ವಕ್ಫ್ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಯತ್ನಾಳ ಬಣದ ಮುಖಂಡರು ವಾರ್‌ರೂಂ ಸ್ಥಾಪಿಸಿ ಸಾರ್ವಜ ನಿಕರಿಂದ ಮಾಹಿತಿ, ದೂರಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ ಅದರ ಸಂಬಂಧ ರಾಜ್ಯದ ಹಲವೆಡೆ ಪ್ರವಾಸ ಮಾಡಿ ಎಲ್ಲಿ, ಹೇಗೆ ತೊಂದರೆಯಾಗಿದೆ ಎಂಬುದರ ಕುರಿತು ಎಳೆಎಳೆಯಾಗಿ ವಿವರ ಸಂಗ್ರಹಿಸಿದ್ದರು.
ಬೆಂಗಳೂರು(ಜ.29): ವಕ್ಫ್ ಆಸ್ತಿ ವಿವಾದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿಕೊಟ್ಟ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರ ಕಾರ್ಯವೈಖರಿಗೆ ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ವಕ್ಫ್ ಆಸ್ತಿ ವಿವಾದದ ಕುರಿತು ಮಾಹಿತಿ ಸಂಗ್ರಹಿಸುತ್ತಿರುವ ಪಾಲ್ ಅವರು ಯತ್ನಾಳ ಬಣದ ಮುಖಂಡರಾದ ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಅರವಿಂದ್ ಲಿಂಬಾವಳಿ ಅವರಿಗೆ ಕರೆ ಮಾಡಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಿದ್ದುಪಡಿ ಹೆಸರಲ್ಲಿ ವಕ್ಫ್ ಅಳಿಸಲು ಸಾಧ್ಯವಿಲ್ಲ, ಅಲ್ಲಾಹ್ ಉಳಿಸುತ್ತಾನೆ: ಫಾರೂಕ್ ಅಬ್ದುಲ್ ಹೇಳಿಕೆ ಸಂಚಲನ
ವಕ್ಫ್ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಯತ್ನಾಳ ಬಣದ ಮುಖಂಡರು ವಾರ್‌ರೂಂ ಸ್ಥಾಪಿಸಿ ಸಾರ್ವಜ ನಿಕರಿಂದ ಮಾಹಿತಿ, ದೂರಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ ಅದರ ಸಂಬಂಧ ರಾಜ್ಯದ ಹಲವೆಡೆ ಪ್ರವಾಸ ಮಾಡಿ ಎಲ್ಲಿ, ಹೇಗೆ ತೊಂದರೆಯಾಗಿದೆ ಎಂಬುದರ ಕುರಿತು ಎಳೆಎಳೆಯಾಗಿ ವಿವರ ಸಂಗ್ರಹಿಸಿದ್ದರು.
ವಕ್ಫ್ ಜೆಪಿಸಿ ಸಭೆಯಲ್ಲಿ ಗದ್ದಲ: 10 ವಿಪಕ್ಷ ಸಂಸದರು ಸಸ್ಪೆಂಡ್
ಲಿಂಬಾವಳಿ ಜಾಲದಿಂದ ಸಂಗ್ರಹ:
ಈ ವಕ್ಫ್ ಹೋರಾಟ ರೂಪಿಸುವಲ್ಲಿ ಅರವಿಂದ್ ಲಿಂಬಾವಳಿ ಪ್ರಮುಖ ಪಾತ್ರ ವಹಿಸಿದ್ದರು. ಎಬಿವಿಪಿ ಸಂಘಟನೆಯ ಹೋರಾಟದಿಂದ ರಾಜಕೀಯ ಪ್ರವೇಶಿಸಿದ್ದ ಲಿಂಬಾವಳಿ ಅವರು ಸುದೀರ್ಘ ಕಾಲ ಪಕ್ಷದ ಪ್ರಧಾನ ಕಾವ್ಯದರ್ಶಿಯಾಗಿದ್ದರು. ಜತೆಗೆ, ಶಾಸಕರಾಗಿ, ಸಚಿವರಾಗಿ ಅನುಭವ ಹೊಂದಿದ್ದಲ್ಲದೆ ರಾಜ್ಯದುದ್ದಕ್ಕೂ ಪ್ರಬಲ ಸಂಪರ್ಕ ಜಾಲ ಹೊಂದಿದ್ದರು. ಇದನ್ನು ಸಮರ್ಥವಾಗಿ ಬಳಸಿಕೊಂಡು ಲಿಂಬಾವಳಿ ಅವರು ವಕ್ಸ್ ಹೋರಾಟವನ್ನು ಯಶಸ್ವಿಯಾಗಿ ನಡೆಸುವಲ್ಲಿ ನೀಲನಕ್ಷೆ ರೂಪಿಸಿದ್ದರು.
ಇದರ ಪರಿಣಾಮ ವಕ್ಫ್ ಆಸ್ತಿ ವಿವಾದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿದ ಯತ್ನಾಳ ಬಣದ ಮುಖಂಡರು ಅದನ್ನು ದೆಹಲಿಗೆ ತೆರಳಿ ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಸಲ್ಲಿಸಿದ್ದರು. ಇಷ್ಟು ವಿವರವಾದ ಮಾಹಿತಿ ಕಂಡು ಅಚ್ಚರಿಗೊಂಡ ಪಾಲ್ ಅವರು ಲಿಂಬಾವಳಿ, ಕುಮಾರ್ ಬಂಗಾರಪ್ಪ, ಯತ್ನಾಳ ಸೇರಿ ಇತರ ಮುಖಂಡರ ಕಾರ್ಯವೈಖರಿಯನ್ನು ಪ್ರಶಂಸಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
