ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ನ ಸಂತ್ರಸ್ಥೆಯ ಕಿಡ್ನಾಪ್‌ ಕೇಸ್‌ನಲ್ಲಿ ಜೆಡಿಎಸ್‌ ಶಾಸಕ ಹಾಗೂ ಹಿರಿಯ ರಾಜಕಾರಣಿ ಎಚ್‌ಡಿ ರೇವಣ್ಣಗೆ ಜಾಮೀನು ಮಂಜೂರಾಗಿದೆ.

ಬೆಂಗಳೂರು (ಮೇ.13): ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ನ ಸಂತ್ರಸ್ಥೆಯನ್ನು ಅಪರಹಣ ಮಾಡಿದ್ದ ಕೇಸ್‌ನಲ್ಲಿ ಜೈಲುಪಾಲಾಗಿದ್ದ ಜೆಡಿಎಸ್‌ ಶಾಸಕ ಹಾಗೂ ಹಿರಿಯ ರಾಜಕಾರಣಿ ಎಚ್‌ಡಿ ರೇವಣ್ಣಗೆ ಜಾಮೀನು ಮಂಜೂರಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಡೀ ದಿನಗಳ ಕಾಲ ನಡೆದ ವಾದ ಮಂಡನೆಯ ಬಳಿಕ ರೇವಣ್ಣ ಅವರಿಗೆ ಜಾಮೀನು ನೀಡಲು ಕೋರ್ಟ್‌ ಆದೇಶ ನೀಡಿದೆ. ನ್ಯಾಯಮೂರ್ತಿ ಸಂತೋಷ್‌ ಗಜಾನನ್‌ ಭಟ್‌ ಅವರು ಷರತ್ತುಬದ್ಧ ಜಾಮೀನುಅನ್ನು ಮಂಜೂರು ಮಾಡಿದರು. ಅದರೊಂದಿಗೆ ಮಾಜಿ ಸಚಿವ ಎಚ್‌ಡಿ ರೇವಣ್ಣಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ. ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಕೇಸಲ್ಲಿ ಜಾಮೀನು ಸಿಕ್ಕಿದೆ. 5 ಲಕ್ಷದ ಬಾಂಡ್‌ನೊಂದಿಗೆ ಇಬ್ಬರ ಶ್ಯೂರಿಟಿಯೊಂದಿಗೆ ಜಾಮೀನು ನೀಡಲಾಗಿದೆ. ಜಾಮೀನು ಸಿಕ್ಕಿದ್ದರೂ, ಎಚ್‌ಡಿ ರೇವಣ್ಣ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಅನುಮಾನ ಎನ್ನಲಾಗಿದೆ. ನಾಳೆ ಬೆಳಗ್ಗೆ ರೇವಣ್ಣ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ. ಕೆಲವು ಮೂಲಗಳ ಪ್ರಕಾರ ಸಂಜೆ 7 ಗಂಟೆಯ ವೇಳೆಗೆ ಬೇಲ್ ಪ್ರತಿ ಸಿಕ್ಕಲ್ಲಿ ರಾತ್ರಿಯೇ ಅವರು ಬಿಡುಗಡೆಯಾಗಬಹುದು ಎನ್ನಲಾಗಿದೆ.

ವಿಚಾರಣೆಯ ವೇಳೆ, ಈ ವೇಳೆ ಎಚ್‌ಡಿ ರೇವಣ್ಣ ಪ್ರಭಾವಿ ವ್ಯಕ್ತಿಯಾಗಿದ್ದು, ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಆಗ್ರಹಿಸಿ ಎಸ್‌ಐಟಿ ವಾದ ಮಂಡನೆ ಮಾಡಿತ್ತು. ಇದೇ ವೇಳೆ ಪ್ರಕರಣದ ತನಿಖಾ ವರದಿಯನ್ನ ಎಚ್‌ಐಟಿ ಕೋರ್ಟ್‌ಗೆ ಸಲ್ಲಿಕೆ ಮಾಡಿತ್ತು. ತನಿಖಾ ವರದಿಯ ಕಡತಗಳೊಂದಿಗೆ ಎಸ್‌ಐಟಿ ಪರ ಎಸ್‌ಎಸ್‌ಪಿ ಜಯ್ಮಾ ಕೊಠಾರಿ ವಾದ ಮಂಡನೆ ಮಾಡಿದ್ದರು. 'ಈ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾಗಿದೆ. ಪ್ರಕರಣ ತುಂಬಾ ಗಂಭೀರವಾಗಿದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡಲು ಅವಕಾಶ ಇಲ್ಲ ಎಂದ ಜಯ್ನಾ ಕೊಠಾರಿ ಸುಪ್ರೀಂ ಕೋರ್ಟ್ ಆದೇಶವನ್ನೂ ಉಲ್ಲೇಖ ಮಾಡಿದ್ದರು. ರೇವಣ್ಣ ಕಿಡ್ನಾಪ್ ಗೆ ಪ್ಲಾನ್ ಮಾಡಿದ್ದರು ಎಂದು ಇತರೆ ಆರೋಪಿಗಳು ಹೇಳಿದ್ದಾರೆ ಎಂದು ತಿಳಿಸಿದ್ದರು.

