ರೌಡಿಗಳಿಗೆ ಅಣ್ಣಾ ಅಂತೀರಿ ನಾಚಿಕೆಯಾಗಲ್ವಾ? ಸಚಿವ ಪ್ರಿಯಾಂಕ್‌ರಿಂದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ!
ಗ್ಯಾಂಬ್ಲಿಂಗ್, ಮಟಕಾ, ಸ್ಯಾಂಡ್ ಮೈನಿಂಗ್ ನಿಯಂತ್ರಣ ಮಾಡದಿದ್ರೆ ಕಷ್ಟಆಗುತ್ತೆ. ಮಹಾರಾಷ್ಟ್ರದವರು ಬಂದು ಕಲಬುರಗಿಯಲ್ಲಿ ರೇಡ್ ಮಾಡ್ತಾರೆ. ಬೆಳಗಾವಿ ಡಿವಿಜನ್ ನವರು ಬಂದು ಚಿಂಚೋಳಿಯಲ್ಲಿ ಮಟಕಾ ರೇಡ್ ಮಾಡ್ತಾರೆ, ಯಾಕೆ? ನಿಮಗೆ ಯೋಗ್ಯತೆ ಇಲ್ಲವಾ? ನೀವೇ ಇದರಲ್ಲಿ ಶಾಮಿಲು ಇರ್ತಿರಿ ಅಂತ ಅರ್ಥ ಎಂದು ಗುಡುಗಿದರು.
ಕಲಬುರಗಿ (ಜೂ.22) : ಪೊಲೀಸರಾದ ನೀವೇ ರೌಡಿಗಳನ್ನು ಸಾಕ್ತಿದ್ದೀರಿ, ಅವ್ರಿಗೆ ಮಾಹಿತಿ ಕೊಟ್ಟು ಸಪೋರ್ಚ್ ಮಾಡ್ತೀರಿ, ರೌಡಿಗಳ ಹುಟ್ಟುಹಬ್ಬದಲ್ಲಿ ಸಂಭ್ರಮಿಸ್ತೀರಿ, ರೌಡಿಗಳನ್ನ ಅಣ್ಣಾ ಅಂತೀರಿ, ತಪ್ಪು ಮಾಡದವರು ಪೊಲೀಸರನ್ನು ಕಂಡ್ರೆ ಗೌರವ ಕೊಡಬೇಕು. ತಪ್ಪು ಮಾಡಿದವರು ಪೊಲೀಸರನ್ನು ಕಂಡ್ರೆ ಹೆದರಿ ಸಾಯಬೇಕು. ಇಲ್ಲೀಗ ಉಲ್ಟಾಆಗಿದೆ, ನಿಮ್ಮ ಯೂನಿಫಾಮ್‌ರ್‍ಗಾದರೂ ಮರ್ಯಾದೆ ಬೇಡವೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ರೌಡಿಸಂ ಚಟುವಟಿಕೆ ನಿಯಂತ್ರಣದ ಸಭೆ ನಡೆಸಿ, ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಪೇದೆ ಮಯೂರ್‌ದು ಹತ್ಯೆಯಲ್ಲ : ಟ್ರ್ಯಾಕ್ಟರ್ ಟ್ರಾಲಿ ತುಂಡಾಗಿ ಮೇಲೆ ಹರಿದು ಸಾವು: ಬಿಜೆಪಿ
ಅಕ್ರಮಗಳಲ್ಲಿ ನೀವು ಪಾಲುದಾರರಾ?:
ಗ್ಯಾಂಬ್ಲಿಂಗ್, ಮಟಕಾ, ಸ್ಯಾಂಡ್ ಮೈನಿಂಗ್ ನಿಯಂತ್ರಣ ಮಾಡದಿದ್ರೆ ಕಷ್ಟಆಗುತ್ತೆ. ಮಹಾರಾಷ್ಟ್ರದವರು ಬಂದು ಕಲಬುರಗಿಯಲ್ಲಿ ರೇಡ್ ಮಾಡ್ತಾರೆ. ಬೆಳಗಾವಿ ಡಿವಿಜನ್ ನವರು ಬಂದು ಚಿಂಚೋಳಿಯಲ್ಲಿ ಮಟಕಾ ರೇಡ್ ಮಾಡ್ತಾರೆ, ಯಾಕೆ? ನಿಮಗೆ ಯೋಗ್ಯತೆ ಇಲ್ಲವಾ? ನೀವೇ ಇದರಲ್ಲಿ ಶಾಮಿಲು ಇರ್ತಿರಿ ಅಂತ ಅರ್ಥ ಎಂದು ಗುಡುಗಿದರು.
