Asianet Suvarna News Asianet Suvarna News

ಜನತಾ ದರ್ಶನ : ಚಿಂಚೋಳಿ ಸಾರ್ವಜನಿಕರಿಂದ ಕುಂದುಕೊರತೆ ಆಲಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಸಾರ್ವಜನಿಕರ ಕುಂದುಕೊರತೆ ಆಲಿಸುವ ಜನತಾ ದರ್ಶನ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿಂದು ನಡೆಯಿತು. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಜನತಾ ದರ್ಶನ ಉದ್ಘಾಟಿಸಿದರು. ಇದೇ ವೇಳೆ ಸಚಿವರು, ವಿವಿಧ ಇಲಾಖೆಗಳಿಂದ ಸರ್ಕಾರಿ ಯೋಜನೆಗಳ ಕುರಿತು ಅರಿವು ಮೂಡಿಸಲು ತೆರೆಯಲಾದ ಮಳಿಗೆಗಳನ್ನು ಸಹ ಉದ್ಘಾಟಿಸಿದರು.

Janata darshan Minister Priyank Kharge listened to the grievances of Chincholi public at kalaburagi rav
Author
First Published Sep 25, 2023, 10:27 PM IST

ಕಲಬುರಗಿ (ಸೆ.25): ಸಾರ್ವಜನಿಕರ ಕುಂದುಕೊರತೆ ಆಲಿಸುವ ಜನತಾ ದರ್ಶನ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿಂದು ನಡೆಯಿತು. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಜನತಾ ದರ್ಶನ ಉದ್ಘಾಟಿಸಿದರು. ಇದೇ ವೇಳೆ ಸಚಿವರು, ವಿವಿಧ ಇಲಾಖೆಗಳಿಂದ ಸರ್ಕಾರಿ ಯೋಜನೆಗಳ ಕುರಿತು ಅರಿವು ಮೂಡಿಸಲು ತೆರೆಯಲಾದ ಮಳಿಗೆಗಳನ್ನು ಸಹ ಉದ್ಘಾಟಿಸಿದರು.

ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಆಹಾರ, ಕೃಷಿ‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ರೇಷ್ಮೆ , ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ಚಿಂಚೋಳಿ ಪುರಸಭೆ, ಕಾರ್ಮಿಕ, ಪೊಲೀಸ್, ಕಂದಾಯ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹೀಗೆ ಪ್ರಮುಖ ಇಲಾಖೆಯ ಮಳಿಗೆ ಹಾಕಲಾಗಿತ್ತು. 

 

ರಾಜ್ಯದ ಹಿತಕ್ಕಾಗಿ ಅಲ್ಲ, ವೈಯಕ್ತಿಕ ಲಾಭಕ್ಕೆ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ: ಎನ್‌ಎಸ್ ಬೋಸರಾಜು ವ್ಯಂಗ್ಯ

ಪಡಿತರ ಚೀಟಿ ತಿದ್ದುಪಡಿ, ಆಧಾರ್, ಕೆವೈಸಿ ವೋಟರ್ ಐಡಿ ಸೇರಿ ಇನ್ನಿತರ ಯೋಜನೆಗಳ ತಾಂತ್ರಿಕ‌ ಸಮಸ್ಯೆ  ಬಗೆಹರಿಸಲು ಸಿಬ್ಬಂದಿ ಸ್ಥಳದಲ್ಲಿ ಇದ್ದು ಸಾರ್ವಜನಿಕರ‌ ಸಮಸ್ಯೆಗೆ ಸ್ಪಂದಿಸಿದರು. ಕುಂದುಕೊರತೆ ಅರ್ಜಿ ಸ್ವೀಕಾರಕ್ಕೆ 10-15 ಕೌಂಟರ್ ತೆರೆಯಲಾಗಿತ್ತು.  ಅರ್ಜಿ ಸ್ವೀಕಾರ ಕೌಂಟರ್ ಗಳಿಗೆ ಸಚಿವರು ತೆರಳಿ‌ ವೀಕ್ಷಿಸಿದರು. ಇದಕ್ಕೂ ಮುನ್ನ ಸಚಿವರು, ಕ್ರೀಡಾಂಗಣ ಅವರಣದಲ್ಲಿ ಸಸಿ‌ ನೆಟ್ಟು ನೀರುಣಿಸಿದರು.

