ರಾಜ್ಯಾದ್ಯಂತ 200 ಕೋಟಿ ವೆಚ್ಚದಲ್ಲಿ 117 ಪೊಲೀಸ್ ಠಾಣೆ: ಆರಗ ಜ್ಞಾನೇಂದ್ರ
ಮೈಸೂರಿನ ಜ್ಯೋತಿನಗರದಲ್ಲಿ ಡಿಎಆರ್ ಘಟಕದ ಆಡಳಿತ ಕಚೇರಿ ಹಾಗೂ ಶಸ್ತ್ರಾಗಾರ ಕಟ್ಟಡವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿ, ರಾಜ್ಯಾದ್ಯಂತ 200 ಕೋಟಿ ವೆಚ್ಚದಲ್ಲಿ 117 ಠಾಣೆ, ಪೊಲೀಸರಿಗೆ 11 ಸಾವಿರ ಮನೆ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.
ಮೈಸೂರು (ಸೆ.1): ಒಂದೇ ವರ್ಷದಲ್ಲಿ ರಾಜ್ಯಾದ್ಯಂತ . 200 ಕೋಟಿ ವೆಚ್ಚದಲ್ಲಿ 117 ಪೊಲೀಸ್ ಠಾಣೆ, ಪೊಲೀಸರಿಗೆ 11 ಸಾವಿರ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಮೈಸೂರಿನ ಜ್ಯೋತಿನಗರದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್‌ನ ಡಿಎಆರ್ ಘಟಕದ ಆಡಳಿತ ಕಚೇರಿ ಕಟ್ಟಡ ಹಾಗೂ ಶಸ್ತಾ್ರಗಾರ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಬೇಕೆಂಬ ಅಪೇಕ್ಷೆ ಬಹಳ ವರ್ಷಗಳಿಂದ ಇತ್ತು. ನಮ್ಮ ಸರ್ಕಾರ ಅದನ್ನು ಈಡೇರಿಸುತ್ತಿದೆ. 117 ಪೊಲೀಸ್ ಠಾಣೆ, 2020-25ರ ವಸತಿ ಯೋಜನೆಯಲ್ಲಿ 11 ಸಾವಿರ ಮನೆ ನಿರ್ಮಾಣ ಮಾಡಲಾಗುತ್ತಿದೆ. ಪೊಲೀಸರು ನೆಮ್ಮದಿಯಿಂದ ಕೆಲಸ ಮಾಡಲು ಕಚೇರಿ, ನೆಮ್ಮೆದಿಯಿಂದ ಬದುಕಲು ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಪೊಲೀಸರು ದಕ್ಷತೆಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಆರಕ್ಷರಿಗೆ ಅತ್ಯಾಧುನಿಕ ಶಸ್ತಾ್ರಸ್ತ್ರಗಳನ್ನೂ ನೀಡಲಾಗುತ್ತಿದೆ. ಜತೆಗೆ ಎಫ್‌ಎಸ್‌ಎಲ್ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಸೋಕೋ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಪರಾಧಗಳನ್ನು ತಕ್ಷಣ ಪತ್ತೆ ಹಚ್ಚಿ, ಕೋರ್ಚ್‌ನಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸಮಾಜದ ಶಾಂತಿ ಕದಡುವ, ಆಸ್ತಿ ಹಾನಿ ಮಾಡುವ, ಅತ್ಯಾಚಾರ ಮಾಡುವ ಅಪರಾಧಿಗಳು ತಪ್ಪಿಸಿಕೊಳ್ಳಬಾರದು. ಶಿಕ್ಷೆಗೆ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಪೊಲೀಸರ ಕೈ ಬಲಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ದಸರಾಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪೊಲೀಸರು ನಗರದೆಲ್ಲೆಡೆ ಉತ್ತಮವಾಗಿ ಬಂದೋಬಸ್‌್ತ ಮಾಡಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್ ASI, ಮಹಿಳೆ ಜೊತೆ ಠಾಣೆಯಲ್ಲೇ ರಾಸಲೀಲೆ!
ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್ಪಿ ಆರ್. ಚೇತನ್, ಡಿಸಿಪಿ ಗೀತಾ ಪ್ರಸನ್ನ ಮೊದಲಾದವರು ಇದ್ದರು.
ಠಾಣೆಯಲ್ಲಿಯೇ ಎಣ್ಣೆ ಪಾರ್ಟಿ, ಪೊಲೀಸರ ಪುಂಡಾಟದ ವೀಡಿಯೋ ವೈರಲ್
ರಾಜ್ಯದಲ್ಲಿ 42 ಪಿಎಫ್‌ಐ ಕಚೇರಿಗಳನ್ನು ಸೀಜ್ ಮಾಡಲಾಗಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ. ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣದ ಆರೋಪಿಗಳು ತಪ್ಪಿಸಿಕೊಳ್ಳದಂತೆ ಮಾಡಲಾಗುವುದು.
- ಆರಗ ಜ್ಞಾನೇಂದ್ರ, ಗೃಹ ಸಚಿವ