Aland Dispute: ಗಂಗಾ ಜಲ ನಿಮ್ಮ ತಲೆ ಮೇಲೆ ಸುರಿಲಾ? ಪೊಲೀಸರಿಗೆ ಆಂದೋಲ ಸಿದ್ಧಲಿಂಗ ಶ್ರೀ ಪ್ರಶ್ನೆ
* ದರ್ಗಾ ಪ್ರವೇಶ ಮಾಡದಂತೆ ತಲವಾರ್ ಹಿಡಿದು ಕುಳಿತು ಅಲ್ಪಸಂಖ್ಯಾತ ಯುವಕರ ಗುಂಪು
* ಮತ್ತೊಂದೆಡೆ ದರ್ಗಾ ಪ್ರವೇಶ ಮಾಡೇ ಮಾಡ್ತಿವಿ ಅಂತಾ ಪಟ್ಟು ಹಿಡಿದು ಕುಳಿತು ಕೇಸರಿ ನಾಯಕರು
* ಕ್ಷಣ ಕ್ಷಣಕ್ಕೂ ಬಿಗಡಾಯಿಸ್ತಿರೋ ಆಳಂದ ಪಟ್ಟಣ ಪರಿಸ್ಥಿತಿ
ಕಲಬುರಗಿ(ಮಾ.01): ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಮಾರ್ಚ್ 3 ರವರೆಗೆ ನಿಷೇಧಾಜ್ಞೆ ಜಾರಿಯಾಗಿದೆ. ಹೀಗಿದ್ದರೂ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುವ ಈ ಹಬ್ಬಕ್ಕೆ ಜಿಲ್ಲಾಡಳಿತ ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಆಳಂದಕ್ಕೆ ಹೋಗಲು ಸಜ್ಜಾದ ಶ್ರೀ ರಾಮ ಸೇನೆ ಅಧ್ಯಕ್ಷ ಆಂದೋಲ ಸಿದ್ಧಲಿಂಗ ಶ್ರೀಯನ್ನು ಪೊಲೀಸರು ತಡೆದು, ವಶಕ್ಕೆ ಪಡೆದಿದ್ದಾರೆ. ಇದರಿಂದ ಗರಂ ಆದ ಸಿದ್ಧಲಿಂಗ ಶ್ರೀ ಗಂಗಾ ಜಲ ನಿಮ್ಮ ತಲೆ ಮೇಲೆ ಸುರಿಲಾ? ಎಂದು ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ. ಗಂಗಾ ಜಲ ತಂದಿವಿ, ರಾಘವ ಚೈತನ್ಯ ಶಿವಲಿಂಗ ಶುದ್ಧಿಕಾರಣಕ್ಕೆ, ನೀವು ನನ್ನ ಇಲ್ಲೇ ತಡಿದ್ದೀರಿ, ಈ ಪವಿತ್ರ ಜಲ ಏನು ಮಾಡ್ಲಿ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಆಳಂದ್ ಹೊರ ವಲಯದಲ್ಲಿ ಇರೋ ತಹಸೀಲ್ದಾರ್ ಕಚೇರಿವರಿಗೂ ನನ್ನ ಬಿಡ್ರಿ, ಅಲ್ಲಿರೋ ನಮ್ಮವರಿಗೆ ಈ ಗಂಗಾ ಜಲ ಕಲಶ ಹಸ್ತಾಂತರ ಮಾಡುವೆ ಎಂದಿದ್ದಾರೆ.
"
'ರ‍್ಯಾಲಿಯಲ್ಲಿ ಅನ್ನದಾತರೇ ಇರಲಿಲ್ಲ, ಕಾಂಗ್ರೆಸ್ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ'
ಹೀಗಿದ್ದರೂ ಅವರನ್ನು ಮುಂದೆ ಹೋಗಲು ಪೊಲೀಸರು ಬಿಡದಿದ್ದಾಗ ಮತ್ತಷ್ಟು ಕೋಪಗೊಂಡ ಅವರು ನಿಮ್ಮ ಈ ಕ್ರಮ ಸರಿ ಅಲ್ಲ, ಹಿಂದೂಗಳ ಪೂಜೆ ಹಕ್ಕು ಕಾಯುತ್ತಿದ್ದೀರಿ. ಇದು ತುಂಬಾ ಅನ್ಯಾಯ ಸಂಗತಿ, ಇದನ್ನು ನಾನು ಬಲವಾಗಿ ವಿರೋಧ ಮಾಡ್ತೀನಿ, ಉಗ್ರವಾಗಿ ಖಂಡಿಸ್ತೇನೆ ಎಂದು ಆಂದೋಲ ಶ್ರೀಗಳಿಂದ ಪೋಲಿಸರ ಜೊತೆ ವಾಗ್ವಾದ ನಡೆಸಿದ್ದಾರೆ.
ಅಲಂದದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇತ್ತ ದರ್ಗಾ ಪ್ರವೇಶ ಮಾಡದಂತೆ ಅಲ್ಪಸಂಖ್ಯಾತ ಯುವಕರ ಗುಂಪು ತಲವಾರ್ ಹಿಡಿದು ಕುಳಿತಿದ್ದರೆ, ಅತ್ತ ದರ್ಗಾ ಪ್ರವೇಶ ಮಾಡೇ ಮಾಡ್ತಿವಿ ಎಂದು ಕೇಸರಿ ನಾಯಕರು ಪಟ್ಟು ಹಿಡಿದು ಕುಳಿತಿದ್ದಾರೆ. ಲಾಡ್ಲೆ ಮಾಶಾಕ್ ದರ್ಗಾ ದಲ್ಲಿನ ರಾಘವ ಚೈತನ್ಯ ಶಿವಲಿಂಗ ಶುದ್ಧಿಕರಣ ಹಾಗೂ ಪೂಜೆಗೆ ಶ್ರೀ ರಾಮ ಸೇನೆ ಹಾಗೂ ಹಲವಾರು ಮಠಗಳ ಗುರುಗಳ ಪಟ್ಟು ಹಿಡಿದಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ್, ಬಸವರಾಜ್ ಮತ್ತಿಮೂಡ್, ಸುಭಾಷ್ ಗುತ್ತೇದಾರ್ ಕೂಡಾ ಬಸ್ ನಿಲ್ದಾಣದ ಮುಂದೆ ಧರಣಿ ಹೂಡಿದ್ದು, ಜಿಲ್ಲಾಡತದ ಕ್ರಮಕ್ಕೆ ಖಂಡನೀಯ ಎಂದು ಟೀಕಿಸಿದ್ದಾರೆ. ಅಲ್ಲದೇ ಕೇಸರಿ ಧ್ವಜ ಹಿಡಿದು ಬಸ್ ನಿಲ್ದಾಣದ ಬಳಿ ನೂರಾರು ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ.
ಕೇವಲ ಹತ್ತು ಜನರಿಗೆ ಮಾತ್ರ ಲಾಡ್ಲೇ ಮಶಾಕ್ ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದರೆ, ಅಲ್ಪ ಸಂಖ್ಯಾತರೂ ಇಯಾರನ್ನೂ ದರ್ಗಾ ಪ್ರವೇಶಿಸಲು ಬಿಡುವುದಿಲ್ಲ ಎಂದು ಹಠ ಹಿಡಿದು ನಿಂತಿದ್ದಾರೆ. ಒಟ್ಟಾರೆಯಾಗಿ ಕ್ಷಣ ಕ್ಷಣಕ್ಕೂ ಪಟ್ಟಣದಲ್ಲಿನ ಸ್ಥಿತಿ ಬಿಗಡಾಯಿಸುತ್ತಿದೆ ಎನ್ನುವುದು ಸತ್ಯ.
ಆಳಂದ: ವಿದ್ಯುತ್ ಬೇಲಿಯ ತಂತಿ ತಗುಲಿ ಇಬ್ಬರು ರೈತರ ದುರ್ಮರಣ
ಇನ್ನು ಅತ್ತ ದೇವಸ್ಥಾನದ ಪಕ್ಕದಲ್ಲಿರುವ ಲಾಡ್ಲ್ ಮಶಕ್ ದರ್ಗಾದಲ್ಲಿ ಶಬ್-ಎ-ಬರಾತ್ ಹಬ್ಬವನ್ನು ಸಹ ಆಚರಿಸಲಾಗುತ್ತದೆ. ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ, ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಾಗೂ ಸಿದ್ದಲಿಂಗ ಸ್ವಾಮೀಜಿ ಅವರ ಕಲಬುರಗಿ ಜಿಲ್ಲೆಗೆ ಮಾರ್ಚ್ 3ರವರೆಗೆ ಪ್ರವೇಶ ನಿಷೇಧಿಸಿ ಕಲಬುರಗಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಹಿಂದುತ್ವ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ದೇವಸ್ಥಾನದಲ್ಲಿ ಸ್ವಚ್ಛತಾ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಬೇಕಿತ್ತು.
ಈಗಾಗಲೇ ಆದೇಶ ಉಲ್ಲಂಘಿಸಿ ಜಿಲ್ಲೆಗೆ ಪ್ರವೇಶಿಸಲು ಯತ್ನಿಸಿದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಶಹಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ಹಿಂದೂ ವಿರೋಧಿ ನಿಲುವು ತಳೆಯುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದರು.ಕಲಬುರಗಿ ಸೇರಿದಂತೆ ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಶಿವರಾತ್ರಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಶಿವಲಿಂಗ ಅಗೌರವ ಪ್ರಕರಣ ರಾಜ್ಯ ಪೊಲೀಸ್ ಇಲಾಖೆಯನ್ನು ಚಿಂತೆಗೀಡು ಮಾಡಿದ್ದು, ಈ ವಿಚಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ.