14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ
ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 14 ದಿನ ಕರ್ನಾಟಕ ಲಾಕ್ ಆಗಲಿದೆ ಎಂದು ಸ್ವತಃ ಸಿಎಂ ಬಿಎಸ್‌ವೈ ಘೋಷಣೆ ಮಾಡಿದ್ದಾರೆ. ಇನ್ನೂ ಈ ಲಾಕ್‌ಡೌನ್ ಸಂದರ್ಭದಲ್ಲಿ ಏನು ಇರುತ್ತೆ? ಏನು ಇರಲ್ಲ? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಏ.26): ಕರ್ನಾಟಕದಲ್ಲಿ ಕೋವಿಡ್19 ಸೋಂಕು ವ್ಯಾಪಕವಾಗಿ ಪಸರಿಸುತ್ತಿರುವುದರಿಂದ ಏಪ್ರಿಲ್ 27 ರಿಂದ 14 ದಿನ ಕರ್ನಾಟಕವನ್ನು ಬಾಗಶಃ ಲಾಕ್‌ಡೌನ್ ಮಾಡಲು ಇಂದು (ಸೋಮವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ.
"
ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು ಆ ನಂತರ ಕಟ್ಟುನಿಟ್ಟಿನ ಲಾಕ್‌ಡೌನ್ ಮಾಡಲು ತೀರ್ಮಾನಿಸಲಾಗಿದೆ.
14 ದಿನ ಕರ್ನಾಟಕ ಲಾಕ್‌ಡೌನ್: ಸಿಎಂ ಘೋಷಣೆ, ಎಂದಿನಿಂದ?
ಇದರ ಮಧ್ಯೆ ಮತ್ತೆ ಲಾಕ್ ಡೌನ್ ಆದರೆ ತಮಗೆ ಎಲ್ಲಿ ಮದ್ಯ ಸಿಗುವುದಿಲ್ಲವೋ ಎಂಬ ಆತಂಕದಲ್ಲಿದ್ದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮದ್ಯವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ಸಿಗಲಿದ್ದು, ಆದರೆ ಇದಕ್ಕೆ ಸೀಮಿತ ಅವಧಿ ಫಿಕ್ಸ್ ಆಗಲಿದೆ. ಸದ್ಯ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಷ್ಟು ಮಾಹಿತಿ ನೀಡಿದ್ದು, ಈ ಬಗ್ಗೆ ಕೆಲವೇ ಕ್ಷಣಗಲ್ಲಿ ಮಾರ್ಗಸೂಚಿ ಪ್ರಕಟವಾಗಲಿದೆ.
ಏನಿರುತ್ತೆ?
* ಮೆಡಿಕಲ್ ಸರ್ವೀಸ್ ಇರುತ್ತೆ
* ಕೃಷಿ ಚಟುವಟಿಕೆ ಇರುತ್ತೆ
* ನಿರ್ಮಾಣ ಕಾರ್ಯ ಗಳು ನಡೆಯುತ್ತವೆ
* ಮ್ಯಾನೇಜಿಂಗ್ ಸೆಕ್ಟರ್, ಕೃಷಿ ಇಲಾಖೆ ಮುಂದುವರೆಯುತ್ತೆ
* ಸರಕು ಸಾಗಾಣಿಕೆ ವಾಹನಗಳಿಗೆ ತೊಂದರೆ ಆಗಲ್ಲ
* ಮದ್ಯ ಪಾರ್ಸಲ್ ಗೆ ಅವಕಾಶ
* ಮೆಡಿಕಲ್ ಶಾಪ್,
* ಬ್ಯಾಂಕ್, ಎಟಿಎಂ ಸೇವೆ
* ರಕ್ತನಿಧಿ ಕೇಂದ್ರ
* ಆಸ್ಪತ್ರೆ
* ಕ್ಲಿನಿಕ್‌ಗಳು
*ಬಾರ್, ದಿನಸಿ ಅಂಗಡಿ (ನಿಗದಿತ ಸಮಯದಲ್ಲಿ ತೆರೆಯಲು ಅವಕಾಶ, ಬೆಳಗ್ಗೆ 6ರಿಂದ 10ರ ತನಕ ಅವಕಾಶ)
ಏನಿರಲ್ಲ?
* ಸಾರಿಗೆ ವ್ಯವಸ್ಥೆ ಇರಲ್ಲ
* ಶೈಕ್ಷಣಿಕೆ ಚಟುವಟಿಕೆಗಳು ಬಂದ್
* ಚಿತ್ರಮಂದಿರಗಳು ಕ್ಲೋಸ್
* ಸ್ವಿಮ್ಮಿಂಗ್ ಫೂಲ್, ಜಿಮ್, ಕೋಚಿಂಗ್ ಸೆಂಟರ್ ಇರಲ್ಲ
* ಬಾರ್ ಮತ್ತು ರೆಸ್ಟೋರೆಂಟ್ ಇರಲ್ಲ
* ಪ್ರವಾಸಿ ತಾಣ ಬಂದ್
* ಶಾಪಿಂಗ್ ಮಾಲ್ ಬಂದ್
* ಗಾರ್ಮೆಂಟ್ಸ್ ಕಾರ್ಯನಿರ್ವಹಣೆಗೆ ಅವಕಾಶ ಇಲ್ಲ
* ಶಾಲಾ-ಕಾಲೇಜು ಇಲ್ಲ
* ಅಂತರ್ ಜಿಲ್ಲೆ, ರಾಜ್ಯ ಓಡಾಟ, ಬಸ್ ಸಂಚಾರ (ಕೆಎಸ್‌ಆರ್‌ಟಿಸಿ,ಬಿಎಂಟಿಸಿ, ಮೆಟ್ರೋ ಸಂಚಾರ) ಗೂಡ್ಸ್, ಖಾಸಗಿ ವಾಹನಗಳ ಓಡಾಡಕ್ಕೆ ಬಂದ್ ಆದ್ರೆ ಅಂತರ್ ಜಿಲ್ಲೆಗಳ ಗೂಡ್ಸ್ ವಾಹನಗಳ ಓಡಾಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ.