Asianet Suvarna News Asianet Suvarna News

ಪುತ್ರನ ಕಾಟ ತಾಳದೆ ಬಿಜೆಪಿ ಜತೆ ದೇವೇಗೌಡ ಮೈತ್ರಿ: ಚಲುವರಾಯಸ್ವಾಮಿ ಲೇವಡಿ

ಪುತ್ರ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಾಟ ತಾಳಲಾರದೇ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬಿಜೆಪಿ ಜತೆ ಮೈತ್ರಿಗೆ ಒಪ್ಪಿಕೊಂಡಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಟೀಕಿಸಿದ್ದಾರೆ. 

JDS BJP Alliance issue minister chaluvarayaswamy reaction at kalaburagi rav
Author
First Published Oct 4, 2023, 7:33 AM IST

ಕಲಬುರಗಿ (ಅ.4) : ಪುತ್ರ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಾಟ ತಾಳಲಾರದೇ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬಿಜೆಪಿ ಜತೆ ಮೈತ್ರಿಗೆ ಒಪ್ಪಿಕೊಂಡಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಟೀಕಿಸಿದ್ದಾರೆ. 

ದೇವೇಗೌಡರನ್ನೇ(HD Devegowda) ಬಲವಂತ ಮಾಡಿ ಮೈತ್ರಿ ಗೆ ಒಪ್ಪಿಸಿದ್ದಾರೆ, ಮಗನ ಹಿಂಸೆಯಿಂದ ಮೈತ್ರಿಗೆ ದೇವೇಗೌಡರು ಒಪ್ಪಿಕೊಂಡಿದ್ದಾರೆ. ಬಿಜೆಪಿಗೆ ಜೆಡಿಎಸ್, ಜೆಡಿಎಸ್‌ಗೆ ಬಿಜೆಪಿ ಅವಶ್ಯಕತೆ ಇದೆ, ಇಬ್ಬರು ಮುಳುಗಿ ಹೋಗೋ ಭಯದಲ್ಲಿದ್ದಾರೆ. ಹೀಗಾಗಿ ಒಬ್ಬರ ಕೈ ಒಬ್ಬರು ಹಿಡಿಯುತ್ತಿದ್ದಾರೆಂದು ಲೇವಡಿ ಮಾಡಿದರು.

ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್‌ ನಾಯಕರ ಒಪ್ಪಿಗೆ

ಕುಮಾರಸ್ವಾಮಿ ನಡವಳಿಕೆಯಿಂದ ಅವರಿಗೆ ಈ ಸ್ಥಿತಿ ಬಂದಿದೆ. ಬೆಂಬಲ ಕೊಟ್ಟವರನ್ನು, ಸಹಾಯ ಮಾಡಿದವರ ಬಗ್ಗೆ ಕುಮಾರಸ್ವಾಮಿ ಲಘುವಾಗಿ ಮಾತನಾಡಬಾರದು. ಸರ್ಕಾರ ಬೀಳುತ್ತದೆ ಅನ್ನೋ ಬಿಜೆಪಿ, ಜೆಡಿಎಸ್ ನಾಯಕರು ಜೆ.ಎಚ್. ಪಟೇಲ್ ಅವರ ಗಾದೆ ಮಾತು ಅವರು ನೆನಪಿಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಜನವರಿಗೆ ಸರ್ಕಾರ ಉರಳುತ್ತೆ ಅನ್ನೋ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಹೇಳಿಕೆ ವಿಚಾರವಾಗಿ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತನ್ನ ಹಣೆಬರಹವನ್ನು ಅವರಿಗೆ ಬರೆದುಕೊಳ್ಳಲು ಆಗಿಲ್ಲ, ಇನ್ನು ಆತ ಬೇರೆಯವರ ಹಣೆಬರಹ ಬರೆಯುತ್ತಾನಾ ಎಂದು ಮಾತಲ್ಲೇ ಟಾಂಗ್‌ ನೀಡಿದರು.

ಸ್ವತಃ ಪ್ರಧಾನಿ ಮೋದಿ(PM Narendra modi) ಬಂದು ಪ್ರಚಾರ ಮಾಡಿದರೂ ಸೋತಿದ್ದಾನೆ. ಯೋಗೇಶ್ವರ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಕಾಂಗ್ರೆಸ್ ಹಣೆಬರಹ ಬರೆಯಲು ಸಾಧ್ಯವಿಲ್ಲ ಎಂದರು.

ನೀವು ಹೆದರಿಸಿದರೆ ಡಿಕೆಶಿ ಹೆದರಲ್ಲ: ದೊಡ್ಡಗೌಡ್ರಿಗೆ ಸೆಡ್ಡು ಹೊಡೆದ ಡಿಸಿಎಂ ಡಿ.ಕೆ. ಶಿವಕುಮಾರ್!

ಅವರು ಕಾಯ್ತಾ ಇರಲಿ, ಎಲ್ಲಾ ಸಮುದಾಯಗಳನ್ನು ಗುರುತಿಸಿವ ಪಕ್ಷ ಕಾಂಗ್ರೆಸ್, ಜಾತಿ ಆಧಾರದ ಮೇಲೆ ಆಡಳಿತ ನಡೆಸಲು ಆಗೋದಿಲ್ಲ. ಕಾರ್ಯರ್ಕತ್ರನ್ನು ಉಳಿಸಿಕೊಳ್ಳಲು ಕೆಲವು ಇಂತಹ ಹೇಳಿಕೆ ನೀಡುತ್ತಿದ್ದಾರಷ್ಟೆ. ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ನಡುಕ ಅಂತ ಹೇಳಿಕೆ ನೀಡುತ್ತಿದ್ದಾರೆ, ಅದೆಲ್ಲ ಕಪೋಲ ಕಲ್ಪಿತ ಅಷ್ಟೆ ಎಂದರು.

Follow Us:
Download App:
  • android
  • ios