ಕರ್ನಾಟಕ ಬಂದ್, ಏನಿರುತ್ತೆ? ಏನಿರಲ್ಲ?: ಶಾಲಾ- ಕಾಲೇಜು ಕತೆ ಏನು?
ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್| ಫೆ. 13 ರಂದು ಬಂದ್ ದಿನ ಬೆಂಗಳೂರಿನಲ್ಲಿ ಏನಿರುತ್ತೆ? ಏನಿರಲ್ಲ?| ನೈತಿಕ ಬೆಂಬಲ ಸೂಚಿಸಿರುವವರು ಯಾರ್ಯಾರು?| ಶಾಲಾ ಕಾಲೇಜುಗಳ ಕತೆ ಏನು?
ಬೆಂಗಳೂರು[ಫೆ.12]: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಇದಕ್ಕಾಗಿ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಇದಕ್ಕೆ ಹಲವಾರು ಸಂಘಟನೆಗಳು ಬೆಂಬಲವನ್ನೂ ನೀಡಿವೆ. ನಾಳೆ ಬಸ್ಗಳು ಓಡಾತ್ತಾ..? ಮೆಟ್ರೋ ಇರುತ್ತಾ..? ಶಾಲೆಗೆ ರಜೆ ಸಿಗುತ್ತಾ..? ಕರ್ನಾಟಕ ಸ್ತಬ್ಧವಾಗುತ್ತಾ ಅನ್ನೋ ಆತಂಕ ನಿಮ್ಮಲ್ಲಿರಬಹುದು. ಆ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.
ಬಂದ್‌ಗೆ ಯಾರ ಬೆಂಬಲ..?
- ಕನ್ನಡ ಸಾಹಿತ್ಯ ಪರಿಷತ್
- ಲಾರಿ ಚಾಲಕರ ಮತ್ತು ಮಾಲೀಕರ ಸಂಘ
- ಚಾಲಕರ ಸಂಘಟನೆಗಳ ಒಕ್ಕೂಟ
- ಆಟೋ - ಟ್ಯಾಕ್ಸಿ ಚಾಲಕರ ಸಂಘ
- ರಾಜ್ಯ ಸಾರಿಗೆ ನೌಕರರು
- ದಲಿತ ಪರ ಸಂಘಟನೆಗಳ ಒಕ್ಕೂಟ
- ಮಹಿಳಾ ಸಂಘಟನೆಗಳ ಒಕ್ಕೂಟ
- ಓಲಾ, ಉಬರ್ ಚಾಲಕರ ಸಂಘ
- ಕಾರ್ಮಿಕ ಸಂಘಟನೆಗಳು & ಸಿಐಟಿಯು
- ವರ್ತಕರ ಸಂಘಟನೆಗಳು
- ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು
- ಸರ್ಕಾರಿ ನೌಕರರ ಸಂಘ
- ಕರ್ನಾಟಕ ಸಂಘಟನೆಗಳ ಒಕ್ಕೂಟ
- ನಮ್ಮ ಕನ್ನಡ ರಕ್ಷಣಾ ವೇದಿಕೆ
ಕರ್ನಾಟಕ ಬಂದ್: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ: ಸಚಿವರ ಸ್ಪಷ್ಟನೆ
ಬಂದ್ ಎಫೆಕ್ಟ್
* 2 ಲಕ್ಷ ಆಟೋ ಸ್ಥಗಿತ
* 1.50 ಲಕ್ಷ ಓಲಾ, ಊಬರ್ ಬಂದ್
* 25 ಸಾವಿರ ಮ್ಯಾಕ್ಸಿಕ್ಯಾಬ್ ಬಂದ್
* 10 ಸಾವಿರ ಏರ್ಪೋರ್ಟ್ ಟ್ಯಾಕ್ಸಿ ಬಂದ್
* 9 ಸಾವಿರ ಖಾಸಗಿ ಬಸ್ ಬಂದ್
* 6 ಲಕ್ಷ ಲಾರಿ ಬಂದ್
ಕರ್ನಾಟಕ ಬಂದ್‌ಗೆ ಕರವೇ ಪ್ರವೀಣ್ ಶೆಟ್ಟಿ ಬಣ ಬೆಂಬಲ ಡೌಟ್!
ಏನೇನು ಇರುತ್ತೆ?
ಪೆಟ್ರೋಲ್ ಬಂಕ್, ಚಿತ್ರಮಂದಿರ, ಹೋಟೆಲ್
KSRTC, BMTC ಬಸ್, ಮೆಟ್ರೋ ಸಂಚಾರ
ಆಸ್ಪತ್ರೆ, ಮೆಡಿಕಲ್ಸ್, ವಿಮಾನ ಸೇವೆಗಳು
ಬ್ಯಾಂಕ್, ಅಂಚೆ ಕಚೇರಿ ಎಂದಿನಂತೆ ಕಾರ್ಯ
ಔಷಧಿ ಮಳಿಗೆ, ಆಸ್ಪತ್ರೆ, ತರಕಾರಿ, ಹಾಲು
ಏನು ಇರಲ್ಲ?
- ಆಟೋ ಸಿಗುವ ಸಾಧ್ಯತೆ ಕಡಿಮೆ
- ಓಲಾ, ಊಬರ್, ಟ್ಯಾಕ್ಸಿ ಸೇವೆ ಇಲ್ಲ
- ಬೀದಿ ಬದಿ ಹೋಟೆಲ್ಗಳು
- ಖಾಸಗಿ ಬಸ್‌ಗಳು
- ಖಾಸಗಿ ಶಾಲೆಯ ಶಾಲಾ ವಾಹನಗಳು
ಶಾಲಾ ಕಾಲೇಜುಗಳ ಕತೆ ಏನು?
* ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲ ಪರಿಸ್ಥಿತಿ ನೋಡಿಕೊಂಡು ರಜೆ ನೀಡುವ ಅಧಿಕಾರ ಡಿಡಿಪಿಐಗಳಿಗೆ ನೀಡುವ ಸಾಧ್ಯತೆ.
* ಕರ್ನಾಟಕ ಬಂದ್ಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ
ಬಂದ್ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲವಾದರೂ, ಖಾಸಗಿ ಶಾಲಾ ಮಕ್ಕಳ ಮೇಲೆ ಬಂದ್ ಪರಿಣಾಮ ಬೀಳುವ ಸಾಧ್ಯತೆ ಇದೆ. ಶಾಲಾ ವಾಹನ ಸವಾರರು ಬಂದ್‌ಗೆ ಬೆಂಬಲಿಸಿರೋದ್ರಿಂದ, ಪೋಷಕರೇ ಮಕ್ಕಳನ್ನ ಶಾಲೆಗೆ ಕರೆದು ಕೊಂಡು ಹೋಗಲು, ಕರೆದುಕೊಂಡು ಬರಲು ವ್ಯವಸ್ಥೆ ಮಾಡಿಕೊಳ್ಳಬೇಕು.