Asianet Suvarna News Asianet Suvarna News

ಬಕ್ರೀದ್‌ ಪ್ರಾರ್ಥನೆ: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ

ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈದ್ಗಾ ಮೈದಾನದ ಬಳಿಯಿರುವ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. 

Bengaluru Bakrid festival Muslim prayer Vehicular traffic closed on major roads sat
Author
First Published Jun 28, 2023, 10:43 PM IST

ಬೆಂಗಳೂರು (ಜೂ.28): ರಾಜ್ಯಾದ್ಯಂತ (ಜೂ.29ರ ಗುರುವಾರ) ಬಕ್ರೀದ್ ಹಬ್ಬ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಮತ್ತು ಕಂದಾಯ ಇಲಾಖೆ ಸೂಕ್ತ ಕಟ್ಟೆಚ್ಚರವನ್ನು ವಹಿಸಿದೆ. ಇನ್ನು ಬೆಂಗಳೂರು ನಗರದಲ್ಲಿ ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನೆ ಮಾಡಲು ಅನುಕೂಲವಾಗುವಂತೆ ಕೆಲವೊಂದು ರಸ್ತೆಗಳನ್ನು ಬಂದ್‌ ಮಾಡಲಾಗುತ್ತಿದ್ದು, ವಾಹನ ಸವಾರರು ಬದಲಿ ಮಾರ್ಗ ಅನುಸರಿಸುವಂತೆ ಪೊಲೀಸ್‌ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ನಾಳೆ ಬಕ್ರೀದ್‌ ಹಬ್ಬದ ಪ್ರಯುಕ್ತ ಸಂಚಾರ ಬದಲಾವಣೆ ಮಾಡಲಾಗಿದೆ.  ಮುಸ್ಲಿಂ ಬಾಂದವರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆ ಪ್ರಯುಕ್ತ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ಕ್ರಮವಹಿಸಲು ಮುಂದಾಗಿದ್ದಾರೆ. ಆದ್ದರಿಂದ ಕೆಲವು ಮಾರ್ಗಗಳಲ್ಲಿ ಪೊಲೀಸರು ಸುಗಮ‌ ಸಂಚಾರಕ್ಕಾಗಿ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಿದ್ದಾರೆ. ಅದು ಕೂಡ ಬೆಳಗ್ಗೆ 8 ರಿಂದ 11:30 ರ ವರೆಗೆ ಮಾತ್ರ ರಸ್ತೆಗಳ ಸಂಚಾರ ಮಾರ್ಪಾಡು ಮಾಡಿದ್ದಾರೆ.

 

Bengaluru: ಪೀಣ್ಯ- ಹೊಸೂರು ಸುರಂಗ ರಸ್ತೆ ನಿರ್ಮಾಣ: ಕೇಂದ್ರಕ್ಕೆ ರಾಜ್ಯದ ಮನವಿ

  • ಎಲ್ಲೆಲ್ಲಿ ರಸ್ತೆಗಳ ಸಂಚಾರ ನಿಷೇಧ: 
  • ನಗರದ ಬಸವೇಶ್ವರ ಸರ್ಕಲ್- ಸಿಐಡಿ ಜಂಕ್ಷನ್
  • ಲಾಲ್ ಬಾಗ್ ಮೇನ್ ಗೇಟ್ - ಕಣ್ಣಪ್ಪ ಪೆಟ್ರೋಲ್ ಬಂಕ್
  • ಮೈಸೂರು ರಸ್ತೆಯ ಟೋಲ್ ಗೇಟ್ ಜಂಕ್ಷನ್ - ಸಿರ್ಸಿ ಸರ್ಕಲ್ 

ಪರ್ಯಾಯ ಮಾರ್ಗಗಳು ಮಾಹಿತಿ ಇಲ್ಲಿದೆ: 
ನಗರದ ಬಸವೇಶ್ವರ ಸರ್ಕಲ್ ನಿಂದ ಸಿಐಡಿ ಜಂಕ್ಷನ್ ವರೆಗೆ ರಸ್ತೆ ಸಂಚಾರ ನಿರ್ಬಂಧ ಮಾಡಲಾಗಿದೆ. ಈ ರಸ್ತೆ ಬದಲಾಗಿ ದೇವರಾಜ ಅರಸ್ ರಸ್ತೆ ಬಳಕೆಗೆ ಬೆಂಗಳೂರು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ. ಲಾಲ್ ಬಾಗ್ ಮೇನ್ ಗೇಟ್ ನಿಂದ ಕಣ್ಣಪ್ಪ ಪೆಟ್ರೋಲ್ ಬಂಕ್ ವರೆಗೆ ರಸ್ತೆ ನಿರ್ಬಂಧ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಸಿದ್ದಯ್ಯ ರಸ್ತೆ, 34 ನೇ ಜಂಕ್ಷನ್, ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ ಹೊಸೂರು ರಸ್ತೆಯನ್ನ ಬಳಕೆಗೆ ಸೂಚನೆ ನೀಡಲಾಗಿದೆ.

BENGALURU: ಗೃಹ ಪ್ರವೇಶದ ಮನೆಗೆ ನುಗ್ಗಿ ಬಟ್ಟೆ ಎತ್ತಿ ತೋರಿಸಿದ ಮಂಗಳಮುಖಿಯರು

ಮೈಸೂರು ರಸ್ತೆಯಲ್ಲಿ ಸಂಚಾರ ಕಷ್ಟ: ಮೈಸೂರು ರಸ್ತೆಯ ಟೋಲ್ ಗೇಟ್ ಜಂಕ್ಷನ್ ನಿಂದ ಸಿರ್ಸಿ ಸರ್ಕಲ್ ವರೆಗೆ ರಸ್ತೆ ನಿರ್ಬಂಧ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಸಿರ್ಸಿ ಸರ್ಕಲ್ ನಿಂದ ಬಲ ತಿರುವು ಪಡೆದು ಬಿನ್ನಿಮಿಲ್ ಟ್ಯಾಂಕ್ ಬಂಡ್ ರಸ್ತೆ ಮಾರ್ಗವಾಗಿ ಹಾಗೂ ಮಾಗಡಿ ರಸ್ತೆ ವಿಜಯನಗರ ಮೂಲಕ ಮೈಸೂರು ರಸ್ತೆ ಸಂಪರ್ಕಿಸಬಹುದು.  ಮೈಸೂರು ರಸ್ತೆ ಕಡೆಯಿಂದ ಸಿಟಿ ಮಾರ್ಕೆಟ್ ಕಡೆ ಸಂಚರಿಸುವವರು, ಕಿಂಕೋ ಜಂಕ್ಷನ್ ಬಳಿ ಎಡ ತಿರುವು ಪಡೆದು ವಿಜಯನಗರ ಮಾಗಡಿ ಮುಖ್ಯ ರಸ್ತೆ ಮಾರ್ಗವಾಗಿ ಸಿರ್ಸಿ ವೃತ್ತದ ಮೂಲಕ ಸಿಟಿ ಮಾರ್ಕೇಟ್ ಕಡೆಗೆ ಸಂಚರಿಸಬಹುದು. ಮೇಲ್ಕಂಡ ರಸ್ತೆ ಮಾರ್ಪಾಡಿಗೆ ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

Follow Us:
Download App:
  • android
  • ios