ಬೆಂಗಳೂರು (ಮೇ.21): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ವ್ಯವಸ್ಥೆಗಳ ಸುಧಾರಣೆ ಸಂಬಂಧ ಮೇ 27 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. 

ಸಭೆಯಲ್ಲಿ ಅನೇಕ ರೀತಿಯ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.  ಲಾಕ್ ಡೌನ್ ಅವಧಿಯಲ್ಲಿ ತೊಂದರೆ ಅನುಭವಿಸಿರುವ ಉದ್ಯಮಗಳಿಗೆ ಕೆಲ ವಿನಾಯಿತಿ ಘೋಷಣೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ.

ರಾಜ್ಯದ 21 ಜಿಲ್ಲೆಗಳಲ್ಲಿ ಸೋಂಕಿತರಿಗಿಂತ ಚೇತರಿಕೆ ಹೆಚ್ಚಳ ...

ತುರ್ತಾಗಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಗಳಿಗೆ ಆರ್ಥಿಕ ಅನುದಾನ ನೀಡುವುದು. ಕೋರೋನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ  ಶಾಲೆಗಳ ಆರಂಭ ಮತ್ತು ಬೋರ್ಡ್ ಪರೀಕ್ಷೆ ನಡೆಸುವ ಕುರಿತು  ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. 

ಇನ್ನು ವಿವಿಧ ನಿಗಮಗಳಲ್ಲಿರುವ ಅನುದಾನವನ್ನು ಕೋವಿಡ್ ನಿರ್ವಹಣೆಗೆ ಬಳಕೆ ಮಾಡುವ ಬಗ್ಗೆಯು ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ.  ಕೋರೋನಾ ನಿರ್ವಹಣೆಗೆ ಸರ್ಕಾರದ ಜೊತೆಗೆ ಸಹಭಾಗಿತ್ವ ನೀಡುವ ಖಾಸಗಿ ಕಂಪನಿಗಳಿಗೆ ವಿನಾಯಿತಿ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ.

ಪ್ಯಾಕೇಜ್ ಘೋಷಣೆ ವೇಳೆ ಕೈಬಿಟ್ಟಿರುವ ಸಮುದಾಯ ಮತ್ತು ವೃತ್ತಿ ಗಳಿಗೆ ನೆರವು ಘೋಷಣೆ ಬಗ್ಗೆಯು ಮೇ 27 ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona