ಮೈಸೂರು ದಸರಾ ಉದ್ಘಾಟನೆ ಮಾಡಿ 5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ!
ದಸರಾ ಎಂದರೆ ಮೈಸೂರು ಜನರಿಗೆ ಹರ್ಷ, ಉಲ್ಲಾಸ. ಈ ಬಾರಿ ದಸರಾ ಹಬ್ಬದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತೆ ಎಂದು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ದಸರಾ ಹಬ್ಬದ ಶುಭಾಶಯ ತಿಳಿಸಿದರು.
ಮೈಸೂರು (ಅ.3): ದಸರಾ ಎಂದರೆ ಮೈಸೂರು ಜನರಿಗೆ ಹರ್ಷ, ಉಲ್ಲಾಸ. ಈ ಬಾರಿ ದಸರಾ ಹಬ್ಬದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತೆ ಎಂದು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ದಸರಾ ಹಬ್ಬದ ಶುಭಾಶಯ ತಿಳಿಸಿದರು.
ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಬಾರಿ ದಸರಾ ಹಬ್ಬಕ್ಕೆ ಸಾಹಿತಿ ಹಂಪನಾ ಆಯ್ಕೆಯಾಗಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಹಂಪನಾ ಕೊಡುಗೆ ಅಪಾರವಾಗಿದೆ. ಹಂಪನಾ-ಕಮಲಾ ಹಂಪನಾ ಜೋಡಿ ಮಾದರಿಯಾದ ಜೋಡಿ. ಕರ್ನಾಟಕ ಕಂಡಂತಹ ಅಪರೂಪದ ಸಾಹಿತಿ ಹಂಪನಾ ಎಂದರು.
ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಶಾಸಕ ಜಿಟಿ ದೇವೇಗೌಡ! ಬಿಜೆಪಿ ಜೆಡಿಎಸ್ ದೋಸ್ತಿ ನಾಯಕರ ವಿರುದ್ಧ ವಾಗ್ದಾಳಿ!
'ಚುನಾಯಿತ ಸರ್ಕಾರಗಳನ್ನು ವಾಮಮಾರ್ಗದಿಂದ ಬೀಳಿಸುವ ಕೆಲಸ ತಪ್ಪು' ಎಂದು ಹಂಪನಾ ಹೇಳಿರುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಬಹಳ ಮಹತ್ವಪೂರ್ಣವಾಗಿದೆ. ನಮಗೆ ಚಾಮುಂಡೇಶ್ವರಿ ತಾಯಿ ಆಶೀರ್ವಾದವಿದೆ ಜನರಿಗೆ ಒಳ್ಳೆಯ ಕೆಲಸ ಮಾಡಲು ದೇವಿಯ ಆಶೀರ್ವಾದ ಇದೆ. ಐದು ವರ್ಷವೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದರು.
ಮಾತುಮಾತಿಗೂ ಚಾಮುಂಡೇಶ್ವರಿ ತಾಯಿ ಎಂದ ಸಿಎಂ
ನಾನು ಡಿಕೆ ಶಿವಕುಮಾರ ಒಟ್ಟಿಗೆ ಬೆಟ್ಟಕ್ಕೆ ಬಂದು ತಾಯಿ ಚಾಮುಂಡೇಶ್ವರಿ ತಾಯಿಯ ಪೂಜೆ ಮಾಡಿ ಐದು ಗ್ಯಾರಂಟಿ ಯೋಜನೆಗೆ ಶಕ್ತಿ ಕೊಡಮ್ಮ ಅಂತ ಕೇಳಿದ್ದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 8ತಿಂಗಳಲ್ಲಿ ಕೊಟ್ಟ ಮಾತಿನಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. ಇದು ಚಾಮುಂಡಿಯ ಆಶೀರ್ವಾದ, ಚಾಮುಂಡಿ ದೇವಿ ಕೊಟ್ಟ ಶಕ್ತಿಯಿಂದಲೇ ಐದು ಗ್ಯಾರಂಟಿ ಜಾರಿ ತಂದೆವು. ಆ ಮೂಲಕ ತಾಯಿಗೆ ಕೊಟ್ಟಿದ್ದ ಮಾತನ್ನು ಈಡೇರಿಸಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರದ ಅಭಿವೃದ್ದಿ ಕಾರ್ಯಗಳ ಬಗ್ಗೆ ವಿವರಿಸಿದರು. ಭಾಷಣದುದ್ದಕ್ಕೂ ಮಾತು ಮಾತಿಗೂ ಚಾಮುಂಡಿ ತಾಯಿಯ ಆಶೀರ್ವಾದ ಎಂದರು.
