Asianet Suvarna News Asianet Suvarna News

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರನ್ನು ಸನ್ಮಾನಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

ಕಾಗಿನೆಲೆ ಗುರುಪೀಠದಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಕುರುಬ ಸಮುದಾಯದ ಮುಖಂಡ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಸನ್ಮಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಣೆ ಮಾಡಿದ್ದಾರೆ

Karnataka CM Siddaramaiah refused to honor former minister KS Eshwarappa sat
Author
First Published Jul 2, 2023, 6:30 PM IST

ಬೆಂಗಳೂರು (ಜು.02): ಕಾಗಿನೆಲೆ ಗುರುಪೀಠದಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಕುರುಬ ಸಮುದಾಯದ ಮುಖಂಡ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಸನ್ಮಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಣೆ ಮಾಡಿದ್ದಾರೆ.

ಬೆಂಗಳೂರು ಕಾಗಿನೆಲೆಯ ಕನಕ ಗುರುಪೀಠ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವ ಈಶ್ವರಪ್ಪ ಗೆ ಸನ್ಮಾನಿಸಲು ಸಿಎಂ ಸಿದ್ದರಾಮಯ್ಯನವರು ನಿರಾಕರಿದ್ದಾರೆ. ಕಾಗಿನೆಲೆ  ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಈಶ್ವರಪ್ಪ ಅವರಿಗೆ ಸನ್ಮಾನ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೇಳಿದರು. ಆದರೆ, ಇದಕ್ಕೆ ಸಿದ್ದರಾಮಯ್ಯನವರು ನೀವೇ ಸನ್ಮಾನಿಸಿ ಎಂದು ಕೈಸನ್ನೇ ಮಾಡಿದರು. ಮುಂದುವರೆದು ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯ ಅವರ ಕೈಗೆ ಶಾಲು ನೀಡಲು ಮುಂದಾದರೂ, ಸಿಎಂ ಸನ್ಮಾನಿಸಲು ನಿರಾಕರಿಸಿದ್ದಾರೆ. ನಂತರ, ಸಿಎಂ ನೀವೆ ಮಾಡಿ ಎಂದಿದ್ದಕ್ಕೆ ಅನಿವಾರ್ಯವಾಗಿ ಕೊನೆಗೆ ಕಾಗಿನೆಲೆ ಶ್ರೀಗಳೇ ಈಶ್ವರಪ್ಪರನ್ನು ಸನ್ಮಾನಿಸಿದರು. 

'ದೇಶದಲ್ಲಿ ಜಿಎಸ್‌ಟಿ ತೆರಿಗೆಯಂತೆ, ರಾಜ್ಯದಲ್ಲಿ ವೈಎಸ್‌ಟಿ ತೆರಿಗೆ ಜಾರಿ'

ಪಠ್ಯದಲ್ಲಿ ವಚನ ಸೇರ್ಪಡೆ ಮಾಡಲು ಪಟ್ಟಿ ಮಾಡಿ ಕೊಡ್ತೇವೆ: ನಂತರ ವೇದಿಕೆಯಲ್ಲಿ ಮಾತನಾಡಿದ ಸಾಣೆಹಳ್ಳಿ ಶಿವಾಚಾರ್ಯ ಸ್ವಾಮೀಜಿ ಅವರು, ಕಳೆದ ಬಾರಿ ಅಧಿಕಾರದಲ್ಲಿದ್ದ ಸರ್ಕಾರದಲ್ಲಿ ಶಾಲಾ ಪಠ್ಯದಲ್ಲಿ ಏನ್ ಏನ್ ಅನಾಹುತವಾಗಿದೆ ನಿಮ್ಗೆ ಗೊತ್ತಿದೆ. ಬಸವಣ್ಣ , ಕುವೆಂಪು  ಇನ್ನೂ ಹಲವು ಪಠ್ಯಗಳಲ್ಲಿ ಏನ್ ಏನೋ ಆಗಿತ್ತು. ಕೊನೆಗೆ ನಾವು ಹೇಳಿದ ಮೇಲೆ ಬಸವಣ್ಣ ನವರ ಪಠ್ಯ ಬದಲಾವಣೆ ಮಾಡಿದರು. ಇನ್ನೂ ಪಠ್ಯಗಳಲ್ಲಿ ಬದಲಾವಣೆ ಮಾಡೋದು ಸಾಕಷ್ಟು ಇದೆ. ಸಿದ್ದರಾಮಯ್ಯ ಸರ್ಕಾರ ಅದನ್ನ ಮಾಡಲಿದೆ. ಅಲ್ಲದೇ ಪಠ್ಯಗಳಲ್ಲಿ ವಚನ ಸಾಹಿತ್ಯ ಸೇರಿಸಬೇಕು. ಎಲ್ಲಾ ವಿದ್ಯಾರ್ಥಿಗಳು ವಚನ ಓದುವಂತಾಗಬೇಕು. ಪಠ್ಯಗಳಲ್ಲಿ ವಚನಗಳನ್ನ ಸೇರಿಸಿ ಬೇಕಾದರೆ ನಾವು ಯಾವುದನ್ನ ಸೇರಿಸಬೇಕು ಅನ್ನೋ ಪಟ್ಟಿ ಮಾಡಿಕೊಡುತ್ತವೆ ಎಂದು ಹೇಳಿದರು. 

