Asianet Suvarna News Asianet Suvarna News

ಮತಾಂತರ ನಿಷೇಧವಿದ್ರೂ ಅಂಗನವಾಡಿ ಕಾರ್ಯಕರ್ತೆಯಿಂದಲೇ ಮತಾಂತರ ಕೃತ್ಯ; ಪ್ರಮೋದ್ ಮುತಾಲಿಕ್ ಆಕ್ರೋಶ

ಕರ್ನಾಟಕ ಸರ್ಕಾರದಲ್ಲಿ ಮತಾಂತರ ನಿಷೇಧ ಕಾನೂನು ಜಾರಿ ಇದ್ದರೂ ಸಹಿತ ನಿರಂತರವಾಗಿ ಕ್ರಿಶ್ಚಿಯನ್ನರು ರಾಜ್ಯಾದ್ಯಂತ ಮತಾಂತರ ಮಾಡುತ್ತಿದ್ದಾರೆ. ವಿಶೇಷವಾಗಿ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿರುವು ಗಮನಕ್ಕೆ ಬಂದಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

Conversion to Christianity by Anganwadi worker at obalapur at belagavi pramod mutalik outraged rav
Author
First Published Dec 28, 2023, 1:08 PM IST

ಚಿಕ್ಕೋಡಿ (ಡಿ.28): ಕರ್ನಾಟಕ ಸರ್ಕಾರದಲ್ಲಿ ಮತಾಂತರ ನಿಷೇಧ ಕಾನೂನು ಜಾರಿ ಇದ್ದರೂ ಸಹಿತ ನಿರಂತರವಾಗಿ ಕ್ರಿಶ್ಚಿಯನ್ನರು ರಾಜ್ಯಾದ್ಯಂತ ಮತಾಂತರ ಮಾಡುತ್ತಿದ್ದಾರೆ. ವಿಶೇಷವಾಗಿ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿರುವು ಗಮನಕ್ಕೆ ಬಂದಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಓಬಳಾಪುರದಲ್ಲಿ ಅಂಗನವಾಡಿ ಕಾರ್ಯಕರ್ತೆಯಿಂದ ಮತಾಂತರ ನಡೆಯುತ್ತಿದೆ ಎಂಬ ಆರೋಪ ಸಂಬಂಧ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು,  ರಾಮದುರ್ಗ ತಾಲೂಕಿನ ಓಬಳಾಪುರ ತಾಂಡಾದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಮತಾಂತರ ಆಗುತ್ತಿದೆ. ಈಗಾಗಲೇ ಅಲ್ಲಿನ ಜನರು ಪ್ರತಿಭಟನೆ ಮಾಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಒತ್ತಾಯ ಪೂರ್ವಕವಾಗಿ ಮಾಡುತ್ತಿದ್ದಾರೆ. ಯಾರ ಯಾರನ್ನು ಮತಾಂತರ ಮಾಡಿದ್ದಾರೆಂಬ ಮಾಹಿತಿ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಬೇಕು. ಕೂಡಲೇ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯನ್ನು ಬಂಧಿಸಿ ಸಸ್ಪೆಂಡ ಮಾಡಬೇಕು ಎಂದು ಆಗ್ರಹಿಸಿದರು.

ಕಿಸ್ಸಿಂಗ್‌ ರಾಣಿಯೆಂದೇ ಫೇಮಸ್ ಆದ ಈ ನಟಿಯ ನಿಜಜೀವನದ ಕಥೆ ಭಯಾನಕ, ಮದುವೆಗೆ ಮುನ್ನ ಕ್ರೈಸ್ತ ಧರ್ಮಕ್ಕೆ ಮತಾಂತರ

ಕಾಂಗ್ರೆಸ್ ಸರ್ಕರ ಮತಾಂತರ ಕಾಯ್ದೆ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿರುವುದೇ ಈ ರೀತಿ ಮತಾಂತರಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಎಗ್ಗಿಲ್ಲದೆ ಮತಾಂತರ ಕಾರ್ಯ ನಡೆಯುತ್ತಿದೆ ಅಲ್ಲದೆ ಮತಾಂತರ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಇದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಮತಾಂತರದ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರ ಇಡೀ ರಾಜ್ಯಾದ್ಯಂತ ಶ್ರೀರಾಮ‌ ಸೇನೆ ಸಂಘಟನೆ ಮೂಲಕ ಮತಾಂತರ ವಾದಿಗಳ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. 

13ನೇ ವಯಸ್ಸಿನಲ್ಲಿ ತನಗಿಂತ 30ವರ್ಷ ದೊಡ್ಡ ಗುರುವನ್ನೇ ಮದುವೆಯಾಗಿ ಇಸ್ಲಾಂಗೆ ಮತಾಂತರವಾದ ಪ್ರಸಿದ್ಧ ಕೊರಿಯೋಗ್ರಾಫರ್

Follow Us:
Download App:
  • android
  • ios