ನಾನು ನಾಯಕನಾಗಲು ಹೊರಟಿಲ್ಲ; ರಮೇಶ್ ಜಾರಕಿಹೊಳಿಗೆ ವಿಜಯೇಂದ್ರ ಟಾಂಗ್
ನಾನು ನಾಯಕನಾಗಲು ಹೊರಟಿಲ್ಲ, ನಮ್ಮ ವರಿಷ್ಟರು, ಹಿರಿಯರು ನನ್ನನ್ನು ರಾಜ್ಯದ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ರಾಜ್ಯದ ಭ್ರಷ್ಟ ಸರ್ಕಾರವನ್ನು ಒಂಟಿ ಕಾಲಿನಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕಲಬುರಗಿ (ಸೆ.19): ‘ನಾನು ನಾಯಕನಾಗಲು ಹೊರಟಿಲ್ಲ, ನಮ್ಮ ವರಿಷ್ಟರು, ಹಿರಿಯರು ನನ್ನನ್ನು ರಾಜ್ಯದ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ರಾಜ್ಯದ ಭ್ರಷ್ಟ ಸರ್ಕಾರವನ್ನು ಒಂಟಿ ಕಾಲಿನಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ವಿಜಯೇಂದ್ರ ಅವರನ್ನು ನಾಯಕನನ್ನಾಗಿ ಒಪ್ಪಿಕೊಳ್ಳೊದಿಲ್ಲ ಎಂಬ ರಮೇಶ್ ಜಾರಕಿಹೊಳ್ಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ. ನಾನು ನಾಯಕನಾಗಲು ಹೊರಟಿಲ್ಲ. ನಮ್ಮ ಪಕ್ಷದ ವರಿಷ್ಟರು, ಹಿರಿಯರು ನನ್ನನ್ನು ರಾಜ್ಯದ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ಭ್ರಷ್ಟ ಸರ್ಕಾರವನ್ನು ಒಂಟಿ ಕಾಲಿನಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇವೆ.
ಪಕ್ಷಕ್ಕಾಗಿ ಎಲ್ಲಾ ಆರೋಪ ನುಂಗಿದ್ದೇನೆ: ವಿಜಯೇಂದ್ರ
ಸಂತೋಷದ ವಿಷಯ ಏನಂದ್ರೆ ರಮೇಶ್ ಜಾರಕಿಹೊಳಿ ಬಾಯಲ್ಲೂ ಪಕ್ಷದ ಸಿದ್ದಾಂತ ಬಂದಿರೋದು ಒಳ್ಳೆಯ ಬೆಳವಣಿಗೆ ಎಂದು ಟಾಂಗ್ ನೀಡಿದರು. ಶಿಕಾರಿಪುರದ ಗೆಲುವಿಗೆ ಕಾಂಗ್ರೆಸ್ ಕೊಡುಗೆ ಇದೆ ಎಂಬ ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಮ್ಮ ತಂದೆಯವರು ಒಂದು ಮಾತು ಹೇಳಿದ್ದಾರೆ, ಮಾತಾಡೋದೆ ಸಾಧನೆ ಆಗಬಾರದು, ಸಾಧನೆ ಮಾತಾಗಬೇಕು ಎಂದು. ಹೀಗಾಗಿ, ನಾನು ಕೂಡ ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಡಿಕೆಶಿ, ಆರ್.ವಿ. ದೇಶಪಾಂಡೆಯವರು ತಾವು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ. ನಮ್ಮಲ್ಲೂ ಮನೆ ಮುರುಕರಿದ್ದಾರೆ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ವಿಚಾರವಾಗಿ ನೀವು ಯಾರಿಗೂ ಹೇಳಬೇಡಿ, ಡಿಕೆಶಿ ಅವರಿಗೆ ಈ ಮಾತನ್ನು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಛೇಡಿಸಿದರು.
ಮೋದಿ ಎಂಬ ವಿಶ್ವದ ಧೀಮಂತ ನಾಯಕ, ವಿದೇಶಗಳ ದೃಷ್ಟಿಯಲ್ಲಿ ಭಾರತಕ್ಕೆ ಮನ್ನಣೆ ತಂದುಕೊಟ್ಟ ನಾಯಕ: ವಿಜಯೇಂದ್ರ
ಸಿಎಂಗೆ ಈಗ ಕಲಬುರಗಿ ನೆನಪಾಗ್ತಿದೆ:
ಮಂಗಳವಾರ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಸರ್ಕಾರ ಬಂದು ಒಂದು ವರ್ಷ ಆದರೂ ಅವರಿಗೆ ಕಲಬುರಗಿ ನೆನಪಾಗಿಲ್ಲ. ಮುಖ್ಯಮಂತ್ರಿಗಳಿಗೆ ಈಗ ಅಚಾನಕ್ ಆಗಿ ಕಲಬುರಗಿ ನೆನಪಾಗಿದೆ. ಮೊನ್ನೆಯ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಹೊಸ ವಿಚಾರ ಹೇಳಿಲ್ಲ. ಈ ಹಿಂದಿನ ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದ ಯೋಜನೆಗಳೇ ಇವೆ. ಮೊನ್ನೆಯ ಸಚಿವ ಸಂಪುಟ ಸಭೆಯಿಂದ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಮುಖ್ಯಮಂತ್ರಿಯವರ ಕುರ್ಚಿ ಅಲುಗಾಡ್ತಿದೆ. ಹಾಗಾಗಿ, ಎಐಸಿಸಿ ಅಧ್ಯಕ್ಷರ ಒಲೈಕೆ ಮಾಡೋದಕ್ಕೆ ಇಲ್ಲಿ ಸಚಿವ ಸಂಪುಟ ಸಭೆ ಮಾಡಿದ್ದಾರೆ ಎಂದು ಆರೋಪಿಸಿದರು.