ಸಿಎಂ ಸಿದ್ದರಾಮಯ್ಯ 'ಆಷಾಢ ಅಶುಭ' ಆಚರಣೆ: ನಟ ಅಹಿಂಸಾ ಚೇತನ್ ಕಿಡಿ
ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದ ನಾಯಕ ನಟ ಅಹಿಂಸಾ ಚೇತನ್ ಈಗ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರು (ಜು.16): ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದ ನಾಯಕ ನಟ ಅಹಿಂಸಾ ಚೇತನ್ ಈಗ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ಇವರು ಯಾರ ಪರವಾಗಿದ್ದಾರೆ ಎಂಬುದೇ ತಿಳಿಯುತ್ತಿಲ್ಲ.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸುಮಾರು ಎರಡು ತಿಂಗಳು ಕಳೆಯುತ್ತಾ ಬಂದಿದೆ. ಆದರೆ, ಇಲ್ಲಿಯವರೆಗೆ ಸಿದ್ದರಾಮಯ್ಯ ಅವರು ಸರ್ಕಾರದ ಅಧಿಕೃತ ನಿವಾಸಕ್ಕೆ ತೆರಳಿಲ್ಲ. ಈ ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗ ಮೂಡನಂಬಿಕೆಗಳ ವಿರೋಧಿ ಕಾನೂನು ಜಾರಿಗೆ ತರಲು ಮುಂದಾಗಿದ್ದರು. ಆದರೆ, ಈಗ ಅವರೇ ಮೂಢನಂಬಿಕೆಗಳನ್ನು ಆಚರಣೆ ಮಾಡುತ್ತಿದ್ದಾರೆ. ಆಷಾಢ ಮಾಸವಿದ್ದ ಕಾರಣ ಈ ಮಾಸ ಅಶುಭವೆಂದು ಮನೆಯನ್ನು ಬದಲಿಸದೇ ಮುಂದಿನ ತಿಂಗಳಲ್ಲಿ ಮನೆ ಪ್ರವೇಶ ಮಾಡಲಿದ್ದಾರೆ ಎಂಬ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನಟ ಅಹಿಂಸಾ ಚೇತನ್ ಕಿಡಿಕಾರಿದ್ದಾರೆ.
ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 1 ಕೋಟಿ ವಿಮೆ: ಇಷ್ಟು ಬೃಹತ್ ಮೊತ್ತದ ಪರಿಹಾರ ದೇಶದಲ್ಲೇ ಮೊದಲು..!
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಅಹಿಂಸಾ ಚೇತನ್ "ಆಷಾಢದ ‘ಅಶುಭ’ ಅವಧಿಯ ನಂತರ ಹೊಸ ಮನೆಗೆ ಶಿಫ್ಟ್ ಆಗಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ನಿಜವಾದ ವೈಜ್ಞಾನಿಕ ಚಿಂತಕನಿಗೆ ಇಂತಹ ಮೂಢನಂಬಿಕೆಯ ಕಾಳಜಿಗಳು ಏಕೆ ಬೇಕು? 2 ತಿಂಗಳ ಹಿಂದೆ 'ದೇವರ' ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರು ಈಗ ಆಷಾಢ ಅಸಂಬದ್ಧತೆ… ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಂದ್ರಯಾನ-3 ಇದರ ಕೆಲವು ವಿಜ್ಞಾನಿಗಳ ಬೂಟಾಟಿಕೆಯ ಜೊತೆಗೆ ಸ್ಪರ್ಧೆ ಮಾಡುತ್ತಿದ್ದಾರ?" ಎಂದು ಟೀಕೆ ಮಾಡಿದ್ದಾರೆ.
ಸಿದ್ದರಾಮಯ್ಯ ಬಜೆಟ್ ಮೇಲೂ ಟೀಕಾ ಪ್ರಹಾರ: ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದಾಗ ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು. ಜೊತೆಹೆ, ಮೇಕೆದಾಟು ಯೋಜನೆ ಕೆಟ್ಟ ಯೋಜನೆ ಎಂದು ಜರಿದಿದ್ದರು. "ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಇದೊಂದು ಕೆಟ್ಟ ಯೋಜನೆ. ವಿಪರ್ಯಾಸವೆಂದರೆ, ‘ಪರಿಸರ’ ಮತ್ತು ‘ಪ್ರವಾಹ ನಿರ್ವಹಣೆ’ಯೇ ನಮ್ಮ ಸರ್ಕಾರವು ಜಯಿಸಲು ಪ್ರಯತ್ನಿಸುತ್ತಿರುವ ಮುಖ್ಯ ಸವಾಲುಗಳು (ಬ್ರಾಂಡ್ ಬೆಂಗಳೂರು) ಮೇಕೆದಾಟು ಅಣೆಕಟ್ಟು ಪರಿಸರವನ್ನು ನಾಶಪಡಿಸುತ್ತದೆ. ಬೆಂಗಳೂರಿನ ಬಳಿಯ ಹಳ್ಳಿಗಳಲ್ಲಿ ಇದರಿಂದ ಪ್ರವಾಹ ಸಂಭವಿಸುತ್ತದೆ" ಎಂದು ಸರ್ಕಾರದ ನಡೆಯನ್ನು ವಿರೋಧಿಸಿದ್ದರು.
ಇಸ್ರೋ ರಾಕೆಟ್ ಪೂಜೆ ಖಂಡಿಸಿದ ಪ್ರಗತಿಪರರಿಗೆ ಚಂದ್ರಯಾನವೇ ಗೊತ್ತಿಲ್ಲ! ಮಂಗಳಯಾನವೆಂದು ಖಂಡನೆ
ಚಂದ್ರಯಾನದ ಮಾದರಿ ಪೂಜೆಗೂ ವಿರೋಧಿಸಿದ್ದ ಚೇತನ್: "ನಮ್ಮ 3ನೇ ಚಂದ್ರಯಾನಕ್ಕೆ ಒಂದು ದಿನ ಮೊದಲು, ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಸಣ್ಣ ಗಾತ್ರದ ಪ್ರತಿರೂಪದೊಂದಿಗೆ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದು ತುಂಬಾ ಅಸಂಬದ್ಧ ಮತ್ತು ಬೂಟಾಟಿಕೆ. ಕನ್ವಿಕ್ಷನ್ ಮೂಲಕ ವೈಜ್ಞಾನಿಕ ಮನೋಧರ್ಮ ಹೊಂದಿರುವವರು ಮತ್ತು ಪದವಿಗಳಿಂದ ಕೂಡಿರುವ/ಹೊಂದಿರುವ ವಿಜ್ಞಾನಿಗಳ ನಡುವೆ ತುಂಬಾ ದೊಡ್ಡ ವ್ಯತ್ಯಾಸದ ಸಾಗರವಿದೆ — ಮೊದಲ ಗುಂಪು ನಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ; ಎರಡನೇ ಗುಂಪು ನಮ್ಮನ್ನು ಹಿಂದಕ್ಕೆ ಎಳೆಯುತ್ತದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದರು.