ಕಾವೇರಿ ನೀರಿಗಾಗಿ ಕರ್ನಾಟಕ ಬಂದ್: ರಾಜ್ಯಾದ್ಯಂತ ಪೊಲೀಸರು ಫುಲ್ ಅಲರ್ಟ್!
ಕಾವೇರಿ ನೀರಿಗಾಗಿ ಅಖಂಡ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಯಲ್ಲೂ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ರಾಜ್ಯ ಗುಪ್ತಚರ ಇಲಾಖೆಯಿಂದಲೂ ಮಧ್ಯರಾತ್ರಿಯಿಂದಲೇ ಅಲರ್ಟ್ ಇರಲು ಸೂಚನೆ ನೀಡಲಾಗಿದೆ

ಬೆಂಗಳೂರು (ಸೆ.29): ಕಾವೇರಿ ನೀರಿಗಾಗಿ ಅಖಂಡ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಯಲ್ಲೂ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ರಾಜ್ಯ ಗುಪ್ತಚರ ಇಲಾಖೆಯಿಂದಲೂ ಮಧ್ಯರಾತ್ರಿಯಿಂದಲೇ ಅಲರ್ಟ್ ಇರಲು ಸೂಚನೆ ನೀಡಲಾಗಿದ್ದು, ಹೀಗಾಗಿ ರಾಜ್ಯಾದ್ಯಂತ ಗಸ್ತು ಇರುವಂತೆ ಡಿಜಿ ಐಜಿಪಿ ಅಲೋಕ್ ಮೋಹನ್, ರಾಜ್ಯದ ಎಲ್ಲಾ ಎಸ್‌ಪಿಗಳ ಜೊತೆ ವರ್ಚುವಲ್ ಸಭೆ ಮಾಡಿ ಸೂಚನೆ ನೀಡಿದ್ದಾರೆ.
ಬೆಂಗಳೂರು ಸೇರಿದಂತೆ ಒಟ್ಟು 80ಸಾವಿರ ಪೊಲೀಸರು, 200 KSRP ತುಕಡಿಗಳು, 80 CAR ತುಕಡಿ, ವಾಟರ್ ಜೆಟ್‌ಗಳು, ಅತಿಸೂಕ್ಷ್ಮ ಪ್ರದೇಶಗಳಾದ ಮಂಡ್ಯ, ಮೈಸೂರು ಭಾಗದಲ್ಲಿ ವಾಟರ್ ಜೆಟ್‌ಗಳ ನಿಯೋಜನೆ ಮಾಡಲಾಗಿದೆ. ಯಾವುದೇ ಸಣ್ಣ ಗಲಭೆಗಳಿಗೂ ಅವಕಾಶ ಕೊಡುವಂತೆ ನಿಗಾ ವಹಿಸಲು ಸೂಚನೆ ವಹಿಸಲಾಗಿದ್ದು, ಮಂಡ್ಯ, ರಾಮನಗರ, ಚನ್ನಪಟ್ಟಣ, ಮದ್ದೂರು, ಚಾಮರಾಜನಗರ, ಮೈಸೂರು, ಸೇರಿ ಗಡಿಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅವಶ್ಯಕತೆ ಇದ್ದರೆ ಪಕ್ಕದ ಜಿಲ್ಲೆಗಳಿಂದ ಭದ್ರತೆಗೆ ನಿಯೋಜನೆ ಮಾಡುವಂತೆ ಎಸ್‌ಪಿಗಳಿಗೆ ಸೂಚನೆ ನೀಡಲಾಗಿದೆ.
ಬಡವರಿಗೆ ಸಾಮಾಜಿಕ ನ್ಯಾಯ ನೀಡಿದ ಪಕ್ಷ ಕಾಂಗ್ರೆಸ್: ಮಾಜಿ ಸಚಿವ ರಮಾನಾಥ ರೈ
ಈ ಹಿಂದೆ ಗಲಭೆಗಳಲ್ಲಿ ಭಾಗಿಯಾಗಿ ಹೊರಗಡೆ ಇರೋರನ್ನ ವಶಕ್ಕೆ ಪಡೆಯಲು ಸೂಚನೆ ನೀಡಿದ್ದು, ಅವರು ಎಲ್ಲೇ ಇದ್ದರೂ ರಾತ್ರೋರಾತ್ರಿಯೇ ವಶಕ್ಕೆ ಪಡೆಯಬೇಕು. ಇಂದು ಮಧ್ಯರಾತ್ರಿಯೇ ವಶಕ್ಕೆ ಪಡೆದು ಬಂಧನದಲ್ಲಿ ಇಟ್ಟುಕೊಳ್ಳಬೇಕು. ನಾಳೆ ಬಂದ್ ಮುಗಿದ ಬಳಿಕ ಅವರನ್ನೆಲ್ಲಾ ರಿಲೀಸ್ ಮಾಡಬೇಕು. ಜೊತೆಗೆ ಆಯಾ ಭಾಗದಲ್ಲಿ ಆಕ್ಟೀವ್ ಆಗಿರೋ ರೌಡಿಶೀಟರ್ ಗಳನ್ನು ವಶಕ್ಕೆ ಪಡೆಯಬೇಕು. ಜೊತೆಗೆ ಸಂಘಟನೆಗಳ ಫ್ಲ್ಯಾನಿಂಗ್ ಬಗ್ಗೆಯೂ ರಾತ್ರಿಯೇ ಮಾಹಿತಿ ಕಲೆಹಾಕಬೇಕೆಂದು ಸೂಚನೆ ನೀಡಲಾಗಿದೆ.
ಕಾವೇರಿಗಾಗಿ ಕರ್ನಾಟಕ ಬಂದ್: ಬಂದ್‌ಗೆ ಜಿಮ್‌ಗಳಿಂದಲೂ ಬೆಂಬಲ ಕೊಡುತ್ತೇವೆಂದು ಜಿಮ್ ಸಂಘದ ಅಧ್ಯಕ್ಷ ಜಿಮ್ ರವಿ ತಿಳಿಸಿದ್ದಾರೆ. ಎಲ್ಲಾ ಜಿಲ್ಲೆಯ ಜಿಮ್‌ಗಳನ್ನ ಬಂದ್ ಮಾಡುತ್ತೇವೆ. ಎಲ್ಲಾ ಜಿಮ್ ಟ್ರೈನರ್‌ಗಳು ಹೋರಾಟದಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಉಚಿತವಾಗಿ ಸೇವೆ: ಇಂದಿನ ಕರ್ನಾಟಕ ಕಾವೇರಿ ನದಿ ನೀರಿನ ವಿಷಯವಾಗಿ ಕರ್ನಾಟಕದಾದ್ಯಂತ ಬಂದ್ ಆಚರಿಸಲಾಗುತ್ತಿದೆ ನಮ್ಮ ಹಸಿರು ಸೇನಾ ಪಡೆ ಬೆಳಗ್ಗೆ 9:00 ಗಂಟೆಯಿಂದ ಸಂಜೆ 7:00ವರೆಗೆ ವಯೋವೃದ್ದರಿಗೆ, ಅಂಗವಿಕಲರಿಗೆ ಮೆಜೆಸ್ಟಿಕ್ ಆವರಣದಲ್ಲಿ ಬೇರೆ ಊರುಗಳಿಂದ ಬಂದಂತಹ ಸಾರ್ವಜನಿಕರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿದೆ ಯಾರಿಗಾದರೂ ಆಸ್ಪತ್ರೆಗೆ ಹೋಗಬೇಕಾದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ: 9916963710, 9916933330.
ಲೋಕಸಭೆಗೆ ಪತ್ನಿ ಡಾ.ಪ್ರಭಾ ಸ್ಪರ್ಧೆ ಚರ್ಚೆ ಆಗಿಲ್ಲ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಚಪ್ಪಲಿ ಸೇವೆ: ತಮಿಳುನಾಡಿಗೆ ಕಾವೇರಿ ನೀರನ್ನ ಬಿಡದಂತೆ ಆಗ್ರಹಿಸಿ ಕರೆ ಕೊಟ್ಟಿರುವ ಅಖಂಡ ಕರ್ನಾಟಕ ಬಂದ್ ಗೆ ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ನೀಡಿದ್ದೇವೆ. ಈ ಸಂಬಂಧ ನೂರಾರು ಕಾರ್ಯಕರ್ತರೊಂದಿಗೆ ನಾಳೆ ಬೆಳಗ್ಗೆ 7:30ಕ್ಕೆ ತುಮಕೂರು ರಾಷ್ಟ್ರೀಯ ಹೆದ್ದಾರಿ ತಡೆದು, ಪೊರಕೆ ಚಳುವಳಿ ಮತ್ತು ತಮಿಳುನಾಡು ಸಿಎಂ ಸ್ಟಾಲಿನ್ ಗೆ ಚಪ್ಪಲಿ ಸೇವೆ ಮಾಡಲಿದ್ದೇವೆ. ದಯಮಾಡಿ ಮಾಧ್ಯಮ ಸ್ನೇಹಿತರು ಆಗಮಿಸಿ, ಪ್ರತಿಭಟನಾ ಬಂದ್ ನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಸಂಘಟನೆಗಳ ಒಕ್ಕೂಟದ ರಾಜಾಧ್ಯಕ್ಷ ಡಾ.ವಿಶ್ವನಾಥ್.ಜಿ.ಪಿ. ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.