ಬೆಂಗಳೂರು, (ಆ.04): ಕನ್ನಡ ಪರ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗಾರಾಜ್​ ಅವರ ಪತ್ನಿ ಜ್ಞಾನಾಂಬಿಕೆ (60) ಇಂದು ನಿಧನರಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಜ್ಞಾನಾಂಬಿಕೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಮಂಳವಾರ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಂಜೆ ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕದಲ್ಲಿ ಪೊಲೀಸ್ ಸರ್ಪಗಾವಲು, ವೇತನ ಸಿಗದೆ ಕ್ರಿಕೆಟಿಗರು ಕಂಗಾಲು; ಆ.4ರ ಟಾಪ್ 10 ಸುದ್ದಿ! 

ಜ್ಞಾನಾಂಬಿಕೆ ಅವರ ಮೃತದೇಹವನ್ನು ಡಾಲರ್ಸ್​ ಕಾಲನಿಯಲ್ಲಿರುವ ವಾಟಾಳ್​ ನಾಗರಾಜ್​ ಅವರ ಮನೆಗೆ ಕೊಂಡೊಯ್ಯಲಾಗಿದೆ.

ಬುಧವಾರ (ಆಗಸ್ಟ್​ 5) ಬೆಳಗ್ಗೆ 9 ಗಂಟೆಗೆ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮೈಸೂರಿನ ನಂಜನಗೂಡು ತಾಲೂಕಿನಲ್ಲಿರುವ 16 ಗ್ರಾಮಕ್ಕೆ ಕೊಂಡೊಯ್ದು ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.