ಕರ್ನಾಟಕದಲ್ಲಿ ಪೊಲೀಸ್ ಸರ್ಪಗಾವಲು, ವೇತನ ಸಿಗದೆ ಕ್ರಿಕೆಟಿಗರು ಕಂಗಾಲು; ಆ.4ರ ಟಾಪ್ 10 ಸುದ್ದಿ!
ಆಗಸ್ಟ್ 5 ರಂದು ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಹಿನ್ನಲೆಯಲ್ಲಿ ಕರ್ನಾಟಕದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಕಾರ್ಯಕ್ರಮಕ್ಕೆ ಎಲ್.ಕೆ ಅಡ್ವಾಣಿ, ಮರಳಿ ಮನೋಹರ್ ಜೋಶಿ ಆಗಮಿಸುತ್ತಿಲ್ಲ. ಕಳೆದ 10 ತಿಂಗಳಿನಿಂದ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಂಬಳ ನೀಡಿಲ್ಲ. ದೀಪಿಕಾ ಪಡುಕೋಣೆ ಕುರಿತು ಸಿದ್ದಾರ್ಥ್ ಮಲ್ಯ ಮಾತು, ವ್ಯಾಟ್ಸಾಪ್ನಲ್ಲಿ 50 ಮಂದಿ ಜೊತೆ ವಿಡಿಯೋ ಕಾಲ್ ಸೇರಿದಂತೆ ಆಗಸ್ಟ್ 4ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ರಾಮ ಮಂದಿರದ ಲೇಟೆಸ್ಟ್ ಫೋಟೋ: ಒಳಗಿಂದ ಹೀಗಿರುತ್ತೆ ಭವ್ಯ ದೇಗುಲ!
ಭೂಮಿ ಪೂಜೆ ಸಿದ್ಧತೆ ನಡುವೆ ರಾಮ ಮಂದಿರ ಮಾಡೆಲ್ ಫೋಟೋಗಳು ಕೂಡಾ ಬಹಿರಂಗಗೊಂಡಿವವೆ. ಬುಧವಾರ ಪ್ರಧಾನಿ ನರೇಂದ್ರ ಮೋದಿರಾಮ ಮಂದಿರದ ಭೂಮಿ ಪೂಜೆ ನಡೆಸಲಿದ್ದಾರೆ. ಇದಾದ ರಾಮ ಮಂದಿರದ ನಿರ್ಮಾಣ ಕಾರ್ಯ ಶೀಘ್ರವಾಗಿ ನಡೆಯಲಿದೆ. ನರೇಂದ್ರ ಮೋದಿ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಯೋಧ್ಯೆಗೆ ತಲುಪಲಿದ್ದಾರೆ ಹಾಗೂ ಸುಮಾರು ಮೂರು ತಾಸು ಅಲ್ಲಿ ಉಳಿಯಲಿದ್ದಾರೆ. ಅಯೋಧ್ಯೆಗೆ ಅತಿಥಿಗಳ ಆಗಮನವೂ ಆರಂಭವಾಗಿದ್ದು, ಇಂದು ಸಂಜೆಯೊಳಗೆ ಅಯೋಧ್ಯೆ ಗಡಿಯನ್ನು ಸೀಲ್ ಮಾಡಲಾಗುತ್ತದೆ. ಇದಾದ ಬಳಿಕ ಶ್ರೀರಾಮ ಊರಿಗೆ ಹೋಗಲು ಸಾಧ್ಯವಿಲ್ಲ.
ಕೋವಿಡ್ ಹಿನ್ನೆಲೆ: ರಾಮಮಂದಿರ ಭೂಮಿಪೂಜೆಗೆ ಅಡ್ವಾಣಿ, ಜೋಷಿ, ಪರಾಶರನ್, ಕಲ್ಯಾಣ್ ಬರಲ್ಲ...
