ಹೆಚ್ಚಿನ ಹಣ ವಸೂಲಿ: ಆಸ್ಪತ್ರೆಗಳಿಗೆ ಅಲೋಕ್‌ ಖಡಕ್‌ ಎಚ್ಚರಿಕೆ!

ಹೆಚ್ಚಿನ ಹಣ ವಸೂಲಿ: ಆಸ್ಪತ್ರೆಗಳಿಗೆ ಅಲೋಕ್‌ ಖಡಕ್‌ ಎಚ್ಚರಿಕೆ| ಕೊರೋನಾ ಸೋಂಕಿತರಿಗೆ ಶೇ.50ರಷ್ಟುಬೆಡ್‌ ನೀಡದ ಆಸ್ಪತ್ರೆಗೆ ನೋಟಿಸ್‌

IPS Officer Alok Kumar Warns Private Hospitals Not To Take More Money For Treatment

ಬೆಂಗಳೂರು(ಜು.28): ಒಂದು ಕಡೆ ಸರ್ಕಾರ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಹರಸಾಹಸ ಪಡುತ್ತಿದ್ದರೆ, ಇತ್ತ ಖಾಸಗಿ ಆಸ್ಪತ್ರೆಗಳ ನಿಯಮ ಉಲ್ಲಂಘನೆ, ಹೆಚ್ಚು ದರ ವಸೂಲಿ ಮುಂದುವರೆದಿದೆ.

ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್‌ ಹಾಗೂ ಐಎಎಸ್‌ ಅಧಿಕಾರಿ ಗೌರವ್‌ ಗುಪ್ತ ನೇತೃತ್ವದ ತಂಡ ಸೋಮವಾರ ನಗರದ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದೆ.

ಐಜಿಪಿ ರೂಪಾ ಖಡಕ್‌ ವಾರ್ನಿಂಗ್‌ ಬೆಚ್ಚಿದ ಖಾಸಗಿ ಆಸ್ಪತ್ರೆ: 24 ಲಕ್ಷ ರೂ. ವಾಪಸ್!

ಕೊರೋನಾಗೆ ಚಿಕಿತ್ಸೆಗೆ ಸರ್ಕಾರ ರೂಪಿಸಿರುವ ನಿಯಗಳನ್ನು ಪಾಲನೆ ಮಾಡದ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಬಿಬಿಎಂಪಿಯಿಂದ ಶೋಕಾಸ್‌ ನೀಡಲಾಗಿದೆ ಎಂದು ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

ಮಣಿಪಾಲ್‌ ಆಸ್ಪತ್ರೆ, ಕೆ.ಜಿ.ಹಳ್ಳಿ ಸಮೀಪ ಇರುವ ಅಂಬೇಡ್ಕರ್‌ ಆಸ್ಪತ್ರೆ, ಅಶೋಕ್‌ನಗರಲ್ಲಿರುವ ಸೇಂಟ್‌ ಫೀಲೋಮಿನಾ, ಚಿನ್ಮಯ್‌ ಆಸ್ಪತ್ರೆಗಳಿಗೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಕೆಲವೊಂದು ಆಸ್ಪತ್ರೆಯಲ್ಲಿ ಸರ್ಕಾರದ ನಿಯಮದಂತೆ ಹಾಸಿಗೆಗಳನ್ನು ನೀಡದಿರುವುದು ಕಂಡು ಬಂದಿದೆ.

ಪರಿಶೀಲನೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅಲೋಕ್‌ ಕುಮಾರ್‌, ಆಸ್ಪತ್ರೆಗಳಲ್ಲಿ ಶೇ.50ರಷ್ಟುಹಾಸಿಗೆಯನ್ನು ಕೊರೋನಾ ಚಿಕಿತ್ಸೆಗೆ ಕಾಯ್ದಿರಿಸುವಂತೆ ಹಾಗೂ ಸರ್ಕಾರ ನಿಗದಿಪಡಿಸಿದಷ್ಟುಮಾತ್ರ ಹಣ ಪಡೆಯುವಂತೆ ಸರ್ಕಾರ ಹೇಳಿದೆ. ಆದ್ರೆ ಸೇಂಟ್‌ ಫಿಲೋಮಿನಾ, ಚಿನ್ಮಯ್‌, ಮಣಿಪಾಲ್‌ ಆಸ್ಪತ್ರೆಗಳಲ್ಲಿ ಸರ್ಕಾರದ ನಿಯಮ ಪಾಲನೆಯಾಗಿಲ್ಲ. ಈ ಆಸ್ಪತ್ರೆಗಳಿಗೆ ಶೋಕಾಸ್‌ ನೀಡಲಾಗಿದೆ ಎಂದು ತಿಳಿಸಿದರು.

ಕ್ವಾರೆಂಟೈನ್‌ನಲ್ಲಿರುವ ಪೊಲೀಸರಿಗೆ ಯೋಗ ಟೀಚರ್ ಆದ IPS ಅಲೋಕ್ ಕುಮಾರ್

ಆಸ್ಪತ್ರೆಗಳಲ್ಲಿ ಅಧಿಕಾರಿಗಳ ಮೊಬೈಲ್‌ ಸಂಖ್ಯೆ!

ಸೇಂಟ್‌ ಫಿಲೋಮಿನಾ, ಚಿನ್ಮಯ್‌ ಹಾಗೂ ಮಣಿಪಾಲ್‌ ಆಸ್ಪತ್ರೆಗಳಲ್ಲಿ ಎಡಿಜಿಪಿ ಅಲೋಕ್‌ ಕುಮಾರ್‌, ಹಿರಿಯ ಐಎಎಸ್‌ ಅಧಿಕಾರಿ ಗೌರವ್‌ ಗುಪ್ತ ಹಾಗೂ ಬಿಬಿಎಂಪಿ ನೋಡಲ್‌ ಅಧಿಕಾರಿಯ ಮೊಬೈಲ್‌ ಸಂಖ್ಯೆಯನ್ನು ಪ್ರದರ್ಶಿಸಲಾಗಿದೆ.

ಪೊಲೀಸರಿಗೆ ಧೈರ್ಯ ತುಂಬಿದ ಅಲೋಕ್‌ ಕುಮಾರ್‌!

ಈ ಬಗ್ಗೆ ಪ್ರತಿಕ್ರಿಯಿಸಿದ ಅಲೋಕ್‌ ಕುಮಾರ್‌, ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಹಾಸಿಗೆಗಳು ಇಲ್ಲ ಎಂದು ಸುಳ್ಳು ಮಾಹಿತಿ ನೀಡಿದರೆ ಅಥವಾ ಹೆಚ್ಚಿನ ಹಣ ವಸೂಲಿ ಮಾಡಿದರೆ ಕೂಡಲೇ ನಮ್ಮನ್ನು ಸಂಪರ್ಕ ಮಾಡಬಹುದು. ಆಗಾಗ್ಗೆ ನಾವು ಕೂಡ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಕೆಲ ಸಾರ್ವಜನಿಕರು ಮೊಬೈಲ್‌ ಸಂಖ್ಯೆ ದುರ್ಬಳಕೆ ಮಾಡಿಕೊಂಡು ಆಸ್ಪತ್ರೆ ಅವರ ಬಳಿ ಗಲಾಟೆ ಮಾಡುವಂತಹದ್ದು, ಕೇಳಿ ಬರುತ್ತಿದೆ. ಆಸ್ಪತ್ರೆಯವರ ಬಳಿ ಸಾರ್ವಜನಿಕರು ಸಮಾಧಾನದಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios