ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10ರಂದು ಬೆಂಗಳೂರು ಮೆಟ್ರೋ ರೈಲು ನಿಗಮ ‘ನಮ್ಮ ಮೆಟ್ರೋ’ ರೈಲು ಸಂಚಾರದ ಅವಧಿಯನ್ನು ಮಧ್ಯರಾತ್ರಿವರೆಗೆ ವಿಸ್ತರಿಸಿದೆ.

ಬೆಂಗಳೂರು (ಮೇ.9): ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10ರಂದು ಬೆಂಗಳೂರು ಮೆಟ್ರೋ ರೈಲು ನಿಗಮ ‘ನಮ್ಮ ಮೆಟ್ರೋ’ ರೈಲು ಸಂಚಾರದ ಅವಧಿಯನ್ನು ಮಧ್ಯರಾತ್ರಿವರೆಗೆ ವಿಸ್ತರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್‌ (ಕಾಡುಗೋಡಿ) ನಿಲ್ದಾಣಗಳಿಂದ ಕೊನೆಯ ರೈಲು ಓಡಾಡಲಿವೆ. ಈ ಮಾರ್ಗದ ರೈಲುಗಳು ಮೇ 11ರಂದು ಮಧ್ಯರಾತ್ರಿ 12.5ರವರೆಗೆ ಸಂಚರಿಸಲಿವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್‌(Nadaprabhu Kempegowda Station Majestic)ನಿಂದ ಕೊನೆಯ ರೈಲಿನ ಸೇವೆಯು ಮಧ್ಯರಾತ್ರಿ 12.35ಕ್ಕೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆಯಿಂದ ಹೊರಡಲಿದೆ ಎಂದು ನಿಗಮ ತಿಳಿಸಿದೆ.

ಮತಗಟ್ಟೆಗಳಿಗೆ ತೆರಳಿದ‌ ಚುನಾವಣಾ ಸಿಬ್ಬಂದಿ; ಸುಗಮ ಮತದಾನಕ್ಕೆ ಬೆಳಗಾವಿಯಲ್ಲಿ ಸಕಲ ಸಿದ್ಧತೆ

ಮತದಾನ ಸಂಬಂಧ ಪ್ರಯಾಣಿಕರ ಸಂಖ್ಯೆ ಬುಧವಾರ ಎಂದಿಗಿಂತ ಹೆಚ್ಚಿರುವ ಸಾಧ್ಯತೆ ಇದೆ. ಜನತೆಗೆ ಅನುಕೂಲವಾಗಲು ಬಿಎಂಆರ್‌ಸಿಎಲ್‌ ಮೆಟ್ರೋ ರೈಲು ಸೇವೆ ಸಿಗುವಂತೆ ಸಮಯವನ್ನು ವಿಸ್ತರಣೆ ಮಾಡಿದೆ.

ಕರ್ನಾಟಕ ಚುನಾವಣೆ: ಗೋವಾದಲ್ಲಿ ರಜೆ ಘೋಷಣೆ

ಪಣಜಿ: ಕರ್ನಾಟಕ ಚುನಾವಣೆಯ ಹಿನ್ನೆಲೆಯಲ್ಲಿ ನೆರೆಯ ಗೋವಾ ರಾಜ್ಯದಲ್ಲಿ ಮೇ 10ರಂದು ವೇತನ ಸಹಿತ ರಜೆ ಘೋಷಿಸಲಾಗಿದೆ. ಈ ಕುರಿತಾಗಿ ಸೋಮವಾರ ಅಧಿಸೂಚನೆ ಬಿಡುಗಡೆ ಮಾಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಸರ್ಕಾರಿ ಹಾಗೂ ಖಾಸಗಿ ನೌಕರರಿಗೂ ರಜೆ ಘೋಷಣೆ ಮಾಡಿದ್ದಾರೆ. ಗೋವಾದಲ್ಲಿರುವ ಕರ್ನಾಟಕದವರಿಗೆ ಮತದಾನ ಮಾಡಲು ಅನುಕೂಲ ಒದಗಿಸುವುದಕ್ಕಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ಹಾಗೂ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದೊಂದು ಮೂರ್ಖತನ ನಿರ್ಧಾರ ಎಂದು ವಿಪಕ್ಷಗಳು ಆರೋಪಿಸಿದರೆ, ಕಾನೂನಿನ ಹೋರಾಟ ನಡೆಸುವುದಾಗಿ ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ.

Karnataka Assembly Election ಚುನಾವಣೆಗೂ ಮೊದಲು ಕನ್ನಡಿಗರಿಗೆ ಪ್ರಧಾನಿ ಮೋದಿ ಮಹತ್ವದ ಸಂದೇಶ!