Asianet Suvarna News Asianet Suvarna News

ಸಿಎಂ ಮನೆಯಲ್ಲಿ ಬ್ರೇಕ್‌ಫಾಸ್ಟ್ ನಂತರ ಸೈಲೆಂಟಾದ ಕಾಂಗ್ರೆಸ್ ಸಚಿವ, ಶಾಸಕರು! ಸಚಿವ ಲಾಡ್ ಹೇಳಿದ್ದೇನು?

ಕುರಿತಂತೆ ಸ್ವಪಕ್ಷೀಯ ಸಚಿವ ಶಾಸಕರೇ ಬಹಿರಂಗ ಹೇಳಿಕೆ ನೀಡಿ ಪೇಚಿಗೆ ಸಿಲುಕಿಸುತ್ತಿರುವ ಹಿನ್ನೆಲೆ ಚರ್ಚೆಗೆ ಫುಲ್ ಸ್ಟಾಪ್ ಹಾಕಲು ಮುಂದಾದ ಕಾಂಗ್ರೆಸ್ ನಾಯಕರು. ಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ನಂತರ ಸೈಲೆಂಟಾದ ಕಾಂಗ್ರೆಸ್‌ ಸಚಿವರು, ಶಾಸಕರು. 

Karnataka CM Change issue Minister santosh lad statement at davanagere rav
Author
First Published Nov 4, 2023, 5:45 PM IST

ದಾವಣಗೆರೆ (ನ.4): ಕುರಿತಂತೆ ಸ್ವಪಕ್ಷೀಯ ಸಚಿವ ಶಾಸಕರೇ ಬಹಿರಂಗ ಹೇಳಿಕೆ ನೀಡಿ ಪೇಚಿಗೆ ಸಿಲುಕಿಸುತ್ತಿರುವ ಹಿನ್ನೆಲೆ ಚರ್ಚೆಗೆ ಫುಲ್ ಸ್ಟಾಪ್ ಹಾಕಲು ಮುಂದಾದ ಕಾಂಗ್ರೆಸ್ ನಾಯಕರು. ಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ನಂತರ ಸೈಲೆಂಟಾದ ಕಾಂಗ್ರೆಸ್‌ ಸಚಿವರು, ಶಾಸಕರು. 

ಸಿಎಂ ಬದಲಾವಣೆ ವಿಚಾರ ಬಹಿರಂಗ ಹೇಳಿಕೆ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದ್ದರೂ,  ನಿನ್ನೆವರೆಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ, ಪ್ರಿಯಾಂಕ್ ಖರ್ಗೆ ಪರವಾಗಿ ಕಾಂಗ್ರೆಸ್ ಶಾಸಕರು ಸಚಿವರು ಮುಂದಿನ ಸಿಎಂ ಕುರಿತು ಬಹಿರಂಗ ಹೇಳಿಕೆ ನೀಡುತ್ತಿದ್ದರು. ಆದರೆ ಇಂದು ಸಿಎಂ ಮನೆಯಲ್ಲಿ ಬ್ರೇಕ್‌ಫಾಸ್ಟ್ ನಂತರ ಸಚಿವ, ಶಾಸಕರು ಗಪ್ ಚುಪ್ ಆಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಂತೋಷ್, ನಾವೇ ಸ್ವತಃ ಚರ್ಚೆ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.

ಪರಮೇಶ್ವರ್ ಗೆ ಸಿಎಂ ಆಗುವ ಅವಕಾಶವಿದೆ; ಸಹಕಾರಿ ಸಚಿವ ಕೆ.ಎನ್ ರಾಜಣ್ಣ

ದಾವಣಗೆರೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾರ್ಮಿಕ ಸಚಿವ ಸಂತೋಷ ಲಾಡ್ , ಸಿಎಂ ಬದಲಾವಣೆ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಹೀಗಾಗಿ ಅದರ ವಿಚಾರ ಏನೇ ಇದ್ದರೂ ಸಿಎಂ ಹಾಗೂ ಡಿಸಿಎಂ ಮಾತ್ರ ಮಾತನಾಡುತ್ತಾರೆ. ಯಾರಾರು ಏನು ಮಾತನಾಡಿದ್ದರೂ ಅವರೇ ಅದರ ಕುರಿತು ಮಾತಾಡಬೇಕು.

ಬಿಜೆಪಿ ಬಗ್ಗೆ ಯಾರೂ ಏಕೆ ಮಾತಾಡಲ್ಲ?

ಬಿಜೆಪಿ ಬಗ್ಗೆ ಯಾರು ಯಾಕೆ ಮಾತನಾಡುವುದಿಲ್ಲ? ಕಳೆದ 9 ವರ್ಷಗಳಿಂದ ಪ್ರಧಾನಿ ಮೋದಿ ಮತ್ತು ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಯಾರೂ ಕೇಳಲ್ಲಾ. ಈಗಾಗಲೇ ಲೋಕಸಭಾ ಚುನಾವಣೆಗೆ ಅಜೆಂಡಾ ಆರಂಭಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಅವರು ಸಾಕಷ್ಟು ಗಿಮಿಕ್ ಮಾಡ್ತಾರೆ, ಕಾಂಟ್ರವರ್ಸಿ ಮಾತ್ರ ಎಳೀತಾರೆ. ಮುಸ್ಲಿಂ ವಿಚಾರ, ಹಿಂದುತ್ವದ ವಿಚಾರ, ರಾಮಮಂದಿರ ವಿಚಾರ ಮುನ್ನೆಲೆಗೆ ತರ್ತಾರೆ. ನಾವು ಮೋದಿ ಅವರ 9 ವರ್ಷದ ಸಾಧನೆ ಪಟ್ಟಿ ಇವಾಗ ಇಡಕೊಳ್ಳ್ತೇವೆ. ಅವರು ಯಾವುದಕ್ಕೂ ಸರಿಯಾದ ಉತ್ತರ ನೀಡಲ್ಲ. ಅವರು ಕೇವಲ ಭಾಷಣ ಮಾಡ್ತಾರೆ.

5 ವರ್ಷ ಸಿದ್ದರಾಮಯ್ಯ ಸಿಎಂ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಸಹಮತ

ಇನ್ನು ಲೋಕಸಭಾ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಚಿವ ಲಾಡ್, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮೂರು ಜನರ ಹೆಸರು ನೀಡುವ ಕುರಿತು ಇನ್ನೂ ಚರ್ಚೆ ಆಗಿಲ್ಲ. ನನಗು ಸಹ ಬೀದರ್ ಜವಾಬ್ಧಾರಿ ನೀಡಿದ್ದಾರೆ ಎಂದು ಹೇಳಿದರು.

Follow Us:
Download App:
  • android
  • ios