ಪ್ರಧಾನಿ ನರೇಂದ್ರ ಮೋದಿಗೆ ವಿಶ್ವಮಟ್ಟದಲ್ಲಿ ಸಿಗುತ್ತಿರುವ ಮನ್ನಣೆ, ಜನಪ್ರಿಯತೆ ಕುರಿತು ಹೇಳುವ ಭರದಲ್ಲಿ ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾ ತಂಡ ಎಡವಟ್ಟು ಮಾಡಿದೆ. ಇದು ಭಾರಿ ಸದ್ದು ಮಾಡುತ್ತಿದೆ.
ಬೆಂಗಳೂರು (ಜೂ.21) ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುತ್ತಿರುವ ಮನ್ನಣೆ ಹೇಳುವ ಭರದಲ್ಲಿ ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾ ತಂಡ ಎಡವಟ್ಟು ಮಾಡಿದೆ. ಮೋದಿಯನ್ನು ದೇಶದಲ್ಲಿ ವಿರೋಧಿಸುತ್ತಾರೆ ಎಂದು ರಾಜ್ಯ ಬಿಜೆಪಿಯಿಂದ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳಿ ಎಡವಟ್ಟು ಮಾಡಿದೆ. ದೇಶದ ಒಳಗೆ ಮೋದಿಯನ್ನು ಎಷ್ಟೇ ಜನರು ವಿರೋಧಿಸಿದರು, ಅವರು ಭಾರತದ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಜಾಗತಿಕ ನಾಯಕರು ಮೆಚ್ಚುಗೆ ಸೂಚಿಸುತ್ತಾರೆ ಎಂದು ಪೋಸ್ಟ್ ಮಾಡಿ ವಿವಾದ ಸೃಷ್ಟಿಸಿದೆ.
ಏನಿದು ರಾಜ್ಯ ಬಿಜೆಪಿ ಘಟಕದ ಪೋಸ್ಟ್
ದೇಶದ ಒಳಗೆ ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಎಷ್ಟೇ ಜನ ವಿರೋಧಿಸಿದರೂ, ಭಾರತದ ಹಿಸಾಸಕ್ತಿ ಹಾಗೂ ಸೌರ್ವಭೌಮ ವಿಚಾರದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಜಾಗತಿಕ ನಾಯಕರು ಮೆಚ್ಚುಗೆ ಸೂಚಿಸುತ್ತಲೇ ಇರುತ್ತಾರೆ. ದೇಶದ ಹಿತವೇ ಮೊದಲು ಎಂಬ ಅವರ ನಡೆಗೆ ವಿಶ್ವಮಟ್ಟದಲ್ಲಿ ಸದಾ ಗೌರವವಿದೆ ಎಂದು ಪೋಸ್ಟ್ ಮಾಡಿತ್ತು. ಈ ಪೋಸ್ಟ್‌ನಲ್ಲಿ ದೇಶದೊಳಗೆ ಮೋದಿಗೆ ಎಷ್ಟೇ ವಿರೋಧವಿದೆ ಎಂಬ ಪದ ಬಳಕೆ ಮಾಡಲಾಗಿತ್ತು. ಇದಕ್ಕೆ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮೋದಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದೊಳಗೆ ಮೋದಿಗೆ ವಿರೋಧವಿಲ್ಲ. ರಾಜಕೀಯವಾಗಿ ವಿಪಕ್ಷಗಳು ವಿರೋಧಿಸುತ್ತಿದೆ. ಆದರೆ ಮೋದಿ ಜಗಮೆಚ್ಚಿದ ನಾಯಕ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಮೋದಿಗೆ ಬಗ್ಗೆ ಟ್ರಂಪ್ ಭಾರಿ ಮೆಚ್ಚುಗೆ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರಮುಖ ನಾಯಕರ ಜೊತೆ ಚರ್ಚಿಸಿದ್ದಾರೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೋದಿ ಕುರಿತು ಟ್ರಂಪ್ ಆಡಿದ ಮಾತುಗಳು ಭಾರಿ ವೈರಲ್ ಆಗಿತ್ತು. ಮೋದಿ ಅತ್ಯಂತ ಕಠಿಣ ಸಂಧಾನಕಾರ. ಮೋದಿ ನೋಡಲು ಅತ್ಯಂತ ಸುಂದರವಾಗಿ ಕಾಣುತ್ತಾರೆ. ಆದರೆ ರಾಜತಾಂತ್ರಿಕತೆ ವಿಚಾರದಲ್ಲಿ ಮೋದಿ ಕಿಲ್ಲರ್. ಎದುರಾಳಿಗಳನ್ನು ಸೋಲಿಸುತ್ತಾರೆ ಎಂದು ಟ್ರಂಪ್ ಹೇಳಿದ್ದರು.
ಮೋದಿ ನಾಯಕನಾಗಿದ್ದಾರೆ ಸದಾ ಅಮೆರಿಕದಿಂದ ನೆರವು
ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ಅಮೆರಿಕ ನೆರವಿಗೆ ನಿಲ್ಲಲಿದೆ. ಭಾರತದ ಮೇಲಿನ ದಾಳಿಯನ್ನು ಅಮೆರಿಕ ಸಹಿಸುವುದಿಲ್ಲ. ಆದರೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕನಾಗಿರಬೇಕು. ಬೇರೆ ನಾಯಕರಾಗಿದ್ದರೆ ಅಮೆರಿಕದ ನೆರವಿನ ಕುರಿತು ಗ್ಯಾರೆಂಟಿ ನೀಡಲು ಸಾಧ್ಯವಿಲ್ಲ ಎಂದು ಡೋನಾಲ್ಡ್ ಟ್ರಂಪ್ ದ್ವಿಪಕ್ಷೀಯ ಮಾತುಕತೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು.


