Asianet Suvarna News Asianet Suvarna News

ಪೇದೆ ಮಯೂರ್‌ದು ಹತ್ಯೆ​ಯಲ್ಲ : ಟ್ರ್ಯಾಕ್ಟರ್ ಟ್ರಾಲಿ ತುಂಡಾಗಿ ಮೇಲೆ ಹರಿದು ಸಾವು: ಬಿಜೆ​ಪಿ

ಜೇವರ್ಗಿ ತಾಲೂಕಿನ ಹುಲ್ಲೂರ್‌, ನೆಲೋಗಿ ಸುತ್ತಮುತ್ತಲಿನ ಮರಳುಗಾರಿಕೆ ಅಕ್ರಮ ವಿಚಾರ ಕಾಂಗ್ರೆಸ್‌, ಬಿಜೆಪಿ ನಡುವಿನ ವಾಕ್ಸಮರಕ್ಕೆ ಮುನ್ನುಡಿ ಬರೆದಿದೆ.

PC mayur death to illegal sand transport at hubballi bjp statement here rav
Author
First Published Jun 22, 2023, 5:17 AM IST

ಕಲಬುರಗಿ (ಜೂ.22) ಜೇವರ್ಗಿ ತಾಲೂಕಿನ ಹುಲ್ಲೂರ್‌, ನೆಲೋಗಿ ಸುತ್ತಮುತ್ತಲಿನ ಮರಳುಗಾರಿಕೆ ಅಕ್ರಮ ವಿಚಾರ ಕಾಂಗ್ರೆಸ್‌, ಬಿಜೆಪಿ ನಡುವಿನ ವಾಕ್ಸಮರಕ್ಕೆ ಮುನ್ನುಡಿ ಬರೆದಿದೆ.

ಹುಲ್ಲೂರ್‌ ಚೆಕ್‌ಪೋಸ್ಟ್‌ ಬಳಿಯ ನಾರಾಯಣಪುರದಲ್ಲಿ ಜೂ.15​ರಂದು ರಾತ್ರಿ ಹುಲ್ಲೂರ್‌ ಚೆಕ್‌ಪೋಸ್ಟ್‌ ಬಳಿ ನಡೆದದ್ದು ಪೇದೆ ಹತ್ಯೆಯಲ್ಲ, ವೇಗದಲ್ಲಿದ್ದ ಟ್ರಾಕ್ಟರ್‌ ಟ್ರಾಲಿ ತುಂಡಾಗಿದ್ದರಿಂದ ಪೇದೆ ಮೇಲೆ ಹರಿದು ಸಾವು ಸಂಭವಿಸಿದೆ.

ನೆಲೋಗಿ ಪೇದೆ ಮಯೂರ್‌ ಸಾವಿನ ಪ್ರಕರಣದಲ್ಲಿ ಸುಖಾಸುಮ್ಮನೆ ಬಿಜೆಪಿ ಕಾರ್ಯಕರ್ತ ಸೈಬಣ್ಣ ಕರಜಗಿ ಎಂಬುವವರ ಹೆಸರು ಎಳೆದು ತರಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ ಎಂಬ ಬಲವಾದ ಶಂಕೆಗಳಿವೆ. ತಕ್ಷಣ ಸರ್ಕಾರ ಪ್ರಕರಣದ ಸತ್ಯಾಸತ್ಯತೆ ಹೊರಗೆಳೆದು ತರಲು ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯಾ ಗುತ್ತೇದಾರ್‌, ಜಿಲ್ಲಾಧ್ಯಕ್ಷ ಶಿವರಾಜ ರದ್ದೇವಾಡಗಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ್‌, ಶಶಿಲ್‌ ನಮೋಶಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮರಳು ಮಾಫಿಯಾಗೆ ಬಲಿಯಾದ ಪೊಲೀಸ್ ಪೇದೆ‌ ಮನೆಗೆ‌ ಸಚಿವ ಪ್ರಿಯಾಂಕ ಖರ್ಗೆ ಭೇಟಿ

ಮರಳಿನ ಟ್ರ್ಯಾಕ್ಟರ್‌ ಚಲಾಯಿಸಿದ್ದು ಸಿದ್ದಪ್ಪ ಕರಜಗಿ. ಟ್ರ್ಯಾಕ್ಟರ್‌ ಸೈಬಣ್ಣ ಹೆಸರಲ್ಲಿದೆ. ಹಳ್ಳಿಯಲ್ಲಿ ಸಹೋದರರು ಪಾಲಾದಾಗ ಮನೆ, ಹೊಲ, ಟ್ರ್ಯಾಕ್ಟರ್‌ ಹೀಗೆ ಅನೇಕ ವಸ್ತುಗಳು ಹಂಚಲಾಗುತ್ತದೆ. ಆ ರೀತಿಯಲ್ಲಿ ಟ್ರ್ಯಾಕ್ಟರ್‌ ಸೈಬಣ್ಣ ಹೆಸರಲ್ಲಿದ್ದರೂ ಸಿದ್ದಪ್ಪನ ಪಾಲಿಗೆ ಬಂದಿತ್ತು. ಅದೇ ಟ್ರ್ಯಾಕ್ಟರ್‌ ಬಳಸಿ ಸಿದ್ದಪ್ಪ ಮರಳು ತುಂಬಿಕೊಂಡು ಹೊರಟಿದ್ದಾನೆ. ಆತ ಮರಳನ್ನು ಮನೆ ಬಳಕೆಗೆ ತಗೆದುಕೊಂಡು ಹೊರಟಿದ್ದನೋ, ಮತ್ಯಾವ ಉದ್ದೇಶವೋ ಎಂಬುದು ಪೊಲೀಸರು ಪತ್ತೆ ಹಚ್ಚಬೇಕು.

