Karnataka assembly election: ಬೆಂಗಳೂರಿಂದ 3000 ಬಸ್‌ಗಳಲ್ಲಿ ತವರಿಗೆ ಹೊರಟ ಮತದಾರರು!
ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಕ್ಷೇತ್ರದ ಮತದಾರರನ್ನು ಕರೆದುಕೊಂಡು ಹೋಗಲು ಚುನಾವಣಾ ಅಭ್ಯರ್ಥಿಗಳು ಮಂಗಳವಾರ ಬಸ್ ವ್ಯವಸ್ಥೆ ಮಾಡಿದ್ದು, ಸುಮಾರು 3 ಸಾವಿರಕ್ಕೂ ಹೆಚ್ಚಿನ ಬಸ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಿಕೊಂಡು ಮತದಾರರನ್ನು ಕರೆದುಕೊಂಡು ಹೋಗಿದ್ದಾರೆ.
ಬೆಂಗಳೂರು (ಮೇ.10) : ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಕ್ಷೇತ್ರದ ಮತದಾರರನ್ನು ಕರೆದುಕೊಂಡು ಹೋಗಲು ಚುನಾವಣಾ ಅಭ್ಯರ್ಥಿಗಳು ಮಂಗಳವಾರ ಬಸ್ ವ್ಯವಸ್ಥೆ ಮಾಡಿದ್ದು, ಸುಮಾರು 3 ಸಾವಿರಕ್ಕೂ ಹೆಚ್ಚಿನ ಬಸ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಿಕೊಂಡು ಮತದಾರರನ್ನು ಕರೆದುಕೊಂಡು ಹೋಗಿದ್ದಾರೆ.
ಬೇರೆ ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಮತದಾರರನ್ನು ಮತ ಚಲಾವಣೆಗೆ ಕರೆದುಕೊಂಡು ಹೋಗಲು ಬಸ್‌ಗಳನ್ನು ಮುಂಗಡ ಕಾಯ್ದಿರಿಸಲಾಗಿತ್ತು. ಬುಧವಾರ ಮತದಾನಕ್ಕಾಗಿ ಮಂಗಳವಾರ ರಾತ್ರಿಯೇ ಮತದಾರರನ್ನು ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ, ಪೀಣ್ಯ, ಜಯನಗರ ಸೇರಿ ಇನ್ನಿತರ ಕಡೆಗಳಿಂದ ಬಸ್‌ಗಳಲ್ಲಿ ಕರೆದುಕೊಂಡು ಹೋಗಲಾಯಿತು. ಹಲವು ರಾಜಕಾರಣಿಗಳು ನೇರವಾಗಿ ಇಡೀ ಬಸ್‌ಗಳನ್ನು ಬುಕ್ ಮಾಡದೆ, ಅವುಗಳಲ್ಲಿನ ಆಸನವನ್ನು ಕಾಯ್ದಿರಿಸುವ ಮೂಲಕ ಚುನಾವಣಾ ಆಯೋಗದ ಖರ್ಚು-ವೆಚ್ಚ ವಿಭಾಗದ ಕಣ್ಣಿಗೆ ಬೀಳದಂತೆ ನೋಡಿಕೊಂಡಿದ್ದಾರೆ. ಪ್ರಮುಖವಾಗಿ ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿನ ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ ಮತದಾರರನ್ನು ಸಂಪರ್ಕಿಸಿ ಮತದಾನ ಮಾಡಲು ಕರೆದೊಯ್ದರು.
Karnataka Assembly Election ಮತದಾನಕ್ಕಾಗಿ ಊರಿಗೆ ಹೊರಟ ಜನ, ಬಸ್ ಸಿಗದೆ ಪರದಾ
ಕಳೆದೊಂದು ವಾರದ ಹಿಂದೆಯೇ ಮತದಾರರಿಗೆ ಕರೆ ಮಾಡಿ ಅವರು ಮತದಾನಕ್ಕೆ ಬರುತ್ತಾರೆಯೇ ಎಂಬುದನ್ನು ಖಾತರಿಪಡಿಸಿಕೊಂಡಿದ್ದರು. ಮತದಾರರನ್ನು ಬೆಂಗಳೂರಿನಿಂದ ಕರೆದುಕೊಂಡು ಬಂದು ಮತದಾನ ಮಾಡಿದ ನಂತರ ರಾತ್ರಿ ಮತ್ತೆ ಬೆಂಗಳೂರಿಗೆ ವಾಪಾಸು ಕರೆತರುವ ಕುರಿತು ತಿಳಿಸಿ, ಹೆಸರು ನೋಂದಾಯಿಸಿಕೊಂಡಿದ್ದರು. ಅಲ್ಲದೆ, ಮಂಗಳವಾರ ಮತದಾರರಿಗೆ ಗೂಗಲ್ ಫಾಮ್‌ರ್‍ನ್ನು ಕಳುಹಿಸಿ ಅದರಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿತ್ತು. ಅದರಲ್ಲಿ ಹೆಸರು ನೊಂದಾಯಿಸಿಕೊಂಡವರಿಗೆ ಯಾವ ಬಸ್‌ನಲ್ಲಿ, ಯಾವ ಸಮಯದಲ್ಲಿ, ಎಲ್ಲಿಂದ ಅವರನ್ನು ಕರೆದುಕೊಂಡು ಹೋಗಲಾಗುತ್ತದೆ ಎಂಬ ಕುರಿತು ತಿಳಿಸಲಾಗಿತ್ತು. ಅದರಂತೆ ನಿಗದಿತ ಸಮಯದಲ್ಲಿ ಬಸ್‌ಗಳಲ್ಲಿ ಮತದಾರರನ್ನು ಕರೆದುಕೊಂಡು ಹೋಗಿ ಅವರ ಕ್ಷೇತ್ರಗಳಿಗೆ ತಲುಪಿಸುವ ಕೆಲಸ ಮಾಡಲಾಗಿತ್ತು.
ಚುನಾವಣಾ ಕಾರ್ಯಕ್ಕೆ KSRTC ಬಸ್‌ಗಳ ನಿಯೋಜನೆ: ಊರಿಗೆ ತೆರಳಲು ಪ್ರಯಾಣಿಕರ ಪರದಾಟ
ಬಸ್‌ಗಳಿಲ್ಲದೆ ಪರದಾಟ
ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಸಂಪರ್ಕಕ್ಕೆ ಸಿಗದ ಮತದಾರರು ಮತದಾನಕ್ಕಾಗಿ ಬೆಂಗಳೂರಿನಿಂದ ತಮ್ಮ ಊರಿಗೆ ತೆರಳಲು ಮಂಗಳವಾರ ಪರದಾಡಿದರು. ಖಾಸಗಿ ಬಸ್‌ಗಳಲ್ಲಿ ಕೆಲವನ್ನು ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳಲಾಗಿದ್ದರೆ, ಉಳಿದವರನ್ನು ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳು ಮತದಾರರನ್ನು ಕರೆದುಕೊಂಡು ಹೋಗಲು ತೆಗೆದುಕೊಂಡಿದ್ದರು. ಅದರ ಜತೆಗೆ 2 ಸಾವಿರಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಚುನಾವಣಾ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಜನರು ಬಸ್‌ಗಳಿಲ್ಲದೆ ಪರದಾಡುವಂತಾಗಿತ್ತು.