ನೀವು ಹೆದರಿಸಿದರೆ ಡಿಕೆಶಿ ಹೆದರಲ್ಲ: ದೊಡ್ಡಗೌಡ್ರಿಗೆ ಸೆಡ್ಡು ಹೊಡೆದ ಡಿಸಿಎಂ ಡಿ.ಕೆ. ಶಿವಕುಮಾರ್!
ಮಾಜಿ ಪ್ರಧಾನಿ ದೇವೇಗೌಡರು ಮಿಸ್ಟರ್ ಡಿಕೆಶಿ ಈ ಆಟ ನಡೆಯಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಆದರೆ, ನೀವು ಹೆದರಿಸಿದರೆ ಡಿಕೆಶಿ ಹೆದರಲ್ಲ ಎನ್ನೋದು ನಿಮಗೂ ಗೊತ್ತಿದೆ.
ಬೆಂಗಳೂರು (ಅ.02): ಮಾಜಿ ಪ್ರಧಾನಿ ದೇವೇಗೌಡ ಕೂಡ ನನಗೆ ವಾರ್ನಿಂಗ್ ಕೊಟ್ಡಿದ್ದಾರೆ. ಮಿಸ್ಟರ್ ಡಿಕೆಶಿ ಈ ಆಟ ನಡೆಯಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಅವರ ಮಾತುಗಳು ನನಗೆ ಆಶೀರ್ವಾದ. ನೀವು ಹೆದರಿಸಿದರೆ ಡಿಕೆಶಿ ಹೆದರಲ್ಲ ಎನ್ನೋದು ನಿಮಗೂ ಗೊತ್ತಿದೆ. ನೀವು ಯಾರನ್ನು ಬೇಕಾದರೂ ಕಟ್ಟಿ ಹಾಕಿಕೊಳ್ಳಿ ಹಿಡಿದಿಟ್ಟಿಕೊಳ್ಳಿ ರೂಮ್ ಗಾದ್ರೂ ಹಾಕಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೆಡ್ಡು ಹೊಡೆದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮಿಸ್ಟರ್ ಡಿಕೆಶಿ ಈ ಆಟ ನಡೆಯಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಅವರ ಮಾತುಗಳು ನನಗೆ ಆಶೀರ್ವಾದ ಇದ್ದಹಾಗೆ. ಆದರೆ, ನಿಮ್ಮ ಪಾರ್ಟಿ ನಿಮ್ಮ ಸುಪುತ್ರರು ಜನತಾ ದಳ ವಿಸರ್ಜನೆ ಮಾಡ್ತೀನಿ ಎಂದಾಗ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು? ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ. ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದ ನೀವು ೀಗ ಏನು ಮಾಡಿದ್ದೀರಿ ಎಂದು ಕಿಡಿಕಾರಿದರು.
ಮಿಸ್ಟರ್ ಡಿಕೆಶಿ ನಿಮ್ಮ ಕೆಟ್ಟ ರಾಜಕೀಯ, ಆಟ ನಡೆಯಲ್ಲ: ದೇವೇಗೌಡ
ರಾಜಕಾರಣ ಹಾವು ಏಣಿ ಆಟ ಚೆಸ್ ಗೇಮ್ ಇದ್ದಹಾಗೆ. ಆದರೆ, ಜನರಿಗೆ ಏನು ಸಂದೇಶ ಕೊಟ್ಟಿದ್ರೋ ಅದನ್ನು ಮುಗ್ದ ಜನ ನಂಬಿಕೊಂಡಿದ್ದರು. ಹಿಂದೆ ಇಷ್ಟೆಲ್ಲಾ ಎಲೆಕ್ಷನ್‌ನಲ್ಲಿ ನೀವೇನು ಮಾಡಿದ್ರಿ. ಬಿಜೆಪಿಯವರು ಏನು ಮಾಡಿದ್ದರು ಗೊತ್ತಿದೆ. ನೀವು ಹೆದರಿಸಿದರೆ ಡಿಕೆಶಿ ಹೆದರಲ್ಲ ಎನ್ನೋದು ನಿಮಗೂ ಗೊತ್ತಿದೆ. ನೀವು ಯಾರನ್ನು ಬೇಕಾದರೂ ಕಟ್ಟಿ ಹಾಕಿಕೊಳ್ಳಿ ಹಿಡಿದಿಟ್ಟಿಕೊಳ್ಳಿ ರೂಮ್ ಗಾದ್ರೂ ಹಾಕಿಕೊಳ್ಳಿ. ಆದರೆ ಮನೆ ಮನೆಗೆ ಹೋಗಿ ಕಾರ್ಯಕರ್ತರನ್ನು ನಾನು ನಮ್ರತೆಯಿಂದ ಕರೆದುಕೊಂಡು ಬರ್ತೇನೆ. ನಾನು 88 ರಲ್ಲೂ ರಾಜಕಾರಣ ಮಾಡಿದ್ದೇನೆ, 89ರಲ್ಲೂ ರಾಜಕಾರಣ ಮಾಡಿದ್ದೇನೆ. ಸಾತನೂರಲ್ಲಿ ಏನು ಮಾಡಿದ್ದೇನೆ ಎನ್ನೋದು ಗೊತ್ತಿದೆ. ತೇಜಸ್ವಿನಿ ಏನು ಮಾತಾಡಿದ್ರು ಎನ್ನೋದು ಗೊತ್ತಿದೆ. ಈಗ ತಾವು ಎಷ್ಟೇ ವಾರ್ನಿಂಗ್ ಕೊಟ್ಟರೂ ಹೆದರಿಸಿದರೂ ಬೆದರಿಸಿದರೂ ತಮ್ಮ ಸುಪುತ್ರನ ಕ್ಷೇತ್ರದ ಮುಖಂಡರು ಕಾಂಗ್ರೆಸ್ ಕಡೆ ಬಂದಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಇದೆಲ್ಲ ಏನ್ ಹೊಸದಾಗಿ ಮಾಡ್ತಾರಾ? ಗೃಹ ಸಚಿವ ಪರಮೇಶ್ವರ ಉಡಾಫೆ ಉತ್ತರ!
ಪಕ್ಷ ವಿಸರ್ಜನೆ ಮಾಡ್ತೀನಿ ಎಂದರೆ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು: ತಾವು (ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ) ಒಂದೊಂದು ದಿನಕ್ಕೆ ಎಲ್ಲಿ ಬೇಕಾದರೂ ಸಂಬಂಧ ಬೆಳೆಸಿ ಕೊಳ್ಳಬಹುದು. ದಂಡ ನಾಯಕರಾಗಿ ಎಷ್ಟು ಸಲ ಪಕ್ಷ ವಿಸರ್ಜನೆ ಮಾಡ್ತೀವಿ ಅಂತೀರಾ? ಕುಮಾರಸ್ವಾಮಿ ಪದೇ ಪದೇ ಪಕ್ಷ ವಿಸರ್ಜನೆ ಮಾಡ್ತೀನಿ ಅಂದರೆ, ಸಿದ್ದಾಂತ ನಂಬಿಕೊಂಡ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು? ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿಎಂ ಇಬ್ರಾಹಿಂರನ್ನು ಕರೆದುಕೊಂಡು ಹೋದ್ರಿ. ಆಗ ನಾನೇ ಕೆಪಿಸಿಸಿ ಅಧ್ಯಕ್ಷನಾಗಿದ್ದೆನು. ಆಗ ನಾನೂ ನಿಮ್ಮ ತರಹವೇ ಮಿಸ್ಟರ್ ಅಂತ ಹೇಳಬಹುದಿತ್ತಲ್ಲ. ನನಗೂ ಮಿಸ್ಟರ್ ಅಂತ ಹೇಳಬಹುದಿತ್ತು ನಿಮ್ಮ ತರಹ. ಆದರೆ, ನಾನು ಇಂಗ್ಲೀಷ್ ನಲ್ಲಿ ಮಿಸ್ಟರ್ ಅಂತ ನಿಮಗೆ ಹೇಳಲ್ಲ. ನಾನು ಕರೆಯಬೇಕು ಅಂತಿಲ್ಲ, ಸಾಗರೋಪಾದಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ನೋಡ್ತಿರಿ ಎಂದರು.