ಆ.5 ರಂದು ನಡೆಯಲಿರುವ ರಾಮಮಂದಿರ ಭೂಮಿಪೂಜೆಗೆ 135 ಯತಿಗಳು ಸೇರಿದಂತೆ 175 ಜನರನ್ನು ಮಾತ್ರವೇ ಆಹ್ವಾನಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಹಿರಿಯ ವಕೀಲ ಕೆ. ಪರಾಶರನ್ ಮತ್ತು ಇತರೆ ಹಲವು ನಾಯಕರ ಜೊತೆ ಸಮಾಲೋಚನೆ ನಡೆಸಿದ ಬಳಿಕವೇ ಪಟ್ಟಿತಯಾರಿಸಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ತಗುಲಿದ ಕೊರೋನಾ ಸೋಂಕು!...
ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕೊರೋನಾ ಸೋಂಕು ತಗುಲಿರುವುದು ದೇಢವಾಗಿದ್ದು, ಸದ್ಯ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಈಗಿರುವಾಗ ಇತ್ತೀಚೆಗೆ ಅವರನ್ನು ಸಂಪರ್ಕಿಸಿದವರೆಲ್ಲರಿಗೂ ಕ್ವಾರಂಟೈನ್ ಆಗುವಂತೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಮೊಮ್ಮಗ, ಧವನ್‌ಗೆ ಕ್ವಾರಂಟೀನ್ಗೆ ಒಳಗಾಗುವಂತೆ ದೊಡ್ಡಪ್ಪ ಡಾ.ಯತೀಂದ್ರ ಸೂಚಿಸಿದ್ದಾರೆ.
ಕ್ಯಾಮೆರಾ ಮುಂದೆ ಬೆತ್ತಲೆಯಾಗಿ ಓಡಿದ ಪತ್ನಿ: ವರ್ಕ್ ಫ್ರಂ ಹೋಂನ ಫಜೀತಿ!...
ಕೊರೊನಾದಿಂದಾಗಿ ಅನೇಕ ಸಂಸ್ಥೆಗಳ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ಆದರೆ ಆನ್‌ಲೈನ್ ವಿಡಿಯೋ ಮೀಟಿಂಗ್ ಮಾಡುವಾಗ, ಲೈವ್ ಮೀಟಿಂಗ್‌ನಲ್ಲಿ ಭಾಗವಹಿಸುವಾಗ ಉಂಟಾಗುವ ಹಲವು ಫಜೀತಿಗಳು ನಗೆ ಉಕ್ಕಿಸುತ್ತವೆ.
ಬಿಸಿಸಿಐ ಕಳೆದ 10 ತಿಂಗಳಿನಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಂಬಳವನ್ನೇ ನೀಡಿಲ್ಲ..!...
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಕೇಂದ್ರೀಯ ಗುತ್ತಿಗೆಗೆ ಒಳಪಟ್ಟ ಆಟಗಾರರು ಕಳೆದ 10 ತಿಂಗಳಿನಿಂದ ಸಂಬಳವನ್ನೇ ಪಡೆದಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.
ಬ್ರೇಕಪ್ ನಂತರ ದೀಪಿಕಾ 'Crazy Female' ಎಂದ ಸಿದ್ಧಾರ್ಥ್ ಮಲ್ಯ
ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಮಲ್ಯ ಅವರ ಆಫೇರ್ ರೂಮರ್ಸ್ ಒಂದಷ್ಷು ದಿನ ಸದ್ದು ಮಾಡಿತ್ತು. ಐಪಿಎಲ್ ಪಂದ್ಯದ ವೇಳೆ ಪರಸ್ಪರ ಚುಂಬಿಸುತ್ತಿರುವುದನ್ನು ಸಹ ಕಂಡು ಬಂದಿತ್ತು. ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ್ದ ಈ ಕಪಲ್‌ನ ಬ್ರೇಕಪ್‌ಗೆ ಮಾತ್ರ ಸರಿಯಾದ ಕಾರಣ ತಿಳಿಯಲಿಲ್ಲ.
ಆಗಸ್ಟ್ 5ರಂದು ಕರ್ನಾಟಕದಾದ್ಯಂತ ಪೊಲೀಸ್ ಸರ್ಪಗಾವಲು: ಬಾಲ ಬಿಚ್ಚಿದ್ರೆ ಹುಷಾರ್...