ಸಂಸದ ಪ್ರಜ್ವಲ್‌ರಂಥವರ ಬಗ್ಗೆ ಸಹಿಷ್ಣುತೆ ಇರಬಾರದು, ಕಠಿಣ ಕ್ರಮ ಕೈಗೊಳ್ಳಬೇಕು : ಮೋದಿ

ತನಿಖಾ ವರದಿ ಕೋರ್ಟ್‌ಗೆ ಸಲ್ಲಿಕೆ: ರೇವಣ್ಣ ಪ್ರಕರಣದ ತನಿಖಾ ವರದಿಯನ್ನು ಜಯ್ನಾ ಕೊಠಾರಿ ಕೋರ್ಟ್‌ಗೆ ಸಲ್ಲಿಕೆ ಮಾಡಿದರು. ತಮಗೂ ತನಿಖಾ ವರದಿ ಪ್ರತಿ ನೀಡುವಂತೆ ರೇವಣ್ಣ ಪರ ವಕೀಲ ಮನವಿ ಮಾಡಿದ ಬಳಿಕ, ಕೋರ್ಟ್‌ನಲ್ಲಿ ನಲ್ಲಿಯೇ ರೇವಣ್ಣ ಪರ ವಕೀಲರಿಗೂ ತನಿಖಾ ವರದಿ ಪ್ರತಿ ನೀಡಲಾಗಿತು. ಸೆ.364a ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ 2 ಆದೇಶ ಪ್ರತಿ ಸಲ್ಲಿಸಿದ ಎಸ್ಪಿಪಿ. 364a ಸೆಕ್ಷನ್ ಇದ್ದಾಗ ಅದರ ದಂಡನೆ ತೀರ್ವತೆ ಪರಿಗಣಿಸಬೇಕು. 364A ಇದ್ದಾಗ ಅದರ ಗಂಭೀರತೆರ ಅಂಶ ಅದಕ್ಕೆ ನೀಡುವ ಶಿಕ್ಷೆಯ ಪ್ರಮಾಣವಾಗತ್ತೆ. ಇಲ್ಲಿ ಅಪರಾಧದ ತೀವ್ರತೆ ಪರಿಗಣಿಸಿ ನಿರಾಕರಿಸಬೇಕು. ಗುರುಚರಣ್ ಸಿಂಗ್ ಪ್ರಕರಣದ ಉಲ್ಲೇಖವನ್ನೂ ಮಾಡಿದ್ದರು. ಶಿಕ್ಷೆಯ ಪ್ರಮಾಣ, ಜೀವಾವಧಿಯಷ್ಟು ಶಿಕ್ಷೆ ಇದ್ದಾಗ ಜಾಮೀನು ನಿರಾಕರಿಸಲು ಪರಿಗಣಿಸಬಹುದು. ಅಪರಾಧದ ತೀವ್ರತೆ ಇದ್ದಾಗ ಜಾಮೀನು ನಿರಾಕರಿಸಬಹುದು. ಇದನ್ನ ಪರಿಗಣಿಸಿರುವ ಕೋರ್ಟ್ ಆದೇಶಗಳನ್ನು ಉಲ್ಲೇಖ ಮಾಡಿದರು. ಹೈಕೋರ್ಟ್ & ಸುಪ್ರೀಂ ಕೋರ್ಟ್ ಆದೇಶಗಳ ಉಲ್ಲೇಖವನ್ನು ಜಯ್ನಾ ಕೊಠಾರಿ ಮಾಡಿದರು.

ಅಶ್ಲೀಲ ವಿಡಿಯೋ ವೈರಲ್.."ಅಖಿಲ ಕರ್ನಾಟಕಕ್ಕೆ ಹಂಚಿಕೆದಾರ" ಯಾರು..? ಪೆನ್‌ಡ್ರೈವ್ ಪುರಾಣಕ್ಕೆ ಹೊಸ ಟ್ವಿಸ್ಟ್..!

ಹಾಸನದಲ್ಲಿ ಸಂಭ್ರಮಾಚರಣೆ: ಎಚ್‌ಡಿ ರೇವಣ್ಣಗೆ ಬೇಲ್‌ ಸಿಕ್ಕ ಸುದ್ದಿ ಸಿಗುತ್ತಿದ್ದಂತೆ ಹಾಸನ ಹಾಗೂ ಬೆಂಗಳೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ರೇವಣ್ಣ ಅವರಿಗೆ ಬೇಲ್‌ ಸಿಕ್ಕೇ ಸಿಗುವ ವಿಶ್ವಾಸದಲ್ಲಿದ್ದ ಹೊಳೆನರಸೀಪುರದ ಜೆಡಿಎಸ್‌ ಕಾರ್ಯಕರ್ತರು ಬೆಳಗ್ಗೆಯಿಂದಲೇ ಪರಪ್ಪನ ಅಗ್ರಹಾರ ಜೈಲಿನ ಎದುರು ಜಮಾಯಿಸಿದ್ದರು. ಬೇಲ್‌ ಸುದ್ದಿ ಸಿಗುತ್ತಿದ್ದಂತೆ ರೇವಣ್ಣ ಹಾಗೂ ದೇವೇಗೌಡರ ಪರ ಘೋಷಣೆ ಹಾಕಿ ಹರ್ಷೋದ್ಗಾರ ಮಾಡಿದ್ದಾರೆ.