ಕಲಬುರಗಿ ತಾಲೂಕಿನ ಅಷ್ಟಗಾ ಗ್ರಾಮದಲ್ಲಿ ರಿಕ್ಟರ್ ಮಾಪಕದಲ್ಲಿ 2 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ. ಈ ಕಂಪನದ ಪ್ರಮಾಣ ಕಡಿಮೆ ಇದ್ದು, ಜನರ ಗಮನಕ್ಕೆ ಬಂದಿಲ್ಲವಾದರೂ, ಕಳೆದ ತಿಂಗಳು ಚಿಂಚೋಳಿಯಲ್ಲಿ ನಡೆದ ಇದೇ ರೀತಿಯ ಘಟನೆಯ ನಂತರ ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕಲಬುರಗಿ (ನ.14) ಕಲಬುರಗಿ ತಾಲೂಕಿನ ಕಲ್ಲಹಂಗರಗಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಷ್ಟಗಾ ಗ್ರಾಮಲ್ಲಿ ಶುಕ್ರವಾರ ರಾತ್ರಿ 8 ಗಂಟೆ 3 ನಿಮಿಷಕ್ಕೆ ರಿಕ್ಟರ್‌ ಮಾಪಕದಲ್ಲಿ 2 ರಷ್ಟು ತೀವ್ರತೆ ಇರುವಂತಂಹ ಭೂಕಂಪನ ದಾಖಲಾಗಿದೆ.

ಕಲಬುರಗಿಯಲ್ಲಿ ಮತ್ತೆ ಭೂಕಂಪನ: 2ರಷ್ಟು ತೀವ್ರತೆ ದಾಖಲು

ಈ ಕಂಪನದ ತೀವ್ರತೆ, ಪ್ರಮಾಣ ಕಮ್ಮಿ ಇತ್ತು, ಹೀಗಾಗಿ ಇದು ಊರಿನ ಜನರ ಗಮನಕ್ಕೆ ಅಷ್ಟಾಗಿ ಬಂದಿಲ್ಲ ಎನ್ನಲಾಗಿದೆ. ಭೂಮಿ ಕಂಪಿಸಿರುವುದು ರಿಕ್ಟರ್‌ ಮಾಪಕದಲ್ಲಿ ದಾಖಲಯಾಗಿದೆ, ಆದರೆ ತೀವ್ರತೆ ಅಷ್ಟಾಗಿರಲಿಲ್ಲ, ಜನ ಭಯ ಪಡುವ ಅಗತ್ಯವಿಲ್ಲವೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ತಿಂಗಳೂ ಭೂಮಿ ಕಂಪಿಸಿತ್ತು:

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಅಕ್ಟೋಬರ್ 21 ರಂದು ಬೆಳಿಗ್ಗೆ 2.5 ತೀವ್ರತೆ ಲಘು ಭೂಕಂಪ ಸಂಭವಿಸಿತ್ತು. ಗಡಿಕೇಶ್ವರ ಗ್ರಾಮದ ಬಳಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿತ್ತು. ಭೂಕಂಪನದ ಭಯಕ್ಕೆ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದು ವರದಿಯಾಗಿತ್ತು. ತಿಂಗಳೊಳಗೆ ಇದೀಗ ಮತ್ತೆ ಕಲಬುರಗಿಯಲ್ಲಿ ಭೂಮಿ ಕಂಪಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.