Asianet Suvarna News Asianet Suvarna News

ಯಶವಂತಪುರ ಕೈ ಅಭ್ಯರ್ಥಿ ನಾಗರಾಜ್ ಬಳಿ ಪತ್ನಿಗಿಂತಲೂ ಹೆಚ್ಚು ಚಿನ್ನ!

ಪಾಳ್ಯ ನಾಗರಾಜ್‌ ಬಳಿ 38 ಕೋಟಿ ಸಂಪತ್ತು| ಯಶವಂತಪುರ ಕಾಂಗ್ರೆಸ್‌ ಅಭ್ಯರ್ಥಿ 1 ಕೇಜಿ ಚಿನ್ನ, ಜಾಗ್ವಾರು ಕಾರು ಒಡೆಯ

Karnataka By Election Yeswanthpur Congress Candidate Palya Nagaraj Declares Assets Worth Rs 38 Crore
Author
Bangalore, First Published Nov 19, 2019, 8:03 AM IST
  • Facebook
  • Twitter
  • Whatsapp

ಬೆಂಗಳೂರು[ನ.19]: ಯಶವಂತಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಂತಿಮ ಕ್ಷಣದಲ್ಲಿ ಕಣಕ್ಕಿಳಿದಿರುವ ಪಿ. ನಾಗರಾಜ್‌ (ಪಾಳ್ಯ ನಾಗರಾಜ್‌) ಅವರು ತಮ್ಮ ಕುಟುಂಬದ ಬಳಿ 38.5 ಕೋಟಿ ರು. ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಸೋಮವಾರ ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಬಳಿ 10 ಲಕ್ಷ ರು. ನಗದು ಹಾಗೂ ಪತ್ನಿ ತುಂಗಾ ಅವರ ಬಳಿ 27.43 ಲಕ್ಷ ರು. ನಗದು ಇದೆ ಎಂದು ಹೇಳಿದ್ದಾರೆ. ನಾಗರಾಜ್‌ ಬಳಿ ಒಟ್ಟು 13.14 ಕೋಟಿ ರು. ಮೌಲ್ಯದ ಚರಾಸ್ತಿ, ಪತ್ನಿ ಬಳಿ 11.61 ಕೋಟಿ ರು. ಮೌಲ್ಯದ ಚರಾಸ್ತಿ, ಪುತ್ರ ಪುನೀತ್‌ ಬಳಿ 3.49 ಲಕ್ಷ ರು. ಮೌಲ್ಯದ ಚರಾಸ್ತಿ ಇದೆ. ಈ ಪೈಕಿ ನಾಗರಾಜ್‌ 68 ಲಕ್ಷ ರು. ಮೌಲ್ಯದ ಜಾಗ್ವಾರ್‌ ಕಾರು, 35.5 ಲಕ್ಷ ರು. ಮೌಲ್ಯದ ಫಾರ್ಚೂನರ್‌ ಕಾರು, 10 ಲಕ್ಷ ರು. ಮೌಲ್ಯದ ಎರ್ಟಿಗಾ ಕಾರು ಹೊಂದಿದ್ದಾರೆ.

1 ಕೆ.ಜಿ. ಚಿನ್ನ, 5 ಕೆ.ಜಿ. ಬೆಳ್ಳಿ:

ನಾಗರಾಜ್‌ ಬಳಿ 8 ಲಕ್ಷ ರು. ಮೌಲ್ಯದ 250 ಗ್ರಾಂ ಚಿನ್ನ, ಪತ್ನಿ ಬಳಿ 16 ಲಕ್ಷ ರು. ಮೌಲ್ಯದ ಅರ್ಧ ಕೆ.ಜಿ. ಚಿನ್ನ, 2 ಲಕ್ಷ ರು. ಮೌಲ್ಯದ 5 ಕೆ.ಜಿ. ಬೆಳ್ಳಿ, ಪುತ್ರನ ಬಳಿ 250 ಗ್ರಾಂ ಚಿನ್ನ ಇದೆ. ತನ್ಮೂಲಕ ನಾಗರಾಜ್‌ ಬಳಿ ಒಟ್ಟು 1 ಕೆ.ಜಿ. ಚಿನ್ನ, 5 ಕೆ.ಜಿ. ಬೆಳ್ಳಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಉಳಿದಂತೆ, 15.3 ಕೋಟಿ ರು.ಗಳಷ್ಟುಹಣವನ್ನು ಬ್ಯಾಂಕ್‌ ಖಾತೆಗಳಲ್ಲಿ ಹೊಂದಿದ್ದಾರೆ. ಒಟ್ಟು 10.26 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ. ರಾಮನಗರದಲ್ಲಿ 2 ಕೋಟಿ ರು. ಮೌಲ್ಯದ 10 ಎಕರೆ ಕೃಷಿ ಜಮೀನು, 3 ಕೋಟಿ ರು. ಮೌಲ್ಯದ 3.26 ಎಕರೆ ಕೃಷಿಯೇತರ ಜಮೀನು, 2 ಕೋಟಿ ರು. ಮೌಲ್ಯದ ವಾಣಿಜ್ಯ ಪ್ರದೇಶ, 2 ಕೋಟಿ ರು. ಮೌಲ್ಯದ 35,027 ಚದರಡಿ ವಸತಿ ಪ್ರದೇಶ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ 25 ಲಕ್ಷ ರು. ಹಾಗೂ ಪುತ್ರನ ಹೆಸರಿನಲ್ಲಿ 1 ಲಕ್ಷ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಅಭ್ಯರ್ಥಿ ಹೆಸರು: ಪಿ. ನಾಗರಾಜ್‌

ವಿದ್ಯಾರ್ಹತೆ : ಎಸ್ಸೆಸ್ಸೆಲ್ಸಿ (ಅಪೂರ್ಣ)

ಆಸ್ತಿ ವಿವರ : 38.5 ಕೋಟಿ ರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios