ಗಣಿಧಣಿ ಜನಾರ್ದನ ರೆಡ್ಡಿ ರಕ್ಷಣೆಗೆ ಮುಂದಾಯ್ತಾ ಕರ್ನಾಟಕ ಸರ್ಕಾರ..?

ಹೊಸದಾಗಿ ಜನಾರ್ದನ ರೆಡ್ಡಿಗೆ ಸೇರಿದ 219 ಆಸ್ತಿಯನ್ನ  ಸಿಬಿಐ ಪತ್ತೆ ಮಾಡಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಆಸ್ತಿಗಳು ಪತ್ತೆಯಾಗಿವೆ.

Is Government of Karnataka Protect Janardhana Reddy grg

ಬಳ್ಳಾರಿ(ಜ.05): ಮಾಜಿ ಸಚಿವ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ‌ವಿರುದ್ಧ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ. ಹೊಸದಾಗಿ ಜನಾರ್ದನ ರೆಡ್ಡಿಗೆ ಸೇರಿದ 219 ಆಸ್ತಿಯನ್ನ  ಸಿಬಿಐ ಪತ್ತೆ ಮಾಡಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಆಸ್ತಿಗಳು ಪತ್ತೆಯಾಗಿವೆ.

ಆಸ್ತಿಗಳ ಜಪ್ತಿಗೆ ಅನುಮತಿ ಕೋರಿ ಆಗಸ್ಟ್ 30 ರಂದು ಸಿಬಿಐ ಅರ್ಜಿ ಸಲ್ಲಿಸಿತ್ತು. ಆದ್ರೆ, ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಸಿಬಿಐ ಅರ್ಜಿ ಸಲ್ಲಿಸಿರುವುದನ್ನ ತಿಳಿದು ಆಸ್ತಿ ಮಾರಾಟ ಮಾಡಲು ಜನಾರ್ದನ ರೆಡ್ಡಿ ಮುಂದಾಗಿದ್ದಾರೆ ಅಂತ ತಿಳಿದು ಬಂದಿದೆ. 

Ballari: ಜನಾರ್ಧನ ರೆಡ್ಡಿಯ ಕೆಆರ್‌ಪಿಪಿ ಪಕ್ಷದ ಬಾವುಟ ಲೋಕಾರ್ಪಣೆ: ಪ್ರಚಾರ ಕಾರ್ಯ ಆರಂಭಿಸಿದ ಲಕ್ಷ್ಮೀ ಅರುಣಾ

ಕರ್ನೂಲ್, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಇರುವ ಆಸ್ತಿಗಳ ಮಾರಾಟಕ್ಕೆ ಜನಾರ್ದನ ರೆಡ್ಡಿ ಯತ್ನಿಸಿದ್ದಾರೆ. ಜಪ್ತಿಗೆ ಅನುಮತಿ ನೀಡುವ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಿಬಿಐ ಅರ್ಜಿ ಸಲ್ಲಿಸಿದೆ. ಅಕ್ರಮ ಗಣಿಗಾರಿಕೆಯಿಂದ ಆಸ್ತಿ ಸಂಪಾದನೆ ಮಾಡಲಾಗಿದೆ ಎಂಬುದು ಸಿಬಿಐ ಆರೋಪವಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಸುಮಾರು 65 ಕೋಟಿ ಮೌಲ್ಯದ ಆಸ್ತಿಗಳನ್ನ ಸಿಬಿಐ ಪತ್ತೆ ಮಾಡಿದೆ. 

Latest Videos
Follow Us:
Download App:
  • android
  • ios