ಸಿಎಂ ಕರೆ ಸ್ವೀಕರಿಸಿದರೂ, ಕೆಲವು ಸಚಿವರು ಕರೆ ಸ್ವೀಕರಿಸಲ್ಲ:  ನಾವು ಮಠಗಳಿಂದ ಕರೆ ಮಾಡಿದರೆ ಕೆಲವು ಸಚಿವರು ಫೋನ್ ಕರೆ ಸ್ವೀಕರಿಸಲ್ಲ. ಮುಖ್ಯಮಂತ್ರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಿ ಮಾತಾಡ್ತಾರೆ. ಆದರೆ, ಕೆಲ ಮಂತ್ರಿಗಳು ಫೋನ್ ಕರೆ ಸ್ವೀಕರಿಸಲ್ಲ. ಅದರಲ್ಲಿ ಶಿವರಾಜ್ ತಂಗಡಗಿ ಆದರೂ ಫೋನ್ ರಿಸೀವ್ ಮಾತನಾಡುತ್ತಾರೆ ಅದೇ ನಗಮೆ ಖುಷಿ ಎಂದು ಸ್ವಾಮೀಜಿ ಹೇಳಿದರು.

ಚಾಮರಾಜನಗರಕ್ಕೆ ಭೇಟಿ ಕೊಟ್ಟರೆ ಸಿಎಂ ಸ್ಥಾನ ಹೋಗುತ್ತೆಂಬುದು ಸುಳ್ಳು: ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚಾಮರಾಜನಗರಕ್ಕೆ ಹಿಂದಿನ ಸಿಎಂಗಳು ಹೋಗ್ತಿರಲಿಲ್ಲ. ಚಾಮರಾಜನಗರಕ್ಕೆ ಭೇಟಿ ಕೊಟ್ರೆ ಮುಖ್ಯಮಂತ್ರಿ ಸ್ಥಾನ ಹೋಗಿಬಿಡುತ್ತೆ ಅಂತ ನಂಬುತ್ತಿದ್ದರು. ನಾನು 12 ಸಲ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದೇನೆ. ಆದರೂ ಎರಡನೇ ಸಲ ಮತ್ತೆ ಮುಖ್ಯಮಂತ್ರಿ ಆಗಿದ್ದೇನೆ. ಅವರೆಲ್ಲ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರಿಂದ ಸಿಎಂ ಸ್ಥಾನ ಕಳೆದುಕೊಳ್ಳಲಿಲ್ಲ. ಬದಲಾಗಿ ರಾಜಕೀಯ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಅಷ್ಟೇ. ಚಾಮರಾಜನಗರ ಭೇಟಿ ಕೊಟ್ರೆ ಸಿಎಂ ಸ್ಥಾನ ಹೋಗುತ್ತೆ ಅನ್ನೋದು ಮೂಢ ನಂಬಿಕೆ. ಎಸ್‌.ಆರ್. ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಏಕೆ ಹೋಯಿತು ಎಂದು ನಿಮಗೆ ಗೊತ್ತು ಎಂದರು.

ಸಾವಿನ ದವಡೆಯಲ್ಲಿದ್ದ ಮಕ್ಕಳಿಗೆ ಮರುಜನ್ಮ ನೀಡಿ, ಪ್ರಾಣಬಿಟ್ಟ ಮಹಾತಾಯಿ

ಕನಕ ಗುರುಪೀಠದ ಶಾಖಾಮಠಕ್ಕೆ ಭೂಮಿ ಪೂಜೆ: ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದರು.‌ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರು, ಶಾಖಾ ಮಠದ ಪೂಜ್ಯರುಗಳಾದ ಈಶ್ವರಾನಂದಪುರಿ ಸ್ವಾಮೀಜಿಯವರು, ಸಿದ್ದರಾಮಾನಂದಪುರಿ ಸ್ವಾಮೀಜಿಯವರು, ಶಿವಾನಂದಪುರಿ ಸ್ವಾಮೀಜಿಯವರು, ತ್ರಿದಂಡಿ ವೆಂಕಟರಾಮಾನುಜ ಸ್ವಾಮೀಜಿಯವರು, ಸಮಾಜದ ಮುಖಂಡರಾದ ಹೆಚ್.ವಿಶ್ವನಾಥ್, ಸಚಿವರಾದ ಬೈರತಿ ಸುರೇಶ್‌, ಶಾಸಕ ಎಸ್‌.ಟಿ. ಸೋಮಶೇಖರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Follow Us:
Download App:
  • android
  • ios