Asianet Suvarna News Asianet Suvarna News

ಹಿರಿಯ ಸಾಹಿತಿ ಚಿದಾನಂದ ಮೂರ್ತಿ ಇನ್ನಿಲ್ಲ

ಕನ್ನಡದ ಮೇರು ಸಾಹಿತಿ ಚಿದಾನಂದ ಮೂರ್ತಿ ಅವರು ನಿಧನರಾಗಿದ್ದಾರೆ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. 

Kannada writer M Chidananda Murthy Passed Away
Author
Bengaluru, First Published Jan 11, 2020, 7:12 AM IST

ಬೆಂಗಳೂರು [ಜ.11]: ಕನ್ನಡ ಸಾಹಿತ್ಯ ಹಿರಿಯ ದಿಗ್ಗಜರೆನಿಸಿಕೊಂಡಿದ್ದ ಚಿದಾನಂದ ಮೂರ್ತಿ ಅವರು ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ಚಿದಾನಂದ ಮೂರ್ತಿ ಅವರು [88] ಶನಿವಾರ ಬೆಳಗ್ಗೆ 3.30ಕ್ಕೆ ನಿಧನರಾಗಿದ್ದಾರೆ.

"

ಚಿದಾನಂದ ಮೂರ್ತಿ ಅವರ ನಿಧನವು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.  ಇನ್ನು ಯಾವುದೇ ರೀತಿಯ ಅಂತಿಮ ಸಂಸ್ಕಾರಗಳಲ್ಲಿ ಪೂಜೆ ಪುನಸ್ಕಾರಗಳು ನೆರವೇರಿಸುವುದಿಲ್ಲ ಎಂದು ಕುಟುಂಬವು ಹೇಳಿದೆ 

ಚಿದಾನಂದಮೂರ್ತಿಗಳು 1931 ನೇ ಮೇ 10 ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ಕೋಗಲೂರು, ಸಂತೆಬೆನ್ನೂರುಗಳಲ್ಲಿ ಆಗಿದ್ದು, ಇಂಟರ್ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಅವರು ಹತ್ತನೆಯ ಸ್ಥಾನಗಳಿಸಿದ್ದರು. ಆದರೆ ಮೆಡಿಕಲ್ ಇಂಜಿನಿಯರಿಂಗ್ ಸೇರದೆ ಕನ್ನಡ ಆನರ್ಸ್ ಸೇರಿದರು.

ಅಂದಿನ ಪ್ರಸಿದ್ಧ ಅಧ್ಯಾಪಕರ ಮಾರ್ಗದರ್ಶನ ಮತ್ತು ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಪ್ರಥಮ ವರ್ಗ, ಪ್ರಥಮ ಶ್ರೇಣಿ ಅಲ್ಲದೆ ಆಲ್ ಆನರ್ಸ್ ಚಿನ್ನದ ಪದಕ ಸಹಾ ಪಡೆದರು (1953). 

"
ಬಳಿಕ ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾದರು. ಮತ್ತೆ ರಜೆ ಹಾಕಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ 1957ರಲ್ಲಿ ಮುಗಿಸಿದರು. 

ದಸರಾ ಉತ್ಸವ ಐತಿಹಾಸಿಕ ಹಂಪಿಯಿಂದಲೇ ಪ್ರಾರಂಭವಾಗಲಿ ಎಂದಿದ್ದರು ಚಿಮೂ

ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಕುವೆಂಪು ಪುತೀನ ಹಾಗು ರಾಘವಾಚಾರಂತಹ ಕನ್ನಡದ ಮಹಾ ಸಾಹಿತಿಗಳ ಪ್ರಭಾವಕ್ಕೊಳಗಾಗಿ  ಎಂ.ಎ ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಃರಚಿಸುವ ಪ್ರಯತ್ನಕ್ಕೆ ಮೂರ್ತಿಗಳು ತೊಡಗಿದರು. ಅದರ ಫಲವಾಗಿ ಬಂದ ಲೇಖನ ‘ಪಂಪಕವಿ ಮತ್ತು ಮೌಲ್ಯಪ್ರಸಾರ’. ಆ ಮೂಲಕ ಶಾಸನಕ್ಷೇತ್ರದೆಡೆಗೆ ಹೊರಳಿದ ಮೂರ್ತಿಗಳು ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ನಿಬಂಧ ಸಿದ್ಧಪಡಿಸಿ ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ 1964ರಲ್ಲಿ ಪಿ.ಎಚ್.ಡಿ ಪದವಿ ಪಡೆದರು. 

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ಚಿದಾನಂದ ಮೂರ್ತಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸಂಶೋಧಕರು ಹಾಗೂ ಚಿಂತಕರಾಗಿದ್ದ ಚಿದಾನಂದ ಮೂರ್ತಿ ಅವರ ಪ್ರಮುಖ ಕೃತಿಗಳು ಇಂತಿವೆ. 

  • ವೀರಶೈವ ಧರ್ಮ
  • ವಾಗರ್ಥ
  • ವಕಾನ ಸಾಹಿತ್ಯ
  • ಸಂಶೋಧನೆ
  • ಸಂಶೋಧನಾ ತರಂಗ ಸರಸ
  • ಪುರಾಣ ಸೂರ್ಯಗ್ರಹಣ
  • ಪಾಂಡಿತ್ಯ ರಸ
  • ಶೂನ್ಯ ಸಂಪಾನೆ
  • ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ
  • ಲಿಂಗಾಯತ ಅಧ್ಯಯನಗಳು
  • ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ
  • ಕರ್ನಾಟಕ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು

ಇವರ ಅಪಾರ ಸಾಹಿತ್ಯ ಕ್ಷೇತ್ರದ ಸಾಧನೆಗೆ ವಿವಿಧ ರೀತಿಯ ಪ್ರಶಸ್ತಿಗಳು ಒಲಿದು ಬಂದಿದ್ದವು. 
ರಾಜ್ಯೋತ್ಸವ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ಆಳ್ವಾಸ್ ನುಡಿಸಿರಿ ಪ್ರಶಸ್ತಿ

Follow Us:
Download App:
  • android
  • ios