ಕರ್ಫ್ಯೂ​ ಅವಧಿಯಲ್ಲಿ ಅವಶ್ಯ ಓಡಾಟಕ್ಕೆ ಪಾಸ್ ಬಗ್ಗೆ ಸ್ಪಷ್ಟನೆ ಕೊಟ್ಟ ಕಮಲ್ ಪಂತ್

ಕಳೆದ ಬಾರಿ ಲಾಕ್​ಡೌನ್​ ವೇಳೆ ಪಾಸ್ ವಿತರಿಸಿದಂತೆ ಈ ಬಾರಿಯೂ ಇದೇ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸ್ಪಷ್ಟನೆ ಕೊಟ್ಟಿದ್ದಾರೆ.

Kamal Pant Gives Clarification about Seva Sindhu E Pass during Corona curfew rbj

ಬೆಂಗಳೂರು, (ಏ.28): ಕೊರೋನಾ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಸರ್ಕಾರ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆವರೆಗೆ ಅವಕಾಶ ನೀಡಿದೆ.  ಬಳಿಕ ಎಲ್ಲವೂ ಬಂದ್‌ ಬಂದ್ ಆಗಲಿವೆ.

ಕಳೆದ ಬಾರಿ ಲಾಕ್​ಡೌನ್​ ಆದಾಗ ಅಗತ್ಯ ಸರಕುಗಳ ಸಾಗಾಟಕ್ಕೆ ಮತ್ತು ಅಗತ್ಯ ಸೇವೆಗಳನ್ನು ನೀಡಲು 'ಕೆಎಸ್​ಪಿ ಕ್ಲಿಯರ್ ಪಾಸ್' ವಿತರಿಸಲಾಗಿತ್ತು. ಅದರಂತೆ ಈ ಬಾರಿಯೂ ಪಾಸ್‌ ನೀಡಲಾಗುತ್ತೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ಕೊಟ್ಟಿದ್ದಾರೆ. 

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಕಮಲ್ ಪಂತ್ ಸ್ಪಷ್ಟನೆ
 ಮೇ 12ರವರೆಗೆ ವಿಧಿಸಿರುವ ಲಾಕ್‍ಡೌನ್ ಅವಧಿಯಲ್ಲಿ ಯಾವುದೇ ರೀತಿಯ ಪಾಸ್‍ಗಳನ್ನು ಬೆಂಗಳೂರು ನಗರ ಪೊಲೀಸ್ ವತಿಯಿಂದ ವಿತರಿಸಲಾಗುತ್ತಿಲ್ಲ ಎಂದು ಕಮಲ್ ಪಂತ್ ಸ್ಪಷ್ಟಪಡಿಸಿದರು.

ಯಾವುದೇ ಉದ್ದೇಶಕ್ಕಾಗಿ ಯಾವುದೇ ರೀತಿಯ ಪಾಸ್‍ಗಳನ್ನು ವಿತರಿಸಲಾಗುತ್ತಿಲ್ಲ. ಸರ್ಕಾರದ ಆದೇಶದಲ್ಲಿ ವಿನಾಯ್ತಿ ನೀಡಿರುವ ಸೇವೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ತಮ್ಮ ಸ್ಥಳಗಳಿಗೆ ಗುರುತಿನ ಚೀಟಿ ಅಥವಾ ಸಮರ್ಥನೀಯ ದಾಖಲಾತಿಗಳನ್ನು ಹಾಜರುಪಡಿಸಿ ಪ್ರಯಾಣಿಸಬಹುದೆಂದು ಅಯುಕ್ತರು ಹೇಳಿದರು.
 

Latest Videos
Follow Us:
Download App:
  • android
  • ios