ಈ ಸಂದರ್ಭದಲ್ಲಿ ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ಎಂಎಲ್ಸಿ ತಿಪ್ಪಣಪ್ಪ ಕಮಕನೂರ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ, ಡಿಸಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸಲು,‌ ಡಿಎಫ್‌ಓ ಸುಮಿತ್ ಕುಮಾರ್, ಕೆಕೆಆರ್‌ಟಿಸಿ ಎಂ.ಡಿ. ಎಂ.ರಾಚಪ್ಪ,  ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಅಯುಕ್ತ‌ ಆಶಪ್ಪ ಪೂಜಾರಿ, ಚಿಂಚೋಳಿ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ತಾಲೂಕ್ ಪಂಚಾಯತ್ ಇ.ಓ. ಶಂಕರ ರಾಠೋಡ ಸೇರಿದಂತೆ ಇತರೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Janata darshan Minister Priyank Kharge listened to the grievances of Chincholi public at kalaburagi rav

800ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ,250 ಸ್ಥಳದಲ್ಲಿಯೇ ವಿಲೇವಾರಿ

 ಚಿಂಚೋಳಿಯಲ್ಲಿಂದು ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಂದಾಜು 800ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು,  250ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು. 

ಉಳಿದಂತೆ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗುತ್ತದೆ. 2-3 ದಿನದಲ್ಲಿ ಆದ್ಯತೆ ಮೇರೆಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ, ಜೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

790 ಜನರಿಗೆ ಸರ್ಕಾರಿ ಸೌಲಭ್ಯ ವಿತರಣೆ:

ಸಾರ್ವಜನಿಕರ ಸಮಸ್ಯೆ ಆಲಿಕೆಗೆ ವೇದಿಕೆಯಾಗಿದ್ದ ಜನತಾ ದರ್ಶನ ಕಾರ್ಯಕ್ರಮ 790 ಜನ ಫಲಾನುಭವಿಗಳಿಗೆ ವಿವಿಧ ಸರ್ಕಾರಿ ಸೌಲಭ್ಯ ವಿತರಣೆಗೂ ಸಾಕ್ಷಿಯಾಯಿತು.

ತಾಲೂಕು ಪಂಚಾಯತಿಯ ಎನ್‌ ಆರ್ ಎಲ್ ಎಂ ಯೋಜನೆಯಡಿ ಚಿಂಚೋಳಿ ತಾಲೂಕಿನ ಚಿಮ್ಮಾಇದಲಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ 5 ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಸಾಲ ನೀಡಲು ಪ್ರತಿ ಸಂಘಕ್ಕೆ 1.50 ಲಕ್ಷ ರೂ. ಗಳಂತೆ ಒಟ್ಟು 7.50 ಲಕ್ಷ ಸುತ್ತು ನಿಧಿ ಚೆಕ್ ಸಚಿವರು ಸೇರಿದಂತೆ ಗಣ್ಯರು ವಿತರಣೆ ಮಾಡಿದರು. 

ಇದಲ್ಲದೆ ತಾಲೂಕ ಪಂಚಾಯತಿಯಿಂದ ಪಿ.ಎಂ.ಅವಾಸ್, ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿ 299 ಜನರಿಗೆ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ಪತ್ರ, 85 ಹೊಸ ಕೂಲಿ ಕಾರ್ಮಿಕರಿಗೆ ನರೇಗಾ ಜಾಬ್ ಕಾರ್ಡ್ ವಿತರಣೆ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 117 ಜನರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಇದೇ ಸಂದರ್ಭದಲ್ಲಿ ಕಾರ್ಯಾದೇಶ ನೀಡಲಾಯಿತು.

ಕಂದಾಯ ಇಲಾಖೆಯಿಂದ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ವಿಶೇಷಚೇತನ ವೇತನದಡಿ 123 ಜನರಿಗೆ ಮಂಜೂರಾತಿ ಪತ್ರ, ಕೃಷಿ ಇಲಾಖೆಯಿಂದ 45 ಜನ ರೈತರಿಗೆ ಜೋಳ, ಕಡಲೆ ಬೇಳೆ ವಿತರಣೆ, ಪಶುಸಂಗೋಪನೆ ಇಲಾಖೆಯಿಂದ ಆಶಾ ಕಾರ್ಯಕರ್ತೆಯರ ಮಾದರಿಯಲ್ಲಿ ಪಶುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ತರಬೇತಿ ಪಡೆದ ಚಿಂಚೋಳಿ ತಾಲೂಕಿನ 6 ಜನ ಮಹಿಳೆಯರಿಗೆ ಪಶು ಸಖಿ ಕಿಟ್ ವಿತರಣೆ ಸಹ ಮಾಡಲಾಯಿತು.

ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 10 ಜನ ಫಲಾನುಭವಿಗಳಿಗೆ ಈರುಳ್ಳಿ ಶೇಖರಣೆ ಘಟಕ ಸ್ಥಾಪನೆಗೆ ಘಟಕದ ಒಟ್ಟು ವೆಚ್ಚದ ಶೇ.50 ರಂತೆ ಪ್ರತಿಯೊಬ್ಬರಿಗೆ 87,500 ರೂ. ಸಹಾಯಧನದ ಕಾರ್ಯಾದೇಶ ವಿತರಣೆ, ಚಿಂಚೋಳಿ ಪುರಸಭೆಯಿಂದ 10 ಜನ ಪೌಕಾರ್ಮಿಕರಿಗೆ ಆರೋಗ್ಯ ವಿಮೆ ಮಂಜೂರಾತಿ ಪತ್ರ ಮತ್ತು ಸ್ಲಂ ಬೋಡ್‍ನಿಂದ 10 ಜನರಿಗೆ ಮನೆಗಳ ಹಕ್ಕು ಪತ್ರ ವಿತರಣೆ, ಕಾರ್ಮಿಕ ಇಲಾಖೆಯಿಂದ ಹೆರಿಗೆ ವೆಚ್ಚವಾಗಿ ಮೂವರು ಕಾರ್ಮಿಕ ಮಹಿಳೆಯರಿಗೆ ತಲಾ 50 ಸಾವಿರ ರೂ. ಹೆರಿಗೆ ಬಾಂಡ್ ವಿತರಣೆ, 5 ಜನರಿಗೆ ಇ-ಶ್ರಮ ಕಾರ್ಡ್ ವಿತರಣೆ, ಸಿ.ಡಿ.ಪಿ.ಓ ಕಚೇರಿಯಿಂದ 20 ಜನರಿಗೆ ಸುಕನ್ಯಾ ಸಮೃಧ್ಧಿ ಯೋಜನೆಯಡಿ ಪಾಸ್ ಬುಕ್ ವಿತರಣೆ, ಭೂಮಾಪನಾ ಇಲಾಖೆಯಿಂದ 52 ಜನರಿಗೆ ಉಚಿತ ಪಹಣಿ, ಸ್ಕೆಚ್ ಮ್ಯಾಪ್ ವಿತರಣೆ ಸಹ ಮಾಡಲಾಯಿತು.

Janata darshan Minister Priyank Kharge listened to the grievances of Chincholi public at kalaburagi rav

ಆರೋಗ್ಯ ಮೇಳದಲ್ಲಿ 895 ಜನರ ತಪಾಸಣೆ:

ಜನತಾ ದರ್ಶನ(Janata darshan) ಕಾರ್ಯಕ್ರಮ ಅಂಗವಾಗಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ ಉಚಿತ ತಪಾಸಣೆ ಶಿಬಿರದಲ್ಲಿ 485 ಜನ ಮಧುಮೇಹ, ಅಧಿಕ ರಕ್ತದೊತ್ತಡ ತಪಾಸಣೆ ಮಾಡಿಕೊಂಡರು. 165 ಜನ ಹೆಲ್ತ್ ಎ.ಟಿ.ಎಂ. ಮೂಲಕ ಪರೀಕ್ಷಿಸಿಕೊಂಡರೆ, 245 ಜನ ದಂತ ತಪಾಸಣೆಗೆ ಒಳಗಾದರು. ಒಟ್ಟಾರೆ 895 ಜನ ಶಿಬಿರದಲ್ಲಿ ಆರೋಗ್ಯ ತಪಾಸಣೆಯ ಲಾಭ ಪಡೆದರು. ಇದೇ ಸಂದರ್ಭದಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್ ಪಡೆಯಲು 245 ಜನ ಹೊಸದಾಗಿ ನೋಂದಣಿ ಮಾಡಿಕೊಂಡರು.

ಸರ್ಕಾರದ ಜನತಾ ದರ್ಶನಕ್ಕೆ ಸಾಥ್‌ ಕೊಟ್ಟ ಜನರು: ಕಂದಾಯ ಇಲಾಖೆ ಸಮಸ್ಯೆಗಳದ್ದೇ ಕಾರುಬಾರು

ಊಟದ ವ್ಯವಸ್ಥೆ:

ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ  ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಸುಮಾರು 15 ಕೌಂಟರ್ ಇದಕ್ಕಾಗಿ ತೆರೆಯಲಾಗಿತ್ತು. ಕಾರ್ಯಕ್ರಮಯುದ್ದಕ್ಕೂ ನೂಕುನುಗ್ಗಲು ತಡೆಯಲು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Follow Us:
Download App:
  • android
  • ios