ಪಿಎಸ್ಐ ನೇಮಕಾತಿ ಅಕ್ರಮ ಕೇಸ್‌: ಬೇಲ್‌ ಮತ್ತೆ ರಿಜೆಕ್ಟ್, ದಿವ್ಯಾ ಸೇರಿ 8 ಮಂದಿಗೆ ಜೈಲೇ ಗತಿ..!

*  ಸಿಐಡಿ ಪರ ವಾದ ಮಂಡಿಸಿದ ಸರಕಾರಿ ಅಭಿಯೋಜಕ ನರಸಿಂಹಲು ಎಸ್.ಆರ್ 
*  ಕಳೆದ ಎರಡು ತಿಂಗಳಿಂದ ಜಾಮೀನಿಗಾಗಿ ಪರದಾಡುತ್ತಿರುವ ಆರೋಪಿಗಳು
*  ಎಂಟು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ 
 

Kalaburagi court rejected the bail application of Divya Hagaragi of PSI Recruitment Scam grg

ಕಲಬುರಗಿ(ಜೂ.11): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ದಿವ್ಯಾ ಹಾಗರಗಿ ಸೇರಿದಂತೆ 8 ಆರೋಪಿಗಳ ಜಾಮೀನು ಮತ್ತೆ ರಿಜೆಕ್ಟ್ ಆಗಿದೆ. ಹೀಗಾಗಿ ದಿವ್ಯಾ ಸೇರಿ 8 ಜನರಿಗೆ ಇನ್ನೂ ಜೈಲೇ ಗತಿಯಾಗಿದೆ. 

ಆರೋಪಿಗಳ ಜಾಮೀನು ಅರ್ಜಿಯನ್ನ ಕಲಬುರಗಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತಿರಸ್ಕರಿಸಿದೆ.  ಕಿಂಗ್‌ಪಿನ್‌f ದಿವ್ಯಾ ಹಾಗರಗಿ, ಆರ್.ಡಿ. ಪಾಟೀಲ ಸಹೋದರ ಮಹಾಂತೇಶ ಡಿ. ಪಾಟೀಲ, ಅಭ್ಯರ್ಥಿ ಶ್ರೀಧರ ಪವಾರ, ಪರೀಕ್ಷಾ ಮೇಲ್ವಿಚಾರಕರಾದ ಅರ್ಚನಾ ಹೊನಗೇರಿ, ಸಾವಿತ್ರಿ ಕಾಬಾ, ಆಶ್ರಯದಾತ ಕಾಳಿದಾಸ, ಮಲ್ಲಿಕಾರ್ಜುನ ಮೇಳಕುಂದಿ, ಅಕ್ರಮಕ್ಕೆ ಸಹಾಯ ಮಾಡಿರುವ ಶರಣಬಸಪ್ಪ ಇವರೆಲ್ಲರ ಜಾಮೀನು ಅರ್ಜಿ ವಜಾ ಮಾಡಲಾಗಿದೆ.

PSI Recruitment Scam; ವಿವಾದಕ್ಕೆ ಕಾರಣವಾಗಿದ್ದ ಅಭ್ಯರ್ಥಿ ದರ್ಶನ್ ಗೌಡ ಸೇರಿ ಮೂವರು ಅರೆಸ್ಟ್

ಆರೋಪಿಗಳ ಜಾಮೀನು ಅರ್ಜಿಯನ್ನ ಕಲಬುರಗಿಯ ಒಂದನೇಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಹೇಮಾವತಿ ಅವರು ತಿರಸ್ಕರಿಸಿದ್ದಾರೆ. ಸಿಐಡಿ ಪರ ಸರಕಾರಿ ಅಭಿಯೋಜಕ ನರಸಿಂಹಲು ಎಸ್.ಆರ್ ಅವರು ವಾದ ಮಂಡಿಸಿದ್ದಾರೆ. ಆರೋಪಿಗಳು ಕಳೆದ ಎರಡು ತಿಂಗಳಿಂದ ಜಾಮೀನಿಗಾಗಿ ಪರದಾಡುತ್ತಿದ್ದಾರೆ. ನಿನ್ನೆ(ಶುಕ್ರವಾರ) ಮತ್ತೆ ಈ ಎಂಟು ಆರೋಪಿಗಳ ಜಾಮೀನು ಅರ್ಜಿಯನ್ನ ನ್ಯಾಯಾಲಯ ತಿರಸ್ಕರಿಸಿದೆ.

Latest Videos
Follow Us:
Download App:
  • android
  • ios