ಪ್ರಧಾನಿ ನನ್ನ 6 ಸಲಹೆ ಸ್ವೀಕರಿಸಿದ್ದಾರೆ : ಮೋದಿ ಬಗ್ಗೆ ಎಚ್‌ಡಿಡಿ ಅಸಮಾಧಾನ

  • ಕೋವಿಡ್ ಮಹಾಮಾರಿ ಪ್ರಪಂಚವನ್ನು ಕಾಡುತ್ತಿದೆ.  ಕೆಲವು ರಾಜ್ಯಗಳಲ್ಲಿ ನಿರೀಕ್ಷೆ ಮೀರಿ ಪ್ರಕರಣ ಹೆಚ್ಚಾಗಿದೆ
  • ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆತಂಕ
  • ಸರ್ಕಾರಗಳು ಮಾಡಿದ ಮುನ್ನಚ್ಚರಿಕೆಗಳು ಸಾಲದಾಗಿದ್ದರಿಂದ ಉಲ್ಬಣ
JDS Leader HD Devegwoda  Unhappy over Govt covid Control Measures snr

ಬೆಂಗಳೂರು (ಮೇ.21): ಕೋವಿಡ್ ಮಹಾಮಾರಿ ಪ್ರಪಂಚವನ್ನು ಕಾಡುತ್ತಿದೆ.  ಕೆಲವು ರಾಜ್ಯಗಳಲ್ಲಿ ನಿರೀಕ್ಷೆ ಮೀರಿ ಪ್ರಕರಣ ಹೆಚ್ಚಾಗಿದೆ ಎಂದು ಮಾಜಿ ಸಿಎಂ ಎಚ್.ಡಿ .ದೇವೇಗೌಡ  ಅತಂಕ ವ್ಯಕ್ತಪಡಿಸಿದರು.

ಬೆಂಗಳೂರಿನ ಜೆಡಿಎಸ್ ಕಚೇರಿಗೆ ಇಂದು ಭೇಟಿ ನೀಡಿ ಮಾತನಾಡಿದ ಮಾಜಿ ಪಿಎಂ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಕೆಲವು ಜಿಲ್ಲೆಗಳ ಮುಖಂಡರ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಮಾತನಾಡುತ್ತಿದ್ದಾರೆ. ಪರಿಸ್ಥಿತಿ ನಿರ್ವಹಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದರು. 

ನಾನು ಕೆಲ ದಿನಗಳಿಂದ ಕಚೇರಿ ಕಡೆ ಬಂದಿರಲಿಲ್ಲ. ಕಚೇರಿಗೆ ಹೋಗುವುದು ಬೇಡ ಎಂದು ಮನೆಯಲ್ಲಿ ಒತ್ತಾಯ ಮಾಡಿದ್ದರು. ಆದರೆ ನನಗೆ ಮನೆಯಲ್ಲಿ ಕುಳಿತಿರಲು ಇಷ್ಟವಿಲ್ಲ.  ಬಿಬಿಎಂಪಿ ,ಅಸೆಂಬ್ಲಿ ಚುನಾವಣೆಗಳು ಹತ್ತಿರ ಬರುತ್ತಿವೆ.  ಬೆಂಗಳೂರು ಮುಖಂಡರ ಜೊತೆ ಮಾತನಾಡಲು ಇಂದು ಬಂದಿದ್ದೇನೆ. ಅಸೆಂಬ್ಲಿ ಚುನಾವಣೆ ವೇಳೆಗೆ ರಾಜ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಂಡು ಪ್ರತ್ಯೇಕ ವಾಗಿ ಪ್ರಚಾರಕ್ಕೆ ಹೋಗುವ ಚಿಂತನೆ ಇದೆ ಎಂದರು.

ಇನ್ನು ಸರ್ಕಾರದ ನಡೆಗಳನ್ನು ಗಮನಿಸುತ್ತಿದ್ದೇವೆ.  ಕುಮಾರಸ್ವಾಮಿ ಆಗಾಗ್ಗೆ ಟ್ವೀಟ್ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುತ್ತಾ ಇರುತ್ತಾರೆ ಎಂದು ಎಚ್‌ಡಿಡಿ ಹೇಳಿದರು. 
 
