ಪರಮೇಶ್ವರ್ ಗೆ ಸಿಎಂ ಆಗುವ ಅವಕಾಶವಿದೆ; ಸಹಕಾರಿ ಸಚಿವ ಕೆ.ಎನ್ ರಾಜಣ್ಣ
ಗೃಹಸಚಿವ ಜಿ.ಪರಮೇಶ್ವರ್ ಗೆ ಸಿಎಂ ಆಗುವ ಅವಕಾಶವಿದೆ. ಪರಮೇಶ್ವರ್ ಈಗ ಹೋಮ್ ಮಿನಿಸ್ಟರ್ ಆಗಿದ್ದಾರೆ. ಮುಂದೆ ಏನು ಬೇಕಾದ್ರೂ ಆಗಬಹುದು ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ತುಮಕೂರು (ನ.3): ಗೃಹಸಚಿವ ಜಿ.ಪರಮೇಶ್ವರ್ ಗೆ ಸಿಎಂ ಆಗುವ ಅವಕಾಶವಿದೆ. ಪರಮೇಶ್ವರ್ ಈಗ ಹೋಮ್ ಮಿನಿಸ್ಟರ್ ಆಗಿದ್ದಾರೆ. ಮುಂದೆ ಏನು ಬೇಕಾದ್ರೂ ಆಗಬಹುದು ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ತುಮಕೂರಿನಲ್ಲಿ ಪೊಲೀಸ್ ಇಲಾಖೆಯ ಸಮುಚ್ಚಯ ಉದ್ಗಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾಕ್ಟರೇ ನಿಮಗೆ ಅದೃಷ್ಟ ಇದೆ ನಡೆಸುತ್ತೀರಿ ಅಂತ ಹಿಂದೊಮ್ಮೆ ಹೇಳಿದ್ದೆ. ಯಾಕಂದ್ರೆ ಅವರಿಗೆ ಅದೃಷ್ಟ ಇದೆ ಅಂತಾ ನಾನು ಭಾವಿಸಿದ್ದೇನೆ. ನಮ್ಮ ಜಿಲ್ಲೆಯಿಂದ ಒಬ್ಬ ಮುಖ್ಯಮಂತ್ರಿ ಆಗ್ತಾರೆ ಅಂದ್ರೆ ನಾವೆಲ್ಲಾ ಸಂತೋಷ ಪಡುತ್ತೇವೆ ನಾವೆಲ್ಲ ಮುಖ್ಯಮಂತ್ರಿ ಆದಂತೆ ಭಾವಿಸುತ್ತೇನೆ ಎಂದು ಹೇಳಿದರು.
5 ವರ್ಷ ಸಿದ್ದರಾಮಯ್ಯ ಸಿಎಂ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಸಹಮತ
ಸಿದ್ದರಾಮಯ್ಯ ಇರೋವರೆಗೆ ನಾವೆಲ್ಲಾ ಸಿದ್ದರಾಮಯ್ಯ ಪರ. ನಾವು, ಪರಮೇಶ್ವರ್ ಇಬ್ಬರೂ ಅವರ ಪರವಿರುತ್ತೇವೆ. ಸಿದ್ದರಾಮಯ್ಯ ಹೊರತು ಪಡಿಸಿದ್ರೆ, ಪರಮೇಶ್ವರ್ ಸಿಎಂ ಆಗಬೇಕು ಅಂತ ಬಯಸುತ್ತೇವೆ ಎಂದರು.
ಎಐಸಿಸಿಯವರು ನಮಗೆ ಹೇಳಿದ್ದಾರೆ ಏನು ಮಾತನಾಡಬಾರದು ಅಂತ. ನಾನು ಪರಮೇಶ್ವರ್ ಒಟ್ಟಿಗೆ ಸಭೆಯಲ್ಲಿ ಕಾಣಿಸಿಕೊಂಡು ತುಂಬಾ ದಿನವಾಗಿತ್ತು. ಹಾಗಾಗಿ ನನ್ನ ಮನಸಿನ ಭಾವನೆ ಹೇಳಿದ್ದೇನೆ ಎಂದರು.
ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಕೂಡ. ಈಗ ಮಾತನಾಡಿದ್ದು ಆಗೋಯ್ತು, ಮುಂದೆ ಮಾತನಾಡಲ್ಲ ಅಂತ ಹೇಳ್ತೀವಿ. ನಾನಂತೂ ಮುಂದೆ ಚುನಾವಣೆಗೆ ನಿಲ್ಲೋದಿಲ್ಲ ಎಂದರು. ರಾಜ್ಯದಲ್ಲಿ ಸದ್ಯಕ್ಕೆ ವಿರೋಧ ಪಕ್ಷದವರು ಅಂದ್ರೆ ನೀವೇ ಮಿಡಿಯಾದವರು. ನಾನು ವೇದಿಕೆ ಮೇಲೆ ಹೇಳಿದ್ದೆಲ್ಲ ನೀವು ಕೇಳಿಸಿಕೊಂಡಿದ್ದೀರಲ್ವಾ ಅದಕ್ಕೆ ನಾನು ಬದ್ದ ಎಂದರು.
ಐದು ವರ್ಷವೂ ನಾನೇ ಸಿಎಂ ಆಗಿರ್ತೀನಿ: ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಎಚ್ಚರಿಕೆ ರವಾನಿಸಿದ ಸಿದ್ದರಾಮಯ್ಯ
ನಾನು ಜೀವಮಾನದಲ್ಲಿ ಏನೆಲ್ಲಾ ಹೇಳಿದ್ದೇನೋ ಅದ್ಯಾವುದು ಸುಳ್ಳಾಗಿಲ್ಲ. ಎಲ್ಲಾ ವಿಚಾರದಲ್ಲೂ ನಾನು ಹೇಳಿದ ಯಾವ ವಿಚಾರವು ಅಸತ್ಯವಾಗಿಲ್ಲ ಎಂದರು.
ಪರಮೇಶ್ವರ್ ಸಿಎಂ ಆಗ್ತಾರೆ ಅನ್ನುವ ವಿಚಾರವು ಸಹ ಅಸತ್ಯವಾಗಲ್ಲ. ಸಿದ್ದರಾಮಯ್ಯ ಅವರು ಯಾವಾಗ ಬಿಡ್ತಾರೋ. ಅವಾಗ ಪರಮೇಶ್ವರ್ ಮುಖ್ಯಮಂತ್ರಿ ಆಗ್ತಾರೆ ಎಂದರು. ಇದೇ ವೇಳೆ ನನಗೆ ಸಚಿವನಾಗಿರೋದೆ ಸಾಕು, ನನಗೆ ಯಾವುದೇ ಡಿಸಿಎಂ ಹುದ್ದೆ ಬೇಡ. ನಾನು ಇಲ್ಲಿಯ ತನಕ ಬಂದಿರೋದೆ ಹೆಚ್ಚು ಎಂದರು.
ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್, ತುಮಕೂರು.