ಅಕ್ರಮ ಯಾರು ಮಾಡ್ತಾರಂತ ನಿಮಗೆ ಗೊತ್ತಿಲ್ವಾ? ನಿಮ್ಮ ದಂಧೆ ಬಂದ್ ಮಾಡಿಲ್ಲ ಅಂದ್ರೆ ಕರ್ನಾಟಕ ರಾಜ್ಯದಲ್ಲಿ ನಿಮ್ಮ ಸರ್ವಿಸ್ ನಾನು ಬಂದ್ ಮಾಡಿಸಬೇಕಾಗುತ್ತದೆ. ಬರೀ ಕಲಬುರಗಿ ಮಾತ್ರವಲ್ಲ ರಾಜ್ಯದಲ್ಲಿ ನಮ್ಮ ಸರಕಾರ ಇದೆ. ನಮ್ಮ ರಾಜ್ಯದಲ್ಲಿ ಎಲ್ಲೂ ನೀವು ಸರ್ವಿಸ್ ಮಾಡಬಾರದು ಹಾಗೆ ಮಾಡ್ತೀನಿ, ಅಕ್ಕಿ ಹೊಡೆಯೋರು, ಜೂಜು ಆಡಿಸೋರು ನಿಮಗೆ ಸಂಬಳ ಕೊಡ್ತಾರಾ ? ಇಲ್ಲಾ ಸರ್ಕಾರ ಸಂಬಳ ಕೊಡುತ್ತಾ? ಎಂದು ಪೊಲೀಸ್ ಕಾರ್ಯವೈಖರಿಗೆ ಅಸಮಾಧಾನ ಹೊರಹಾಕಿದರು.
ಅಕ್ರಮ ಮದ್ಯ ಮಾರಾಟ ಭರಾಟೆ:
ಅಪ್ರಾಪ್ತರಿಗೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲಿಯೂ ಮದ್ಯ ಮಾರಾಟ ನಡೆಯುತ್ತಿದೆ. ಜಿಲ್ಲೆಯಲ್ಲಿ ಥರ್ಡ್ ಕ್ವಾಲಿಟಿ ಲಿಕ್ಕರ್ ಹಾಗೂ ಕಳ್ಳಭಟ್ಟಿಮಾರಾಟ ಮಾಡಲಾಗುತ್ತಿರುವ ಕುರಿತು ದೂರುಗಳಿವೆ. ಆದರೆ, ಅಬಕಾರಿ ಇಲಾಖೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಚಿವರು ಪ್ರಶ್ನಿಸಿದಾಗ ಉತ್ತರಿಸಿದ ಅಧಿಕಾರಿಗಳು 300ಕ್ಕೂ ಅಧಿಕ ಕೇಸುಗಳು ದಾಖಲಿಸಲಾಗಿದೆ ಎಂದು ಉತ್ತರಿಸಿದರು.
ಜಿಲ್ಲೆಯಲ್ಲಿ ವೈಶ್ಯವಾಟಿಕೆ ನಡೆಯುತ್ತಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯರು ಹಾಗೂ ಮಹಿಳೆಯರು ಕಾಣೆಯಾಗುತ್ತಿರುವ ಕುರಿತು ವರದಿಗಳಿವೆ. ಈ ಬಗ್ಗೆ ಮಾಧ್ಯಮಗಳು ಕೂಡಾ ವರದಿ ಮಾಡಿವೆ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.