ಮುಂದಿನ ಐದು ವರ್ಷ ನಾನೇ ಸಿಎಂ:
ತಾಯಿ ಚಾಮುಂಡೇಶ್ವರಿ, ಜನರ ಆಶೀರ್ವಾದ, ಸರಕಾರದ ಮೇಲೆ ನನ್ನ ಮೇಲೆ ಇರುವವರೆಗೂ ನನ್ನ ಯಾರು ಏನೂ ಮಾಡಲು ಆಗಲ್ಲ. ಜಿಟಿಡಿಯವರೇ ನನ್ನ ಈ ಕ್ಷೇತ್ರದಲ್ಲಿ ಸೋಲಿಸಿದ್ದು. ಅದು ನನ್ನ ಕೈಯಾರೆ ಮಾಡಿಕೊಂಡ ಸೋಲಾಗಿತ್ತು.ನಾನು ಒಂಭತ್ತು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಚಾಮುಂಡೇಶ್ವರಿ ಕೃಪೆಯಿಂದ ಇಲ್ಲಿವರೆಗೆ ಇದ್ದೇನೆ. ಮುಂದಿನ ಐದು ವರ್ಷಗಳ ಕಾಲ ಅಭಿವೃದ್ಧಿ ಮಾಡೇ ಮಾಡುತ್ತೇನೆ. ಹಿಂದೆ ದೇವರಾಜು ಅರಸು ಬಿಟ್ಟರೆ ಐದು ವರ್ಷ ಪೂರ್ಣವಾಗಿ ಆಡಳಿತ ಮಾಡಿದ್ದು ಮಾಡಿದ್ದು ಸಿದ್ದರಾಮಯ್ಯ ಮಾತ್ರ. ಅದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದ. ಜಿಟಿಡಿ ಬೇರೆ ಪಕ್ಷದಲ್ಲಿದ್ದರೂ ಸತ್ಯವಾದ ಮಾತು ಹೇಳಿದ್ದಾರೆ. ಸತ್ಯಮೇವ ಜಯತೇ ಸತ್ಯಕ್ಕೆ ಯಾವಾಗಲೂ ಜಯ. ಮುಡಾ ಪ್ರಕರಣದಲ್ಲಾಗಲಿ ರಾಜಕಾರಣದಲ್ಲಾಗಲಿ ನಾನು ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಇಷ್ಟು ಸುಧೀರ್ಘ ರಾಜಕಾರಣ ಮಾಡಲು ಆಗುತ್ತಿರಲಿಲ್ಲ ಎಂದರು.
ಸಿದ್ದರಾಮಯ್ಯ ದಸರೆ ಅಂಬಾರಿಗೆ ಪುಷ್ಪಾರ್ಚನೆ ಮಾಡುವುದು ಅನುಮಾನ: ಬಿಜೆಪಿ ಶಾಸಕ ಶ್ರೀವತ್ಸ
ರಂಗು ರಂಗಿನ ಮಾತಿನಿಂದ ಹೊಟ್ಟೆ ತುಂಬೊಲ್ಲ:
ಬರೀ ಭಾಷಣ ಮಾಡುವುದರಿಂದ, ರಂಗು ರಂಗಿನ ಮಾತುಗಳಿಂದ ಜನರ ಹೊಟ್ಟೆ ತುಂಬಿಸಲು ಸಾದ್ಯವಿಲ್ಲ. ಜನರು ನನಗೆ ಹೆದರಬೇಡಿ, ನಾವಿದ್ದೇವೆ ಎಂದಿದ್ದಾರೆ. ನನಗೆ ನಂಬಿಕೆಯಿದೆ, ನ್ಯಾಯಾಲಯದಲ್ಲಿ ಮೇಲೆ ಗೌರವ ನಂಬಿಕೆಯಿದೆ. ಅದಕ್ಕೆ ಆತ್ಮಸಾಕ್ಷಿ ನ್ಯಾಲಯದ ಮೇಲೆ ನಂಬಿಕೆ ಇದೆ. ಸತ್ಯಕ್ಕೆ ಜಯ ಸಿಗತ್ತೆ ಅಂತ ನಂಬಿದ್ದೇನೆ. ಚಾಮುಂಡಿ ತಾಯಿಯ ಆಶೀರ್ವಾದ ಇರುವವರೆಗೂ ಜನರ ಆಶೀರ್ವಾದ ಇರೊವರೆಗೂ ನಮ್ಮ ಸರ್ಕಾರ ಇರುತ್ತೆ. ನಾವು ಮನುಷ್ಯರು ನಾವು ಪರಸ್ಪರ ಪ್ರೀತಿಸಬೇಕು. ದ್ವೇಷದ ಬಗ್ಗೆ ಎಲ್ಲೂ ಹೇಳಿಲ್ಲ. ಎಲ್ಲ ಧರ್ಮಗಳು ಪ್ರೀತಿಸಿ ಎಂದು ಹೇಳಿದೆ. ಇನ್ನೂ ಉತ್ತಮ ಕೆಲ್ಸ ಮಾಡಲು ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿ. ಮತ್ತೊಮ್ಮೆ ದಸರಾ ಶುಭಾಶಯ ತಿಳಿಸಿ ಜೈ ಚಾಮುಂಡಿ ತಾಯಿ ಎಂದ ಸಿಎಂ.