲಿ. ಎಲ್ಲಾ ಪಾರ್ಟಿಯಲ್ಲೂ ಹೊಂದಾಣಿಕೆ ರಾಜಕೀಯ ಮಾಡೋರು ಇದ್ದಾರೆ. ಇದಕ್ಕೆ ಬಿಜೆಪಿಯೂ ಹೊರತಲ್ಲ. ನೇರವಾಗಿ ಮಾತಾಡೋರ ಮೇಲೆ ಮುಗಿಬೀಳುತ್ತಾರೆ. ಪಕ್ಷದ ಸೂಕ್ತ ವೇದಿಕೆಯಲ್ಲಿ ಹೊಂದಾಣಿಕೆ ರಾಜಕಾರಣಿದ ಬಗ್ಗೆ ಚರ್ಚೆ ಮಾಡ್ತೇವೆ. ಬಹಿರಂಗವಾಗಿ ಹೇಳೊಕೆ ಸಾಧ್ಯವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಜತೆ ಬಿಜೆಪಿ ನಾಯಕರು ಶಾಮೀಲು ..?: ಸ್ವಪಕ್ಷೀಯರ ವಿರುದ್ಧ ಪ್ರತಾಪ್ ಸಿಂಹ ಕಿಡಿ
ನಮ್ಮ ಸರ್ಕಾರದಿಂದ ತಪ್ಪಾಗಿದೆ: ನಮ್ಮ ಸರ್ಕಾರ ತಪ್ಪು ಮಾಡಿದೆ. ಅರ್ಕಾವತಿ ಹಗರಣದಲ್ಲಿ 8 ಸಾವಿರ ಕೋಟಿ ರೂಪಾಯಿ ತಿಂದ ಖದೀಮ ಯಾರು? ಗೊತ್ತಾಗಬೇಕಲ್ಲ. ನಿಮ್ಮನ್ನು ನೀವು ಸಾಬೀತು ಮಾಡಿಕೊಳ್ಳಲಾದರೂ ತನಿಖೆ ಮಾಡಿ. ಕೆಂಪಣ್ಣ ವರದಿ ಟೇಬಲ್ ಮಾಡಿ. ಸೋಲಾರ್ ಹಗರಣ ಕೇಳಿ ಬಂತು, ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿ ಆರೋಪ ಇತ್ತು. ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿಸಿದ ಆ ಖದೀಮ ಯಾರು, ತನಿಖೆ ಮಾಡಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು. ಪೊಲೀಸ್ ಹಗರಣ ಆಗಿದೆ ಎಂದು ಈಗ ನೀವು ಬೇರೆಯವರ ಮೇಲೆ ಆರೋಪ ಮಾಡುವಂತಿಲ್ಲ. ನಿಮ್ಮ ಕೈಯಲ್ಲೇ ಎಲ್ಲಾ ಇದೆ. ತನಿಖೆ ಮಾಡಿ ಎಂದು ಹೇಳಿದರು.
ತುಕ್ಡೆ ಗ್ಯಾಂಗ್ ಜೊತೆಗೆ ದೇಶವನ್ನು ಶೆಡ್‌ಗೆ ಕಳಿಸ್ತಾರೆ: ಡಬಲ್ ಇಂಜಿನ್‌ನಲ್ಲಿ ಒಂದು ಇಂಜಿನ್‌ಅನ್ನು ಶೆಡ್ಡಿಗೆ ಕಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ, ಇಡೀ ದೇಶವನ್ನೇ ಶೆಡ್ಡಿಗೆ ಕಳಿಸಲು ಅವರ ಪ್ಲಾನ್ ಆಗಿದೆ. ಕೆಲ ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಸೇರಿಕೊಂಡು ಮಾಡ್ತಿದ್ದಾರೆ. ಆದರೆ, ಇದು ಯಾವುದೇ ಕಾರಣಕ್ಕೂ ಅಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನಿಡಿದರು.
ಉಚಿತ ಪ್ರಯಾಣಕ್ಕಾಗಿ ಪಶ್ಚಿಮ ಬಂಗಾಳ ಮಹಿಳೆ ಹಿಂಗಾ ಮಾಡೋದು! ದಂಗಾದ ಕಂಡಕ್ಟರ್
ಮಹಾ ಸಂಪರ್ಕ ಅಭಿಯಾನ ಜೂ.30ಕ್ಕೆ ಮುಕ್ತಾಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಕೇಂದ್ರ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಅವರೆಲ್ಲಾ ಕ್ಷೇತ್ರದಲ್ಲಿ ಓಡಾಟ ಮಾಡ್ತಾರೆ. ಜೂನ್ 30 ರ ಒಳಗೆ ಮಹಾ ಸಂಪರ್ಕ ಅಭಿಯಾನ ದೇಶದಾದ್ಯಂತ ಮುಕ್ತಾಯ ಆಗಲಿದೆ. ವ್ಯಾಪಾರಸ್ಥರ ಜೊತೆ ಸಂವಾದ, ಮನೆ ಮನೆ ಭೇಟಿ ಮಾಡಲಿದ್ದಾರೆ. ಲೋಕಸಭಾ ಚುನಾವಣೆಯ ತಾಲೀಮು ಇದಾಗಿದೆ ಎಂದು ಮಾಹಿತಿ ನೀಡಿದರು.