ಕ್ಲಬ್‌ಗಳಲ್ಲಿ ಅಕ್ರಮ- ದಾಳಿ ಮಾಡಿ:
ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ ಮಾತನಾಡಿ, ನಗರದಲ್ಲಿ 22 ಕ್ಲಬ್‌ಗಳು ಇವೆ. ಇವು ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವೆ ಎಂದು ಪಟ್ಟಿಮಾಡಿ. ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ನಾನೇ ಮಾಹಿತಿ ಕೊಡುತ್ತೇನೆ. ಅಂತಹ ಕ್ಲಬ್‌ಗಳ ಮೇಲೆ ದಾಳಿ ಮಾಡಿ ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ. ಅಕ್ರಮ ಚಟುವಟಿಕೆ ನಡೆಸುವ ಯಾವ ಕ್ಲಬ್ ಕೂಡಾ ನಗರ ವ್ಯಾಪ್ತಿಯಲ್ಲಿ ಇರಬಾರದು ಎಂದು ಡಿಸಿಪಿ ಶ್ರೀನಿವಾಸಲುಗೆ ಡಾ.ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮರಳು ಮಾಫಿಯಾಗೆ ಬಲಿಯಾದ ಪೊಲೀಸ್ ಪೇದೆ ಮನೆಗೆ ಸಚಿವ ಪ್ರಿಯಾಂಕ ಖರ್ಗೆ ಭೇಟಿ
ಸಭೆಯಲ್ಲಿ ಜಿಪಂ ಸಿಇಓ ಭನ್ವರ್ ಸಿಂಗ್ ಮೀನಾ, ನಗರ ಪೊಲೀಸ್ ಕಮೀಷನರ್, ಆರ್. ಚೇತನ್, ಪ್ರಭಾರಿ ಎಡಿಸಿ ರಾಚಪ್ಪ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸ್ಪಿ ಇಶಾಪಂತ್, ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಎಸಿಪಿ ದೀಪನ್ ಎನ್ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಯಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಪೊಲೀಸ್ ಆಯುಕ್ತರು, ಜಿಲ್ಲಾ ಎಸ್ಪಿಗೆ ಸಚಿವ ಪ್ರಿಯಾಂಕ್ ನೀಡಿದ ಖಡಕ್ ಸೂಚನೆಗಳು
1) ಪೊಲೀಸ್ ಠಾಣೆಲ್ಲಿ ಬೇರು ಬಿಟ್ಟಸಿಬ್ಬಂದಿ ಹಾಗೂ ರೈಟರ್ಸ್‌ಗಳನ್ನು ವರ್ಗ ಮಾಡಿ
2) ಅಕ್ರಮ ಚಟುವಟಿಕೆ ನಿಲ್ಲಬೇಕು, ಖಡಕ್ ಕ್ರಮ ಕೈಗೊಳ್ಳಲೇಬೇಕು
3) ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ಇಲಾಖೆ ತನಿಖೆಗಳನ್ನು ಪೂರ್ಣಗೊಳಿಸಬೇಕು
4) ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹೆಚ್ಚಾಗಿ ನಡೆಯುತ್ತಿದೆ. ಈ ಕೂಡಲೇ ಕ್ರಮ ಕೈಗೊಳ್ಳಬೇಕು
5) ಯೂನಿವರ್ಸಿಟಿ, ಅಶೋಕ್ ನಗರ ಠಾಣೆಗಳು ವಿವಾದಿತ ಸಿವಿಲ್ ಕೇಸ್‌ಗಳ ಸೆಟಲ್‌ಮೆಂಟ್ ಅಡ್ಡಾಗಳಾಗದಂತೆ ಎಚ್ಚರವಹಿಸಿ
6) ಅಧಿಕಾರಿಗಳು ಬೀಟ್‌ಗೆ ಹೋಗುವುದಿಲ್ಲ ಎಂದು ದೂರುಗಳು ಬಂದಿವೆ, ತಕ್ಷಣ ಕ್ರಮ ಕೈಗೊಳ್ಳಿ
7) ಅಕ್ರಮ ಮರಳು ಸಾಗಾಟ ಸಂಪೂರ್ಣ ನಿಲ್ಲಬೇಕು
8) ಯಾರ ವಿರುದ್ಧ ಗಡಿಪಾರು ಆದೇಶಗಳು ಇವೆಯೋ ಅವುಗಳನ್ನು ಹಾಗೆ ಮುಂದುವರಿಸಿ
9) ಸರ್ಕಾರದ ಬಗ್ಗೆ ತಪ್ಪು ಮಾಹಿತಿ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಕೋಮು ಗಲಭೆ ಸೃಷ್ಟಿಸುವವರನ್ನು ಪತ್ತೆ ಮಾಡಿ.
10) ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಿ ಸುಳ್ಳು ಸುದ್ದಿ ಹರಡುವವರ ವಿರುದ್ದ ತೀಕ್ಷ$್ಣ ಕಾನೂನು ಕ್ರಮ ಕೈಗೊಳ್ಳಿ
11) ಗೋವು ರಕ್ಷಕರು ಎಂದು ಹೇಳಿಕೊಂಡು ಕೋಮುಗಲಭೆ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