Asianet Suvarna News Asianet Suvarna News

ಶಾಸಕ ಲಕ್ಷ್ಮಣ್ ಸವದಿ ಸಂವಿಧಾನ ಬದಲಾವಣೆ ಮಾತು! ಹೇಳಿದ್ದೇನು?

ಸಂವಿಧಾನಕ್ಕೆ ತಿದ್ದುಪಡಿ ಮಾಡುತ್ತೇವೆ ಎನ್ನುವವರು ಭ್ರಮೆಯಲ್ಲಿದ್ದಾರೆ. ಬಾಯಿ ಚಪಲಿಗೆ ಕೆಲವರು ಸಂವಿಧಾನಕ್ಕೆ ತಿದ್ದುಪಡಿ ತರುತ್ತೇವೆ ಎಂದು ಹೇಳುತ್ತಾರೆ. ಅದು ಅಸಾಧ್ಯದ ಕೆಲಸ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

Its impossible to change the constitution says Laxman savadi at athani rav
Author
First Published Jan 30, 2024, 4:39 AM IST

ಅಥಣಿ (ಜ.30): ಸಂವಿಧಾನಕ್ಕೆ ತಿದ್ದುಪಡಿ ಮಾಡುತ್ತೇವೆ ಎನ್ನುವವರು ಭ್ರಮೆಯಲ್ಲಿದ್ದಾರೆ. ಬಾಯಿ ಚಪಲಿಗೆ ಕೆಲವರು ಸಂವಿಧಾನಕ್ಕೆ ತಿದ್ದುಪಡಿ ತರುತ್ತೇವೆ ಎಂದು ಹೇಳುತ್ತಾರೆ. ಅದು ಅಸಾಧ್ಯದ ಕೆಲಸ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಆದರ್ಶ ನಗರದ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಈಚೆಗೆ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಭಾರತೀಯ ಸಂವಿಧಾನದ ಕುರಿತ ಲಿಖಿತ ರಸಪ್ರಶ್ನೆ ಪ್ರಬಂಧ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್‌ ಹೇಳುವಂತೆ ಶಿಕ್ಷಣ, ಸಂಘಟನೆ, ಹೋರಾಟ ಮೂರು ಅಂಶಗಳನ್ನು ಸಂಘಟನೆ ಪದಾಧಿಕಾರಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಗದೀಶ್ ಶೆಟ್ಟರ್ ಮರುಸೇರ್ಪಡೆಯಾದ ಬೆನ್ನಲ್ಲೇ ಲಕ್ಷ್ಮಣ್ ಸವದಿ ಬೆನ್ನುಬಿದ್ದ ಬಿಜೆಪಿ!

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಬೀದರ ಜಿಲ್ಲೆಯ ಹಾಲಹಳ್ಳಿ ಬುದ್ದ ವಿಹಾರದ ಭಂತೇಜಿ ಧಮ್ಮದೀಪ ಸ್ವಾಮೀಜಿ, ಪುರಸಭೆ ಸದಸ್ಯ ರಾವಸಾಬ ಐಹೊಳೆ, ಮಾಜಿ ಜಿ.ಪಂ.ಸದಸ್ಯ ವಿನಾಯಕ ಬಾಗಡಿ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ ತಳವಾರ, ಎಂ.ಎಂ. ಖಾಂಡೆಕರ, ನ್ಯಾಯವಾದಿ ಮಿತೇಶ ಪಟ್ಟಣ, ಎ.ಎಂ. ಖೊಬ್ರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಯಾದವಾಡ, ಸಂಜಯ ತಳವಳಕರ, ರವಿ ಕಾಂಬಳೆ, ಶ್ರೀಕಾಂತ ಅಲಗೂರ, ಡಿಎಸ್‌ಎಸ್ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಪ್ರಥಮ ದ್ವಿತೀಯ, ತೃತಿಯ ಸ್ಥಾನಗಳಿಗೆ ತಲಾ ₹25 ಸಾವಿರ, ₹15 ಸಾವಿರ, ₹12 ಸಾವಿರ ₹5 ನೂರು ರೂ.ದಂತೆ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು.

 

ಜಗದೀಶ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆಯಾಗಿದ್ದು ಸಂತೋಷವಾಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಫೋಟೊ ಶಿರ್ಷಿಕೆ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಲಿಖಿತ ಆಯೋಜಿಸಿದ್ದ ರಸಪ್ರಶ್ನೆ ಪ್ರಬಂಧ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಶಾಸಕ ಲಕ್ಷ್ಮಣ ಸವದಿ ನಿಗಮ ಮಂಡಳಿ ಅಧ್ಯಕ್ಷ ರಾಜು ಕಾಗೆ ಉದ್ಘಾಟಿಸಿ ಮಾತನಾಡಿದರು.

Follow Us:
Download App:
  • android
  • ios