* ರೋಹಿಣಿ ಸಿಂಧೂರಿ ವಿರುದ್ಧ ಡಿ. ರೂಪಾ ಮಾತು* ಐಎಎಸ್ ಮತ್ತು ಐಪಿಎಎಸ್ ಜಟಾಪಟಿ* ರೋಹಿಣಿಯವರಿಂದ ನೈತಿಕ ಪತನ ಎಂದ ಡಿ ರೂಪಾ* ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ನಡುವೆ ಕಿತ್ತಾಟ ನಡೆದಿತ್ತು
ಬೆಂಗಳೂರು( ಜೂ.23) ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ದೊಡ್ಡ ಸುದ್ದಿಯಾಗಿತ್ತು. ಈಗ ಈ ಪ್ರಕರಣ ಐಎಎಸ್ ವರ್ಸಸ್ ಐಪಿಎಸ್ ರೂಪ ಪಡೆದುಕೊಂಡಿದೆ.
ಕೋರೋನ ಹಾಗು ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ.ಕಟ್ಟುವುದನ್ನು ಮುಂದೂಡಲೂಬಹುದಿತ್ತು ಎಂದು ಐಪಿಎಸ್ ಅಧಿಕಾರಿ ಡಿ ರೂಪಾ ಟ್ವೀಟ್ ಮಾಡಿ ರೋಹಿಣಿ ಅವರಿಗೆ ಠಕ್ಕರ್ ನೀಡಿದ್ದಾರೆ.
ರೋಹಿಣಿ ವಿರುದ್ಧ ಸಾರಾ ಕಾನೂನು ಸಮರ, ಯಾವ ಪಾಯಿಂಟ್ ಆಧಾರ?
ಲ್ಯಾಂಡ್ ಮಾಫಿಯಾ ನಡೆಯುತ್ತಿದೆ, ಮೈಸೂರಿಗೆ ಮಾರಕವಾಗಿದೆ ಎಂದು ಹೇಳಿದ್ದ ರೋಹಿಣಿ ಸಿಂಧೂರಿ ಸಾರಾ ಮಹೇಶ್ ಮೇಲೆಯೂ ಆರೋಪ ಮಾಡಿದ್ದರು. ಇಘ ಸಾರಾ ಮಹೇಶ್ ರೋಹಿಣಿ ವಿರುದ್ಧ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್ ನಡುವೆ ವಾರ್ ನಡೆದಿತ್ತು. ಇಬ್ಬರೆ ನಡುವಿನ ಗೊಂದಲ ಅಂತ್ಯಪಡಿಸಲಾಗದ ಸರ್ಕಾರ ಇಬ್ಬರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿತ್ತು.
