ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ,ರಹಸ್ಯ ಬಯಲು ಮಾಡಿದ ಹೈಕಮಾಂಡ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ. ಗುಟ್ಟು ಬಿಟ್ಟುಕೊಟ್ಟ ಕಾಂಗ್ರೆಸ್ ಹೈಕಮಾಂಡ್
ನವದೆಹಲಿ(ಮೇ.18): ಹಲವು ಸುತ್ತಿನ ಮಾತುಕತೆ ಬಲಿಕ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಮುಖ್ಯಮಂತ್ರಿ ಹೆಸರು ಘೋಷಣೆ ಮಾಡಿದೆ. ಸಿದ್ದರಾಮಯ್ಯ ಕರ್ನಾಟಕ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಮೂರು, ನಾಲ್ಕು ಡಿಸಿಎಂ ಹುದ್ದೆ ಮಾತುಗಳನ್ನು ತಳ್ಳಿಹಾಕಿರುವ ಹೈಕಮಾಂಡ್, ಸಿದ್ದು ಕ್ಯಾಬಿನೆಟ್‌ನಲ್ಲಿ ಏಕೈಕ ಉಪಮುಖ್ಯಮಂತ್ರಿ ಇರಲಿದ್ದಾರೆ. ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಹೈಕಮಾಂಡ್ ಹೇಳಿದೆ. ಇದರ ಜೊತೆ ಮೊದಲ ಹಂತದಲ್ಲಿ 7 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ.
ಇಂದು ದೆಹಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಸಂಭಾವ್ಯ ಸಚಿವರ ಪಟ್ಟಿಯನ್ನು ಬಹಿರಂಗೊಳಿಸಿದ್ದಾರೆ. ಮೊದಲ ಹಂತದಲ್ಲಿ 6 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದಿದ್ದಾರೆ. ಸಿಎಂ ಹಾಗೂ ಡಿಸಿಎಂ ಜೊತೆಗೆ 6 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಡಾ.ಜಿ ಪರಮೇಶ್ವರ್, ಎಂ.ಬಿ ಪಾಟೀಲ್, ಕೆಎಚ್ ಮುನಿಯಪ್ಪ, ಹೆಚ್‌ಕೆ ಪಾಟೀಲ್, ಬಿಕೆ ಹರಿಪ್ರಸಾದ್, ಸತೀಶ್ ಜಾರಕಿಹೊಳಿ ಹಾಗೂ ಯುಟಿ ಖಾದರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ,ರಹಸ್ಯ ಬಯಲು ಮಾಡಿದ ಹೈಕಮಾಂಡ್!
ಸಿದ್ದು ಕ್ಯಾಬಿನೆಟ್: ಮೊದಲ ಹಂತದಲ್ಲಿ 7 ಸಚಿವರ ಪ್ರಮಾಣವಚನ(ಸಂಭಾವ್ಯ ಪಟ್ಟಿ)
ಡಾ.ಜಿ ಪರಮೇಶ್ವರ್
ಎಂ.ಬಿ ಪಾಟೀಲ್
ಕೆಎಚ್ ಮುನಿಯಪ್ಪ
ಹೆಚ್‌ಕೆ ಪಾಟೀಲ್
ಬಿಕೆ ಹರಿಪ್ರಸಾದ್
ಸತೀಶ್ ಜಾರಕಿಹೊಳಿ
ಯುಟಿ ಖಾದರ್
ಇದರಲ್ಲಿ ಹೆಚ್‌ಕೆ ಪಾಟೀಲ್ ಸ್ವೀಕರ್ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ಇದೀಗ ಕರ್ನಾಟಕದಲ್ಲಿ ಒಂದೆಡೆ ಸಂಭ್ರಮ ಮತ್ತೊದೆಂಡೆ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಮೂವರು ಡಿಸಿಎಂ, ನಾಲ್ವರು ಡಿಸಿಎಂ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರಲ್ಲಿ ದಿಲತ, ಲಿಂಗಾಯಿತ, ಅಲ್ಪಸಂಖ್ಯಾತ ಸೇರಿದಂತೆ ಹಲವು ಸಮುದಾಯಕ್ಕೆ ಡಿಸಿಎಂ ಪಟ್ಟಿ ನೀಡುವ ಮಾತುಗಳು ಕೇಳಿಬಂದಿತ್ತು. ಇದೀಗ ಏಕೈಕ ಡಿಸಿಎಂ ಅನ್ನೋ ಘೋಷಣೆ ಬೆನ್ನಲ್ಲೇ ಹಲವು ಸಮುದಾಯಗಳು ಪ್ರತಿಭಟನ ಆರಂಭಿಸಿದೆ. ಡಾ.ಡಿ ಪರಮೇಶ್ವರ್, ಕಾಂಗ್ರೆಸ್ ಹೈಕಮಾಂಡ್ ಘೋಷಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನಗೆ ಡಿಸಿಎಂ ಸ್ಥಾನ ನೀಡಿದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ನೂತನ ಸಿಎಂ: ಸಿದ್ದು ಫೋಟೋಗೆ ಕ್ಷೀರಾಭಿಷೇಕ, ಅಭಿಮಾನಿಗಳ ಸಂಭ್ರಮಾಚರಣೆ..!
ಅಧಿಕಾರ ಹಂಚಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಮಾಹಿತಿ ನೀಡಿಲ್ಲ. ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಅಥವಾ ಮಧ್ಯದಲ್ಲಿ ಡಿಕ ಶಿವಕುಮಾರ್‌ಗೆ ಅಧಿಕಾರ ಹಸ್ತಾಂತರ ಮಾಡುತ್ತಾರೋ? ಅನ್ನೋ ಪ್ರಶ್ನೆಗೆ ಹೈಕಮಾಂಡ್ ಉತ್ತರಿಸಿಲ್ಲ. ಇದೇ ವೇಳೆ ನಾವು ಒಗ್ಗಟ್ಟಾಗಿದ್ದೇವೆ ಅನ್ನೋ ಸೂಚನೆಯನ್ನು ಹೈಕಮಾಂಡ್ ನೀಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲ್ಲುವ ಮೂಲಕ ಭಾರಿ ಬಹುಮತ ಪಡೆದುಕೊಂಡಿತ್ತು. ಆಡಳಿತರೂಢ ಬಿಡೆಪಿ 65 ಸ್ಥಾನಕ್ಕೆ ಕುಸಿದಿತ್ತು. ಇನ್ನು ಜೆಡಿಎಸ್ 19 ಸ್ಥಾನ ಗೆದ್ದರೆ, ಇತರರ 4 ಸ್ಥಾನ ಗೆದ್ದುಕೊಂಡಿದ್ದರು. ಕರ್ನಾಟಕದಲ್ಲಿ ಮೇ.10ಕ್ಕೆ ಚುನಾವಣೆ ನಡೆದು, ಮೇ.30ಕ್ಕೆ ಫಲಿತಾಂಶ ಘೋಷಣೆಯಾಗಿತ್ತು.