ವಿನಾಕಾರಣ ಈ ಪ್ರಕರಣದಲ್ಲಿ ಟ್ರ್ಯಾಕ್ಟರ್‌ ಇವರ ಹೆಸರಲ್ಲಿದೆ ಎಂದು ಸೈಬಣ್ಣನನ್ನು ಆಲಮೇಲ್‌ದಿಂದ ಬಂಧಿಸಿ ತಂದು ಮಂದೇವಾಲ- ಜೇರಟಗಿ ನಡುವೆ ನಿಲ್ಲಿಸಿ ಕಣ್ಣಿಗೆ ಪಟ್ಟಿಕಟ್ಟಿಪೊಲೀಸ್‌ ಅಧಿಕಾರಿಗಳು ನಡೆಸಿರುವ ಶೂಟ್‌ಔಟ್‌ ಪ್ರಸಂಗ ಅಮಾನವೀಯ, ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ ಹೊರ ಬರಬೇಕಷ್ಟೆಎಂದರು.

ಪೊಲೀಸ್‌ ಕಸ್ಟಡಿಯಲ್ಲಿರುವ ಸೈಬಣ್ಣ ಆಸ್ಪತ್ರೆಯಲ್ಲಿದ್ದಾರೆ. ಅವ​ರನ್ನು ಭೇಟಿ ಮಾಡಿ ಬಂದಿದ್ದೇವೆ. ಆತ ನಡೆದ ಸಂಗತಿ, ತನ್ನ ವಿರುದ್ಧ ನಡೆದಿರುವ ಷಡ್ಯಂತ್ರ ವಿವರಿಸಿ ಕಣ್ಣೀರು ಹಾಕಿದ್ದಾನೆ. ಈಗ ಪೊಲೀಸರು ಕಾಂಗ್ರೆಸ್ಸಿಗರ ಮಾತು ಕೇಳಿ ಈತನನ್ನೇ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆಂದು ಬಿಜೆಪಿ ಮುಖಂಡರು ದೂರಿದರು.

ಸೈಬಣ್ಣ ಬಂಧಿಸುವಾಗ ಪೊಲೀಸರು ಆತನನ್ನ ತಪಾಸಣೆ ಮಾಡಿರಲಿಲ್ಲವೆ?

ಆರೋಪಿ ಸೈಬಣ್ಣ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಗುಂಡು ಹೊಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆತನನ್ನ ಆಲ್‌ಮೇಲ್‌ನಲ್ಲಿ ಬಂಧಿಸಿದ್ದಾರೆ. ನಾಲ್ಕಾರು ಪಿಎಸ್‌ಐಗಳು, ಪೇದೆಗಳು ಇದ್ದರೂ ಬಂಧನದ ನಂತರ ಸೈಬಣ್ಣ ತಪಾಸಣೆ ಪೊಲೀಸರು ಮಾಡಲಿಲ್ಲವೆ? ಆತನ ಬಲಿ ಚಾಕು ಹೇಗೆ ಬರಲು ಸಾಧ್ಯ? ಯಡ್ರಾಮಿ ಪಿಎಸ್‌ಐ ಬಸವರಾಜ ಎಂಬುವವರಿಗೆ ಸೈಬಣ್ಣ ಚಾಕುವಿನಿಂದ ಗಾಯ ಮಾಡಿದ ಎಂಬುದೂ ಸಹ ಪೊಲೀಸರೇ ಸೃಷ್ಟಿಸಿದ ಕಥೆ. ಬಳಿ ಯಾವುದೇ ಮಾರಕಾಸ್ತ್ರ ಇರದವನ ಸುತ್ತ ಷಡ್ಯಂತ್ರ ರೂಪಿಸಿ ಬಳಿ ಹಾಕಿದ್ದಾರೆಂದು ಶಿವರಾಜ ರದ್ದೇವಾಡಗಿ, ಶಶಿಲ್‌ ನಮೋಶಿ ದೂರಿದರು. ಪೇದೆ ಮಯೂರ್‌ ಸಾವು ತಮಗೂ ನೋವು ತಂದಿದೆ. ಘಟನೆ ನಡೆಯಬಾರದಿತ್ತು. ಆದರೆ ಇಡೀ ಘಟನೆ, ನಂತರದ ಬೆಳವಣಿಗೆಗಳೆಲ್ಲವೂ ಶಂಕಾಸ್ಪದವಾಗಿವೆ. ಹೀಗಾಗಿ ನ್ಯಾಯಾಂಗ ತನಿಖೆಯಿಂದ ಸತ್ಯ ಏನೆಂದು ತಿಳಿ​ಯ​ಲಿದೆ. ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತೇವೆ. ಈ ರೀತಿ ಕಾಂಗ್ರೆಸ್‌ ಸೇಡಿನ ರಾಜಕಾರಣ ಮಾಡುತ್ತಿರೋದು ಸರಿಯಲ್ಲ ಎಂದು ಮಾಲೀಕಯ್ಯಾ ಗುತ್ತೇದಾರ್‌ ಹೇಳಿದರು.

ಧಾರವಾಡ: ಪಾಲಿಕೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ರಣತಂತ್ರ

ಬಿಜೆಪಿ ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌, ಓಬಿಸಿ ರಾಜ್ಯ ಉಪಾಧ್ಯಕ್ಷೆ ಶೋಭಾ ಬಾಣಿ, ಧರ್ಮಣ್ಣ ಇಟಗಾ, ಸುಭಾಸ ಗುತ್ತೇದಾರ್‌, ಚಂದು ಪಾಟೀಲ್‌ ಸೇರದಂತೆ ಬಿಜೆಪಿ ಸ್ಥಳೀಯ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.

Follow Us:
Download App:
  • android
  • ios