ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್: ಯಾವ ಲಸಿಕೆ ಉತ್ತಮ?
* ದೇಶದಲ್ಲಿ ಕೊರೋನಾ ಎರಡನೇ ಅಲೆ ಮಧ್ಯೆಯೂ ಲಸಿಕೆ ಅಭಿಯಾನ
* ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್: ಯಾವ ಲಸಿಕೆ ಉತ್ತಮ?
* ಹೀಗಿದೆ ನೋಡಿ ಮೂರೂ ಲಸಿಕೆಗಳ ನಡುವಿನ ವ್ಯತ್ಯಾಸ
ನವದೆಹಲಿ(ಮೇ.24): ದೇಶದಲ್ಲಿ ಕೊರೋನಾ ಎರಡನೇ ಅಲೆ ಮಧ್ಯೆಯೂ ಲಸಿಕೆ ಅಭಿಯಾನ ಮುಂದುವರೆದಿದೆ. ಆರಂಭದಲ್ಲಿ ಲಸಿಕೆ ಪಡೆಯಲು ಕೊಂಚ ಹಿಂದೇಟು ಹಾಕಿದವರೂ ಈಗ ಲಸಿಕೆ ಪಡೆಯಲು ದೌಡಾಯಿಸುತ್ತಿದ್ದಾರೆ. ಗಂಟೆಗಟ್ಟಲೇ ನೋಂದಾವಣೆ ಮಾಡಿಸಲು ಕಾದು, ಸ್ಲಾಟ್ ಪಡೆದು ಕ್ಯೂ ನಿಂತು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ. ಈ ನಡುವೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗೂ ಭಾರತ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಸದ್ಯದಲ್ಲೇ ಭಾರತೀಯರಿಗೆ ಇದು ಲಭ್ಯವಾಗಲಿದೆ. ಈ ಮೂಲಕ ಎರಡು ದೇಶೀ ಲಸಿಕೆಗಳು ಹಾಗೂ ರಷ್ಯಾದ ಲಸಿಕೆ ಜನರಿಗೆ ಲಭ್ಯವಾಗಲಿದೆ. ಆದರೀಗ ಸದ್ಯ ಈ ಮೂರೂ ಲಸಿಕೆಗಳಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಜನರಲ್ಲಿ ಉದ್ಭವಿಸಿದೆ. ಹೀಗಿರುವಾಗ ಈ ಮೂರು ಲಸಿಕೆಗಳ ನಡುವಿನ ವ್ಯತ್ಯಾಸದ ಬಗ್ಗೆ ಒಂದು ವಿವರ
ಕೋವಿಶೀಲ್ಡ್ ಲಸಿಕೆ ಪಡೆದವರಿಗೊಂದು ಗುಡ್‌ನ್ಯೂಸ್: ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಯಲು!
ಲಸಿಕೆಗಳ ಎರಡು ಡೋಸ್‌ಗಳ ನಡುವಿನ ಅಂತರ?
- ಕೋವಿಶೀಲ್ಡ್: 12- 16 ವಾರದ ಅಂತರ ಮೊದಲ ಹಾಗೂ ಎರಡನೇ ಲಸಿಕೆ ನಡುವೆ ಇರಬೇಕು
- ಕೋವ್ಯಾಕ್ಸಿನ್: ನಾಲ್ಕರಿಂದ ಆರು ವಾರಗಳ ಅಂತರವಿರಬೇಕು
- ಸ್ಪುಟ್ನಿಕ್ ವಿ: ರಷ್ಯಾದಲ್ಲಿ ಮೊದಲ ಡೋಸ್ ಪಡೆದ 21 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುದೆ. ಭಾರತದಲ್ಲಿ ಹೇಗೆ ಎಂಬುವುದು ಸರ್ಕಾರ ನಿರ್ಧರಿಸಬೇಕಿದೆ.
ಉತ್ಪಾದಕರು
- ಕೋವಿಶೀಲ್ಡ್: ಆಕ್ಸ್‌ಫರ್ಡ್- ಆಸ್ಟ್ರಾಜೆನಿಕಾ ಇದನ್ನು ಅಭಿವೃದ್ಧಿ ಪಡಿಸಿದ್ದು, ಸದ್ಯ ಭಾರತದ ಸೀರಂ ಸಂಸ್ಥೆ ಇದನ್ನು ಉತ್ಪಾದಿಸುತ್ತಿದೆ.
- ಕೋವ್ಯಾಕ್ಸಿನ್: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಇದನ್ನು ಅಭಿವೃದ್ಧಿಪಡಿಸಿದೆ.
- ಸ್ಪುಟ್ನಿಕ್ ವಿ: ಮಾಸ್ಕೋದ ಗಮಾಲೆಯಾ ಸಾಂಕ್ರಾಮಿಕ ರೋಗ ಹಾಗೂ ಸೂಕ್ಷ್ಮ ಜೀವಶಾಸ್ತ್ರ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ.
ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!
ಪ್ರತೀ ಡೋಸ್‌ನ ಬೆಲೆ?
- ಕೋವಿಶೀಲ್ಡ್: ಖಾಸಗಿ ಆಸ್ಪತ್ರೆಯಲ್ಲಿ ಈ ಲಸಿಕೆಯ ಒಂದು ಡೋಸ್ ಬೆಲೆ 600 ರೂ.
- ಕೋವ್ಯಾಕ್ಸಿನ್: ಖಾಸಗಿ ಆಸ್ಪತ್ರೆಯಲ್ಲಿ ಈ ಲಸಿಕೆಯ ಒಂದು ಡೋಸ್ ಬೆಲೆ 1200 ರೂ.
- ಸ್ಪುಟ್ನಿಕ್ ವಿ: ಇದನ್ನು ಸದ್ಯ ಪ್ರತೀ ಡೋಸ್‌ಗೂ 948 ರೂ. ನಂತೆ ಆಮದು ಮಾಡಿಕೊಳ್ಳಲಾಗುತ್ತಿದೆ. ಶೇ. 5 ರಷ್ಟು ಜಿಎಸ್‌ಟಿ ಸೇರಿ ಒಟ್ಟು 995.40 ರೂ ಆಗುತ್ತದೆ. ಇದರ ನಿರ್ವಹಣೆ ವೆಚ್ಚವೆಲ್ಲಾ ಸೇರಿ 1250 ರೂ. ಆಗುತ್ತದೆ.
ದಕ್ಷತೆ ಪ್ರಮಾಣ(ಪರಿಣಾಮಕಾರಿ)
- ಕೋವಿಶೀಲ್ಡ್: ಈ ಲಸಿಕೆ ಶೇ. 70.4ರಷ್ಟು(ಎರಡನೇ ಡೋಸ್ ಬಳಿಕ) ಪರಿಣಾಮಕಾರಿಯಾಗಿದೆ.
- ಕೋವ್ಯಾಕ್ಸಿನ್: ಶೇ. 78 ರಿಂದ 81ರಷ್ಟು ಪರಿಣಾಮಕಾರಿ(ಎರಡನೇ ಡೋಸ್ ಬಳಿ)
- ಸ್ಪುಟ್ನಿಕ್ ವಿ: ಈ ಲಸಿಕೆ ಶೇ. 91.6 ರಷ್ಟು ಪರಿಣಾಮಕಾರಿಯಾಗಿದೆ.
ಲಸಿಕೆ ಬಳಿಕದ ಸಾಮಾನ್ಯ ಲಕ್ಷಣಗಳು
- ಕೋವಿಶೀಲ್ಡ್: ಲಸಿಕೆ ನೀಡಿದ ಭಾಗದಲ್ಲಿ ನೋವು, ಊತ, ಚರ್ಮ ಕೆಂಪಗಾಗುವುದು, ತುರಿಕೆ ಕಾಣಿಸಿಕೊಳ್ಳಬಹುದು. ಜ್ವರ ಬಂದಂತಾಗುವುದು, ತಲೆನೋವು ಹಾಗೂ ಆಯಾಸ. ಶೀತ, ಜ್ವರ, ಗಂಟಲು ನೋವು ಈ ಲಕ್ಷಣಗಳು ಸಾಮಾನ್ಯ
- ಕೋವ್ಯಾಕ್ಸಿನ್: ಲಸಿಕೆ ನೀಡಿದ ಭಾಗದಲ್ಲಿ ನೋವು, ಊತ, ಚರ್ಮ ಕೆಂಪಗಾಗುವುದು, ತುರಿಕೆ ಕಾಣಿಸಿಕೊಳ್ಳಬಹುದು. ಜ್ವರ ಬಂದಂತಾಗುವುದು, ಸುಸ್ತು. ವಾಂತಿ ಬಂದಂತಾಗುವುದು.
- ಸ್ಪುಟ್ನಿಕ್ ವಿ: ಲಸಿಕೆ ನೀಡಿದ ಭಾಗದಲ್ಲಿ ನೋವು, ಊತ, ಚರ್ಮ ಕೆಂಪಗಾಗುವುದು. ಜ್ವರದ ಲಕ್ಷಣಗಳಾದ ಶೀತ, ಜ್ವರ, ಗಂಟಲು ನೋವು. ಆಯಾಸ ಹಾಗೂ ತಲೆನೋವು.
ಯಾವುದು ಉತ್ತಮ?
ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ಈ ಮೂರೂ ಲಸಿಕೆಗಳು ಕೊರೋನಾ ವೈರಸ್‌ನಿಂದ ನಿಮ್ಮನ್ನು ರಕ್ಷಿಸಲು ಸಮಾನವಾಗಿವೆ. ಹೀಗಾಗಿ ನಿಮಗೆ ಸಿಗುವ ಲಸಿಕೆಯೇ ಬೆಸ್ಟ್ ಆಗಿರುತ್ತದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona