ಬೆಂಗಳೂರು[ಫೆ.12]: ಸರೋಜಿನಿ ಮಹಿಷಿ ವರದಿಯಂತೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಸಬೇಕೆಂದು ಅಗ್ರಹಿಸಿ 600ಕ್ಕೂ ಹೆಚ್ಚು ಸಂಘಟನೆಗಳು ಫೆ.13 ರಂದು ಬಂಸ್ ಗೆ ಕರೆ ನೀಡಿವೆ. ಹೀಗಿರುವಾಗ ಓಲಾ, ಉಬರ್, ಏರ್ ಪೋರ್ಟ್ ಟ್ಯಾಕ್ಸಿ ಸೇರಿದಂತೆ ಹಲವಾರು ಸೇವೆಗಳು ವ್ಯತ್ಯಯವಾಗಲಿವೆ. ಹೀಗಿರುವಾಗ ಶಾಲಾ ಕಾಲೇಜುಗಳ ಕತೆ ಏನು? ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾ? ಎಂಬ ಚಿಂತೆ ಪೋಷಕರದ್ದಾಗಿದೆ. ಆದರೀಗ ಈ ಚಿಂತೆಗೆ ತೆರೆ ಬಿದ್ದಿದ್ದು, ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿವೆ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಬಂದ್‌ಗೆ 600ಕ್ಕೂ ಹೆಚ್ಚು ಸಂಘಟನೆ ಬೆಂಬಲ: ಏನಿರುತ್ತೆ? ಏನಿರಲ್ಲ?

ಈ ಸಂಬಂಧ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ 'ದಿನಾಂಕ 13.02.2020 ರಂದು‌ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಯಾವುದೇ ಶಾಲಾ ಕಾಲೇಜುಗಳಿಗೆ ಅಧಿಕೃತವಾಗಿ ರಜೆ‌ ಘೋಷಣೆ‌ ಮಾಡುವುದಿಲ್ಲ ಆದಾಗ್ಯೂ ಆಯಾ ಜಿಲ್ಲಾಡಳಿತಗಳು ಸ್ಥಳೀಯ ಪರಿಸ್ಥಿತಿ ಗಳಿಗೆ ಅನುಗುಣವಾಗಿ ಕ್ರಮ ವಹಿಸಬಹುದಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಕರ್ನಾಟಕ ಬಂದ್ ಗೆ ಖಾಸಗಿ ಶಾಲೆಗಳ ಒಕ್ಕೂಟ ಕೂಡಾ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ 'ಬಂದ್ ಗೆ ನಮ್ಮದು ನೈತಿಕ ಬೆಂಬಲ ಅಷ್ಟೇ. ಪರೀಕ್ಷೆ ಸಮೀಪಿಸುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. ಮಕ್ಕಳಿಗೆ ತೊಂದರೆಯಾಗುವುದರಿಂದ ಬಂದ್ಗೆ ಬೆಂಬಲ ಇಲ್ಲ' ಎಂದಿದ್ದಾರೆ.

ಫೆ.13ಕ್ಕೆ ಕರ್ನಾಟಕ ಬಂದ್ : ವಿವಿಧ ಸಂಘಟನೆಗಳ ಬೆಂಬಲ

ಹೀಗಿದ್ದರೂ ಶಾಲೆಗಳ ಖಾಸಗಿ ವ್ಯಾನ್ ಚಾಲಕರು ಬಂದ್ ಗೆ ಬೆಂಬಲ ಸೂಚಿಸಿದ್ದು, ಮಕ್ಕಳನ್ನು ಶಾಲೆಗೊಯ್ಯಲು ಕೊಂಚ ಕಷ್ಟವಾಗಬಹುದು

ಫೆಬ್ರವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