ಚೆನ್ನೈನಲ್ಲಿ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿಗೆ ಚಿಕಿತ್ಸೆ: ಆರೋಗ್ಯದ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ

ವಿಧಾನಭೆಯ ಉಪ ಸಭಾಪತಿ ಆನಂದ್ ಮಾಮನಿ ಅವರು ತಮ್ಮ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದಲೇ ವಿಡಿಯೋ ಹೇಳಿಕೆ ರಿಲೀಸ್ ಮಾಡಿದ್ದು, ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Karnataka assembly deputy speaker Anand Mamani releases Video Statement On His Health condition rbj

ಬೆಂಗಳೂರು,(ಸೆಪ್ಟೆಂಬರ್, 15): ವಿಧಾನಭೆಯ ಉಪ ಸಭಾಪತಿ ಆನಂದ್ ಮಾಮನಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬೆಳಗಾವಿಯ ಯಲ್ಲಮ್ಮ ಕ್ಷೇತ್ರದ ಶಾಸಕರಾಗಿರುವ ಆನಂದ್ ಮಾಮನಿ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಚನೈನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಪ ಸಭಾಪತಿಯಾಗಿರುವ ಮಾಮನಿ ಅವರು ವಿಧಾನ ಮಂಡಲ ಅಧಿವೇಶನಕ್ಕೆ ಗೈರಾಗಿದ್ದಾರೆ.

ಆರೋಗ್ಯ ಸಚಿವರಿಗೆ ಅನಾರೋಗ್ಯ: ಅಧಿವೇಶನದಿಂದ ದೂರ ಉಳಿದ ಸುಧಾಕರ್

ಇನ್ನು ಬೆಂಗಳೂರು ಬಿಟ್ಟು ಚೆನ್ನೈಗೆ ಶಿಪ್ಟ್ ಮಾಡಿದ್ದರಿಂದ ಸಹಜವಾಗಿಯೇ ಅಭಿಮಾನಿಗಳಲ್ಲಿ, ಕಾರ್ಯಕರ್ತರಲ್ಲಿ ಅತಂಕ ಮನೆ ಮಾಡಿತ್ತು. ಬೆಂಗಳೂರು ಬಿಟ್ಟು ಚೆನ್ನೈಗೆ ಏಕೆ ಶಿಫ್ಟ್ ಮಾಡಿದ್ರು? ಸೀರಿಯಸ್ ಇರುವುದರಿಂದ ಚೆನ್ನೈಗೆ ಶಿಫ್ಟ್ ಮಾಡಲಾಗಿದೆ ಅಂತೆಲ್ಲಾ ಚರ್ಚೆಗಳು ನಡೆದಿವೆ. ಅಲ್ಲದೇ ಸಾಮಾಜಿ ಜಾಲತಾಣಗಳಲ್ಲಿ ಅವರ ಆರೋಗ್ಯ ಸ್ಥಿತಿ ಚಿಂತಾಜನದಲ್ಲಿದೆ ಅಂತೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಇದಕ್ಕೆ ಸ್ವತಃ ಆನಂದ್ ಮಾಮನಿ ಅವರೇ ಆಸ್ಪತ್ರೆಯಿಂದ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.

ಆನಂದ್ ಮಾಮನಿ ವಿಡಿಯೋ ಹೇಳಿಕೆ
ಚೆನ್ನೈನ ಆಸ್ಪತ್ರೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಆನಂದ ಮಾಮನಿ, ಮನುಷ್ಯನಿಗೆ ಜೀವನದಲ್ಲಿ ಸ್ವಾಭಾವಿಕವಾಗಿ ಆರೋಗ್ಯದಲ್ಲಿ ಏರಿಳಿತ ಸಹಜ. ಕೆಲವು ವರ್ಷಗಳಿಂದ ನನಗೆ ಮಧುಮೇಹ ಖಾಯಿಲೆ ಇದೆ. ಅದರ ಜೊತೆಗೆ ಬೇರೆ ಬೇರೆ ಕಾರಣ ಹೇಳಿ ಸುಳ್ಳು ವದಂತಿ ಕೆಲ ಮಾಧ್ಯಮಗಳಲ್ಲಿ ಬರ್ತಿದೆ. ಮನೆ ದೇವರಾದ ಜಾಲಿಕಟ್ಟಿ ಬಸವಣ್ಣ, ತಂದೆ-ತಾಯಿ, ರಾಜ್ಯದ ಜನರ ಆಶೀರ್ವಾದ ಇದೆ. ಸುಳ್ಳು ವಂದತಿಗೆ ನಮ್ಮ  ಕಾರ್ಯಕರ್ತರು ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಕುಟುಂಬ ಸದಸ್ಯರು ನನ್ನ ಬೆನ್ನಿಗೆ ನಿಂತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ, ಮಾಧ್ಯಮ ಸ್ನೇಹಿತರ ಸಹಕಾರ ಇದೆ. ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಯಾವುದೇ ಕಾರಣಕ್ಕೂ ಧೈರ್ಯಗೆಡುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ನಿಮ್ಮ ಬೆನ್ನಿಗಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿಎಸ್‌ವೈ ಸೇರಿದಂತೆ ಅನೇಕ ಶಾಸಕರು ನನಗೆ ಸಲಹೆ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ನಾನು ಧೈರ್ಯವಾಗಿ ಬಂದು ತಮ್ಮೆಲ್ಲರ ಸೇವೆಗೆ ಮತ್ತೆ ಅಣಿಯಾಗುತ್ತೇನೆಂದು ಆತ್ಮವಿಶ್ವಾಸ ನೀಡುತೇನೆ ಎಂದಿದ್ದಾರೆ.

ನಾನು ಚೆನ್ನೈನಲ್ಲಿರುವ ಕಾರಣಕ್ಕೆ ಚಿಂತಾಜನಕ, ಶಿಫ್ಟ್ ಮಾಡ್ತಾರೆ ಅನ್ನೋದು ಯಾವುದು ಇಲ್ಲ. ಚೆನ್ನೈ ಆಸ್ಪತ್ರೆಗೆ ದೊಡ್ಡ ವೈದ್ಯರು ಬಂದ ಬಳಿಕ ತಪಾಸಣೆ ಮಾಡಿಸಿ ಔಷಧಿ ತೆಗೆದುಕೊಂಡು ಬರುವೆ. ಆದಷ್ಟು ಬೇಗ ರಾಜಧಾನಿಗೆ ಬಂದು ತಮ್ಮ ಸಂಪರ್ಕಕ್ಕೆ ಸಿಗುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

Latest Videos
Follow Us:
Download App:
  • android
  • ios