ಆಗಸ್ಟ್ 5ರಂದು ರಾಜ್ಯದೆಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.
ವಾಟ್ಸಪ್ ನಲ್ಲಿ 50 ಮಂದಿ ಜೊತೆ ವಿಡಿಯೋ ಕಾಲ್ ಮಾಡೋದು ಹೀಗೆ..!...
ವಾಟ್ಸಪ್‌ನಲ್ಲಿ ಒಮ್ಮೆಲೆಗೆ 50 ಮಂದಿ ಜೊತೆಗೆ ಗ್ರೂಪ್ ಚಾಟ್ ಮಾಡುವುದು ಹೇಗೆ? ಇವುಗಳಿಗೆ ಯಾವ ಮಾರ್ಗವನ್ನು ಅನುಸರಿಸಬೇಕು? ಫೇಸ್ ಬುಕ್ ಮೆಸ್ಸೆಂಜರ್ ರೂಂ ಬಳಕೆಯು ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ಆಗಿರಲಿದೆಯೇ? ಕ್ರಿಯೇಟರ್‌ಗೆ ಏನೆಲ್ಲ ಅವಕಾಶಗಳಿವೆ? ಎಂಬಿತ್ಯಾದಿ ಮಾಹಿತಿಗಳನ್ನು ಇಲ್ಲಿ ಕೊಡಲಾಗಿದೆ.
ಅಮೆರಿಕದಲ್ಲಿ ಬಿಡುಗಡೆಯಾಗುತ್ತಿದೆ ಮೇಡ್ ಇನ್ ಇಂಡಿಯಾ KTM ಡ್ಯೂಕ್ 200!...
ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಅಡಿಯಲ್ಲಿ ಇದೀಗ ಹಲವು ವಿದೇಶಿ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಿದೆ. ಇನ್ನು ಹಲವು ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಲು ಘಟಕ ಸೇರಿದಂತೆ ಇತರ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಇದೀಗ ಆಸ್ಟ್ರೀಯಾದ KTM ಬೈಕ್ ಆಟೋಮೇಟರ್ ಭಾರತದಲ್ಲೇ ನಿರ್ಮಾಣ ಮಾಡಿದ ಡ್ಯೂಕ್ 200 ಬೈಕ್ ಅಮರಿಕದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.
ಕೊರೋನಾ ವೈರಸ್ ವೀಕ್ನೆಸ್ ಪತ್ತೆ ಹಚ್ಚಿದ ರಷ್ಯಾ; ಶೇ.99.9 ವೈರಸ್ ನಾಶಕ್ಕಿದೆ ಸುಲಭ ದಾರಿ!...
ಕೊರೋನಾ ವೈರಸ್ ನಿಯಂತ್ರಣಕ್ಕೆ ವಿಶ್ವದಲ್ಲಿನ ಹಲವು ದೇಶಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿದೆ. ಹಲವು ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಸಂಶೋಧಕರು, ತಜ್ಞ ವೈದ್ಯರ ತಂಡಗಳು ಪ್ರತಿ ದಿನ ಕೊರೋನಾ ವೈರಸ್ ಕುರಿತು ಅಧ್ಯಯನ ನಡೆಸುತ್ತಿದೆ. ಪ್ರತಿ ದಿನ ಹೊಸ ಹೊಸ ವಿಚಾರಗಳು ಬಯಲಾಗುತ್ತಿದೆ. ಇದೀಗ ರಷ್ಯಾ ತಜ್ಞರ ತಂಡ ಕೊರೋನಾ ವೈರಸ್ ವೀಕ್ ಪಾಯಿಂಟ್ ಪತ್ತೆ ಹಚ್ಚಿದ್ದಾರೆ. ಇಷ್ಟೇ ಅಲ್ಲ ವೈರಸ್ ನಾಶಕ್ಕೆ ಸುಲಭ ದಾರಿಯನ್ನು ಕಂಡು ಹಿಡಿದಿದ್ದಾರೆ.