ಪ್ರಧಾನಿಗೆ ಪತ್ರ :  ನಾನು ಹನ್ನೆರಡು ಸಲಹೆಗಳನ್ನು ನೀಡಿ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದೇನೆ. ಅದರಲ್ಲಿ ಆರು ಸಲಹೆಗಳನ್ನು ಸ್ವೀಕರಿಸಿದ್ದಾರೆ. ಮೊದಲ ಹಂತಕ್ಕಿಂತಲೂ ಎರಡನೇ ಅಲೆಯಲ್ಲಿ ಈ ಕಾಯಿಲೆ ಉಲ್ಬಣ ಆಯಿತು.  ಕೋವಿಡ್, ಜೊತೆಗೆ ಬ್ಲಾಕ್ ಫಂಗಸ್, ವೈಟ್ ಫಂಗಸ್ ಕೂಡಾ ಜಾಸ್ತಿ ಆಗುತ್ತಿದೆ.  ವೈದ್ಯರು ಹಗಲಿರುಳು ಶ್ರಮ ವಹಿಸುತ್ತಿದ್ದಾರೆ.  ಇಡೀ ದೇಶ ದೊಡ್ಡ ಪ್ರಮಾಣದಲ್ಲಿ  ಇದರಿಂದ ನಷ್ಟ ಅನುಭವಿಸುತ್ತಿದೆ ಎಂದು ದೇವೇಗೌಡರು ಹೇಳಿದರು.

ಕೋವಿಡ್‌ ಲಸಿಕೆ ಖರೀದಿಯ ರಾಜ್ಯಗಳ ಆಶಯಕ್ಕೆ ಹಿನ್ನಡೆ! ..

ಒಂದು ತಿಂಗಳ ಮುಂಚೆಯೇ ಲಾಕ್ ಡೌನ್ ಮಾಡಬೇಕು ಅಂತಾ ಕುಮಾರಸ್ವಾಮಿ ಹೇಳಿದ್ದರು. ಆದರೆ ಇವರು ಮಿತಿಮೀರಿದ ಮೇಲೆ ಲಾಕ್ ಡೌನ್ ಮಾಡಿದ್ದಾರೆ. ಹಳ್ಳಿಗಳಲ್ಲಿ ಕೂಡಾ ಸೋಂಕು ಹರಡುವುದನ್ನು ತಡೆಯಲು ಮೊದಲೇ ಮುಂದಾಗಲಿಲ್ಲ. ಇನ್ನು ಪರಿಸ್ಥಿತಿ ನಿಯಂತ್ರಣ ಸಾಕಷ್ಟು ಕಷ್ಟ ಇದೆ ಎಂದರು.

ಕೊರೋನಾ ವಿಚಾರದಲ್ಲಿ ರಾಜಕೀಯ ಇಲ್ಲ, ಒಗ್ಗಟ್ಟಾಗಿ ಹೋರಾಟ; ದೇವೇಗೌಡ! .
 
ಪ್ರಧಾನಿ ಕಣ್ಣೀರು ಹಾಕಿದ ವಿಚಾರ :
 ದೇಶದ ಪರಿಸ್ಥಿತಿ ನಿಭಾಯಿಸಲಾರದೇ ಪ್ರಧಾನಿ ಕಣ್ಣೀರು ಹಾಕುತ್ತಾರೆ ಎಂದರೆ ಏನರ್ಥ. ಐದು ರಾಜ್ಯಗಳ ಚುನಾವಣೆ ವೇಳೆ ರ‍್ಯಾಲಿ ಮಾಡಿದ್ದು ಇವರೇ. ಆ ಸಮಯವನ್ನು ಕೋವಿಡ್ ನಿರ್ವಹಣೆಗೆ ಕೊಡಬೇಕಿತ್ತು.  ಆಗ ಪರಿಸ್ಥಿತಿ ಕೈ ಮೀರುತ್ತಿರಲಿಲ್ಲ. ಮೊದಲೇ ಪ್ರಧಾನಿಗಳು ಎಚ್ಚೆತ್ತುಕೊಳ್ಳಬೇಕಿತ್ತು ಎಂದು ದೇವೇಗೌಡರು ಹೇಳಿದರು.

 ಲಸಿಕೆ ವಿಚಾರ :  ಲಸಿಕೆ, ರೆಮ್ಡೆಸಿವಿರ್ ಔಷಧ ಪೂರೈಕೆಯಲ್ಲಿ ಕೇಂದ್ರ ಮಲತಾಯಿ ಧೋರಣೆ ತೋರಿಸುತ್ತಿದೆ.  ಚಿಕ್ಕ ರಾಜ್ಯಗಳಿಗೆ ಅನುದಾನ ಹೆಚ್ಚು ಕೊಟ್ಟಿದ್ದಾರೆ.  ನಮ್ಮ ರಾಜ್ಯಕ್ಕೆ ಕಡಿಮೆ‌ ಕೊಟ್ಟಿದ್ದಾರೆ.  ಈ ತಾರತಮ್ಯ ಸರಿಪಡಿಸಬೇಕು.  ನಾನು ಈ ಬಗ್ಗೆ ಪತ್ರ ಬರೆದಿದ್ದೇನೆ ಈ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಕೂಡ ಪತ್ರ ಬರೆದಿದ್ದಾರೆ ಎಂದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios