ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಡಿಕೆ ಶಿವಕುಮಾರ ಉಪಮುಖ್ಯಮಂತ್ರಿಯಾಗಿ ಆಯ್ಕೆ ಆಗಿದೆ. ಇಬ್ಬರೂ ಅರ್ಹರಾಗಿದ್ದಾರೆ ಎಂದು ಲಕ್ಷ್ಮಣ್ ಸವದಿ ಹೇಳಿದರು.
ಬೆಂಗಳೂರು (ಮೇ.18) ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಡಿಕೆ ಶಿವಕುಮಾರ ಉಪಮುಖ್ಯಮಂತ್ರಿಯಾಗಿ ಆಯ್ಕೆ ಆಗಿದೆ. ಇಬ್ಬರೂ ಅರ್ಹರಾಗಿದ್ದಾರೆ ಎಂದು ಲಕ್ಷ್ಮಣ್ ಸವದಿ ಹೇಳಿದರು.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಹಿರಿಯರು, ಡಿಕೆ ಶಿವಕುಮಾರ ಅವರು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದವರು, ಇವರಿಬ್ಬರೂ ಅರ್ಹರು ಎಂದರು.
ಬಿಜೆಪಿಯವರು ಶತಾಯಗತಾಯ ಜಗದೀಶ್ ಶೆಟ್ಟರ್ ಸೋಲಿಸಲು ಹಣದ ಹೊಳೆಯನ್ನೇ ಹರಿಸಿದ್ದಾರೆ. ಅವರು ಅಥಣಿ ಮತ್ತು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ್ರು. ಅವೆರಡೂ ಕ್ಷೇತ್ರಗಳಲ್ಲಿ ಕೇಂದ್ರ ನಾಯಕರನ್ನು ಕರೆಸಿದ್ರು. ಅಮಿತ್ ಶಾ, ನರೇಂದ್ರ ಮೋದಿ ರೋಡ್ ಶೋ ಮಾಡಿದ್ರು. ಅವರಿಗೆ ಗ್ರೌಂಡ್ ರಿಯಾಲಿಟಿ ಇರಲಿಲ್ಲ. ರಾಜ್ಯ ಬಿಜೆಪಿ ನಾಯಕರು ಅವರನ್ನು ಕರೆಸಿ ಮುಜುಗರ ತರಿಸಿಬಿಟ್ರು. ಪಾಪ ಅವರನ್ನು ಕರೆಸಿ ಮುಜುಗರ ತರಿಸಬಾರದಿತ್ತು. ನಾನು ಕೇಂದ್ರ ನಾಯಕರ ಜೊತೆ ಅನೇಕ ವರ್ಷಗಳ ಒಡನಾಟವಿದೆ ಹೀಗಾಗಿ ನನಗೆ ನರೇಂದ್ರ ಮೋದಿ, ಅಮಿತ್ ಶಾರ ಮೇಲೆ ಗೌರವ ಇದೆ.
ಸಿಎಂ ಆಗಿ ಸಿದ್ದರಾಮಯ್ಯ ಮೇ.20ಕ್ಕೆ ಪ್ರಮಾಣವಚನ, ಡಿಕೆ ಶಿವಕುಮಾರ್ ಏಕೈಕ ಉಪಮುಖ್ಯಮಂತ್ರಿ!
ನನಗೆ ಅವರ ಮೇಲೆ ಅನುಕಂಪ ಕೂಡ ಇದೆ. 50-50 ಇದ್ದ ಕ್ಷೇತ್ರದಲ್ಲಿ ಮೋದಿ, ಅಮಿತ್ ಶಾ ಕರೆಸಿದ್ರೆ ಅನುಕೂಲ ಆಗ್ತಿತ್ತು. ಆದರೆ ರಾಜ್ಯ ಬಿಜೆಪಿ ನಾಯಕರು ಹಾಗೆ ಮಾಡಲಿಲ್ಲ. ಬಿಜೆಪಿಗೆ 65 ಸೀಟ್ ಬರಲಿದೆ ಎಂದು ಚುನಾವಣೆ ಪ್ರಚಾರದಲ್ಲಿ ಹೇಳಲು ಕಾರಣ ನನಗೆ ಆ ಬಗ್ಗ ಸ್ಪಷ್ಟ ಮಾಹಿತಿ ಇತ್ತು. ನಾನು ಮಾಹಿತಿ ಕಲೆ ಹಾಕಿದ್ದೆ. ಹೀಗಾಗಿ ಅಷ್ಟು ಸರಿಯಾಗಿ ಹೇಳಿದ್ದೆ ಎಂದರು.
ಡಿಸಿಎಂ ಸ್ಥಾನದಿಂದ ಯಾಕೆ ಕೈಬಿಟ್ರಿ?
ಸೋತವರನ್ನು ಉಪಮುಖ್ಯಮಂತ್ರಿ ಮಾಡಿದ್ದೇವೆ ಎಂದು ಬಿಜೆಪಿಗರು ಹೇಳುತ್ತಿರುವ ವಿಚಾರ ಪ್ರಸ್ತಾಪಿಸಿದ ಸವದಿ, ಪದೇಪದೆ ಹೇಳ್ತಾರೆ. ಸೋತವನ ಮಂತ್ರಿ ಮಾಡಿದ್ದೇವೆ ಎಂದು. ಅವರು ಇನ್ನೂ 25 ವರ್ಷ ಹೀಗೆ ಹೇಳ್ತಾನೆ ಇರ್ತಾರೆ. ಹೇಳೋದು ಬಿಡಲ್ಲ. ಸರಿ ನನ್ನನ್ನು ಯಾಕೆ ಡಿಸಿಎಂ ಸ್ಥಾನದಿಂದ ಕೈಬಿಟ್ರಿ..? ಸಿಡಿ ಕೇಸ್ ಇತ್ತಾ ? ಮತ್ತೇನಾದರೂ ಕೇಸ್ ಇತ್ತಾ? ಬಿಡಿ, ಈಗ ಮತ್ತೆ ಅದದೇ ಹೇಳಿ ಪ್ರಯೋಜನ ಇಲ್ಲ. ನಾನು ಈಗ ಯಡಿಯೂರಪ್ಪರ(BS Yadiyurappa) ಮನಸ್ಸಿಗೆ ನೋವು ಮಾಡಲ್ಲ. ಯಡಿಯೂರಪ್ಪರಿಗೆ ವ್ಯಂಗ್ಯ ಭರಿತ ಟಾಂಗ್ ನೀಡಿದರು.
ನಾನು ಬಿಜೆಪಿ ಕಟ್ಟಿದ್ದೇನೆ
ನನಗೆ ಯಾವ ಸ್ಥಾನವೂ ಸುಮ್ಮನೆ ಕರೆದುಕೊಟ್ಟಿಲ್ಲ. ನಾನೂ ಪಕ್ಷ ಕಟ್ಟಿದ್ದೇನೆ. ನಾನೇನು ಪಂಚಾಯತಿ ಮೆಂಬರ್ ಆಗಿದ್ನಾ ಕರೆದು ಕೊಟ್ಟೆ ಅನ್ನೋದಕ್ಕೆ? ನಾನು ಪಾರ್ಟಿ ಕಟ್ಟುವಾಗ ಆ ಭಾಗದಲ್ಲಿ ಬಿಜೆಪಿಯ ಒಬ್ಬ ಗ್ರಾಮ ಪಂಚಾಯತಿ ಸದಸ್ಯ ಕೂಡ ಇರಲಿಲ್ಲ. ಇದೆಲ್ಲ ಈಗ ಮುಗಿದ ಕತೆ ಎಂದರು.
ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ,ರಹಸ್ಯ ಬಯಲು ಮಾಡಿದ ಹೈಕಮಾಂಡ್!
ನನ್ನನ್ನು ಮೂಲೆಗುಂಪು ಮಾಡಲು ಯತ್ನಿಸಿದರು
ಜಾರಕಿಹೊಳಿ ಕುಟುಂಬ ಅಂತಲ್ಲ, ಅವರಲ್ಲಿನ ಕೆಲವು ವ್ಯಕ್ತಿಗಳು ಹಿನ್ನಡೆ ಮಾಡುವ ಪ್ರಯತ್ನ ಮಾಡಿದ್ರು.. ಬಿಜೆಪಿಯಲ್ಲಿ ನನ್ನ ಮೂಲೆಗುಂಪು ಮಾಡುವ ಪ್ರಯತ್ನ ಮಾಡಿದ್ರು. ಹೀಗಾಗಿ ಕಾಂಗ್ರೆಸ್ ಗೆ ಬರಬೇಕಾಯಿತು.
ನಾನು ಸಚಿವ ಸ್ಥಾನ ಕೇಳಿಲ್ಲ. ಆದರೆ . ಕ್ಷೇತ್ರದ ಅಭಿವೃದ್ಧಿಗೆ ಹಣ ಕೇಳಿದ್ದೇನೆ. ಅನುದಾನ ಕೇಳಿದ್ದೇನೆ. ನಾನು ಸಚಿವನಾಗುವ ಲಿಸ್ಟ್ ನಲ್ಲಿ ಇದ್ದೇನೊ ಇಲ್ಲವೊ ಗೊತ್ತಿಲ್ಲ. ಅದೆಲ್ಲ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
