'ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ'ನೆಂದು ಘೋಷಿಸಿ: 48 ಲಿಂಗಾಯತ ಮಠಾಧೀಶರ ಆಗ್ರಹ!

ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡುವಂತೆ ರಾಜ್ಯದ 48 ಲಿಂಗಾಯತ ಮಠಾಧೀಶರು ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹ ಮಾಡಿದ್ದಾರೆ.

Kannada 48 Lingayat pontiff demand for Declare Basavanna is cultural leader of Karnataka sat

ಬೆಂಗಳೂರು (ಜ.08): ವಚನ ಚಳುವಳಿಯ ಅಣ್ಣ ಬಸವಣ್ಣನನ್ನು ಕರ್ನಾಟಕ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡುವಂತೆ ರಾಜ್ಯದ ವಿವಿಧ ಮಠಗಳ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಆದರೆ, ಇದಕ್ಕೆ ಯಾವುದೇ ಒಪ್ಪಿಗೆ ಮುನ್ಸೂಚನೆ ಕೊಡದೇ ಕ್ಯಾಬಿನೆಟ್‌ನಲ್ಲಿಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದ ವಿವಿಧ 48 ಲಿಂಗಾಯತ ಮಠಗಳ ಸ್ವಾಮೀಜಿಗಳು ಬಸವಲಿಂಗ ಪಟ್ಟಾದೇವರು ಸ್ವಾಮೀಜಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಭೇಟಿ ಮಾಡಿದರು. ಈ ವೇಳೆ ತಮ್ಮ ಪ್ರಮುಖ ಬೇಡಿಕೆಯಾದ 'ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿ'ಯಾಗಿ ಘೋಷಣೆ ಮಾಡಬೇಕು ಎಂದು ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಭರವಸೆಯನ್ನು ನೀಡದೇ, ಈ ವಿಚಾರವನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದಾಗಿ ಎಂದು ತಿಳಿಸಿದರು. ಆದರೆ, ಇದಕ್ಕೊಪ್ಪದ ಸ್ವಾಮೀಜಿಗಳು ವಚನ ಚಳವಳಿಯ ಅಣ್ಣ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಲೇಬೇಕು ಎಂದು ಒತ್ತಾಯ ಹೇರಿದರು.

ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಶೃಂಗೇರಿ ಮಠದ ವಿರೋಧವಿಲ್ಲ, ಇದು ಧರ್ಮ ದ್ವೇಷಿಗಳ ಪಿತೂರಿ!

ಯಾವುದೇ ನಾಡು 'ಇವನಾರವ ಎನ್ನದೇ, ಇವ ನಮ್ಮವ' ಎಂಬ ಭ್ರಾತೃತ್ವದ ಭಾವನೆಯಿಂದಲೇ ಬಲವಾಗುತ್ತದೆ. ಎಲ್ಲರನ್ನೂ ಒಂದುಗೂಡಿಸಿ, ಅವರೆಲ್ಲರನ್ನೂ ಕಾಯಕದಲ್ಲಿ ತೊಡಗಿಸಿ, ಇದ್ದವರು ಇಲ್ಲದವರಿಗೆ ದಾಸೋಹ ಮಾಡುವುದನ್ನು ಕರ್ತವ್ಯವಾಗಿಸಿದಾಗ ಮಾತ್ರ ಈ ಸೋದರ ಭಾವನೆಯು ಗಟ್ಟಿಯಾಗುತ್ತದೆ; ನಾಡೂ ಅಭಿವೃದ್ಧಿಗೊಳ್ಳುತ್ತದೆ. ಕನ್ನಡ ನಾಡಿನ ಸೌಭಾಗ್ಯವೆಂದರೆ, 800 ವರ್ಷಗಳ ಹಿಂದೆಯೇ ಈ ನೆಲದಲ್ಲಿ ಅಂತಹದೊಂದು ವಿದ್ಯಮಾನವು ಚಳವಳಿಯಾಗಿ ಅರಳಿತು, ಬೆಳೆದಿತ್ತು. ಇಂದಿಗೂ ನಮ್ಮನ್ನು ಅದು ಕಾಪಾಡುತ್ತಲೇ ಇದೆ. ಹೀಗಾಗಿ ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದು. ಮುಂದಣ ತಲೆಮಾರಿಗೂ ದಾಟಿಸುವುದು ನಮ್ಮ ಕರ್ತವ್ಯವಾಗಿದೆ. ಇದನ್ನು ಸಾಧಿಸಲು ಇರುವ ಒಂದು ದಾರಿಯೆಂದರೆ, ಸರ್ಕಾರವೂ ಅದನ್ನು ಅಧಿಕೃತವಾಗಿ ಘೋಷಿಸುವುದು.

ಅಂತಹ ಒಂದು ಘೋಷಣೆಗಾಗಿ ನಾವು ನಿಮ್ಮನ್ನು ಆಗ್ರಹಿಸುತ್ತಿದ್ದೇವೆ. ಅದು ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸುವುದು. ಇಲ್ಲಿ ಬಸವಣ್ಣ ಯಾವು ಜಾತಿ ಅಥವಾ ಧರ್ಮದ ಪ್ರತಿನಿಧಿ ಅಲ್ಲ. ಬಸವಣ್ಣ ಒಂದು ಸಂಕೇತ. ಆತ ಜೇಡರ ದಾಸಿಮಯ್ಯನಿಂದ ಮಾದಾರ ಚೆನ್ನಯ್ಯನವರಿಗೆ, ಕಾಳವ್ವಯಿಂದ ಅಕ್ಕಮಹಾದೇವಿಯವರೆಗೆ, ಅಲ್ಲಮನಿಂದ ನಾರಾಯಣಗುರುಗಳವರೆಗೆ, ಚೆನ್ನಬಸವನಿಂದ ಭಗತ್‌ಸಿಂಗ್‌ರೆಗೆ, ಅಂಬೇಡ್ಕರರಿಂದ ಕುವೆಂಪುರವರೆಗೆ, ಮಹಾವೀರನಿಂದ ಗುರುನಾನಕರವರೆಗೆ, ಕ್ರಿಸ್ತನಿಂದ ಪ್ರವಾದಿ ಪೈಗಂಬರ್‌ವರೆಗೆ, ಬುದ್ಧನಿಂದ ಸಂವಿಧಾನದವರೆಗೆ, ನಮ್ಮ ಶರಣ ಚಳವಳಿಯು ಈ ಎಲ್ಲರ ಆಶಯಗಳನ್ನೂ ಧ್ವನಿಸಿದೆ. ಅದಕ್ಕೆ ವಚನಗಳ ಪ್ರಮಾಣವಿದೆ. ಅವೆಲ್ಲದರ ಸಂಕೇತ ಬಸವಣ್ಣ. ಹಾಗಾಗಿ ತಮ್ಮ ನೇತೃತ್ವದ ಘನ ಸರ್ಕಾರವು 'ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂಬ ಘೋಷಣೆಯನ್ನು ತಡಮಾಡದೇ ಮಾಡಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ. ಎಂದು ಸ್ವಾಮೀಜಿಗಳು ಮನವಿ ಪತ್ರಕ್ಕೆ ಸಹಿ ಹಾಕಿ ಕೊಟ್ಟಿದ್ದಾರೆ.

ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಹೈಕೋರ್ಟ್ ಒಪ್ಪಿಗೆ : ಸುಗುಣೇಂದ್ರ ತೀರ್ಥರಿಂದ ಅದ್ಧೂರಿ ಪುರಪ್ರವೇಶ!

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿಸಬೇಕು ಎನ್ನುವ ಒಕ್ಕೊರಲ ಒತ್ತಾಯವನ್ನು ಗೌರವಿಸುತ್ತೇನೆ. ವೈಯುಕ್ತಿಕವಾಗಿ ನನಗೆ ಈ ಘೋಷಣೆ ಬಗ್ಗೆ ತಕರಾರಿಲ್ಲ. ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಗಿಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದು. ಬಸವಾದಿ ಶರಣರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿವೆ. ವಚನ ಮತ್ತು ಸಂವಿಧಾನದ ಧ್ಯೇಯೋದ್ದೇಶಗಳು ಒಂದೇ ಆಗಿವೆ. ಆದ್ದರಿಂದ ಈ ಮಹತ್ವದ ಸಂಗತಿಯನ್ನು ಕ್ಯಾಬಿನೆಟ್ ಮುಂದೆ ಇಟ್ಟು ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios